Breaking News

ರಾಷ್ಟ್ರೀಯ

ಬಿಡುವು ಕೊಟ್ಟು ಬಿದ್ದ ಮಳೆಗೆ ರಾಜ್ಯ ತತ್ತರ: ಹಾಳಾಯ್ತು ಬೆಳೆ, ಮನೆಗಳಿಗೆ ನುಗ್ಗಿದ ಚರಂಡಿ ನೀರು

ಕೆರೆಗಳು ಕೋಡಿ ಬಿದ್ದು ಹರಿಯುತ್ತಿವೆ.. ಚಿಕ್ಕ ನದಿಯೇ ಭೋರ್ಗರೆಯುತ್ತಿದೆ.. ರಸ್ತೆಗಳಿಗೂ ನೀರು ನುಗ್ಗಿದೆ, ಮನೆ ಮುಂದೆಯೇ ನೀರು ಬಂದು ನಿಂತಿದೆ.. ವರುಣನ ಅಬ್ಬರಕ್ಕೆ ಎಲ್ಲವೂ ಅಲ್ಲೋಲ ಕಲ್ಲೋಲ ಆಗಿದೆ. ಬೆಳಗಾವಿಗೆ ಮತ್ತೆ ಎದುರಾಯ್ತು ಜಲಕಂಟಕ! ಭಯ.. ಮತ್ತದೇ ಭಯ.. ನೆರೆ ನರಕದಿಂದ ಪಾರಾಗಿ ತಿಂಗಳ ತುಂಬೋ ಮೊದಲೇ, ಬೆಳಗಾವಿ ಜನರಲ್ಲಿ ಮತ್ತೆ ಪ್ರವಾಹ ಆತಂಕ ಕಾಡ್ತಿದೆ. ಯಾಕಂದ್ರೆ, ಕಳೆದೆರಡು ದಿನದಿಂದ ಸುರೀತಿರೋ ಮಳೆಯಿಂದಾಗಿ, ಮಲಪ್ರಭಾ ನದಿ ಅಪಾಯದ ಮಟ್ಟಕ್ಕೇರಿದೆ. ಕಿತ್ತೂರಿನ …

Read More »

ನಟಿ ಸಂಜನಾ ಆಪ್ತ ಶೇಖ್ ಫೈಜಲ್ ಮನೆ ಮೇಲೆ ಸಿಸಿಬಿ ದಾಳಿ

ಬೆಂಗಳೂರು: ಡ್ರಗ್ಸ್ ಮಾರಾಟ ಜಾಲದಲ್ಲಿ ಭಾಗಿಯಾದ ಆರೋಪದಡಿ ಬಂಧಿಸಲಾಗಿರುವ ನಟಿ ಸಂಜನಾ ಗಲ್ರಾನಿ ಆಪ್ತ ಎನ್ನಲಾದ ಶೇಖ್ ಫೈಜಲ್ ಎಂಬಾತನ ಮನೆ ಮೇಲೆ ಸಿಸಿಬಿ ಪೊಲೀಸರು ಬುಧವಾರ ದಾಳಿ ಮಾಡಿದರು. ಜಯನಗರದಲ್ಲಿರುವ ಮನೆಗೆ ಹೋಗಿದ್ದ ಪೊಲೀಸರು, ಗಂಟೆಗಟ್ಟಲೇ ಪರಿಶೀಲನೆ ನಡೆಸಿದರು. ಫೈಜಲ್ ಮನೆಯಲ್ಲಿ ಇರಲಿಲ್ಲ. ಸಹೋದರ ಹಾಗೂ ಪತ್ನಿ-ಮಕ್ಕಳು ಮಾತ್ರ ಇದ್ದರು. ಶೋಧ ಮುಗಿಸಿದ ಪೊಲೀಸರು, ಫೈಜಲ್ ಸಹೋದರನನ್ನು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆತಂದಿದ್ದರು. ಫೈಜಲ್ ಬಗ್ಗೆ ಮಾಹಿತಿ ಸಂಗ್ರಹಿಸಿ …

Read More »

ಪ್ಲಾಸ್ಮಾ ಥೆರಪಿಯಿಂದ ಪ್ರಯೋಜನವಿಲ್ಲ: ಅಧ್ಯಯನದಲ್ಲಿ ಬಯಲು!

ನವದೆಹಲಿ : ಕೊರೋನಾ ಸೋಂಕಿನಿಂದ ಉಂಟಾಗುವ ಸಾವು ತಡೆಯುವಲ್ಲಿ ಅಥವಾ ಸಾಮಾನ್ಯ ಸೋಂಕು ತೀವ್ರ ಪ್ರಮಾಣಕ್ಕೆ ಹೋಗುವುದನ್ನು ನಿಲ್ಲಿಸುವಲ್ಲಿ ಪ್ಲಾಸ್ಮಾ ಥೆರಪಿಯಿಂದ ವಿಶೇಷ ಪ್ರಯೋಜನವೇನೂ ಆಗುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ದೇಶದ 39 ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ಚಿಕಿತ್ಸೆಯ ಪ್ರಯೋಜನದ ಬಗ್ಗೆ ಏ.22ರಿಂದ ಜು.12ರವರೆಗೆ ಐಸಿಎಂಆರ್‌ ತಂಡ ಅಧ್ಯಯನ ನಡೆಸಿತ್ತು. ಆಸ್ಪತ್ರೆಗೆ ದಾಖಲಾದ 464 ಮಂದಿ ಸಾಮಾನ್ಯ ಪ್ರಮಾಣದ …

Read More »

ನಿಯಮ ಮೀರಿ ಹೆಚ್ಚು ನೆರವಿಗೆ ಕೇಂದ್ರಕ್ಕೆ ರಾಜ್ಯ ಮನವಿ

ಬೆಂಗಳೂರು : ರಾಜ್ಯದಲ್ಲಿ ನೆರೆಯಿಂದ 8,071 ಕೋಟಿ ರು. ಅಂದಾಜು ಹಾನಿಯಾಗಿದ್ದು, ಎಸ್‌ಡಿಆರ್‌ಎಫ್‌ ನಿಯಮಗಳ ಅನ್ವಯ 628.7 ಕೋಟಿ ರು. ಅನುದಾನ ಮಾತ್ರ ಬರುತ್ತದೆ. ಇದು ಸಾಕಾಗುವುದಿಲ್ಲ. ಈ ಬಾರಿ ಹೆಚ್ಚುವರಿ ಹಣ ಬಿಡುಗಡೆ ಮಾಡುವಂತೆ ಕೇಂದ್ರದ ನೆರೆ ಅಧ್ಯಯನ ತಂಡಕ್ಕೆ ಮನವಿ ಮಾಡಿದ್ದೇವೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ. ಅಲ್ಲದೆ, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ನೆರೆ ಹಾನಿ ನಿಯಂತ್ರಿಸಲು ಪ್ರವಾಹ ಮುನ್ಸೂಚನೆ ಹಾಗೂ ಪ್ರತಿಕ್ರಿಯೆಗಾಗಿ …

Read More »

ರಾಣಿ  ಚನ್ನಮ್ಮ ವಿಶ್ವ ವಿದ್ಯಾಲಯ ಹಿರೇಬಾಗೇವಾಡಗೆ ಸ್ಥಳಾಂತರ

ಭೂತರಾಮನಹಟ್ಟಿ, ಹಿರೇಬಾಗೇವಾಡಿ ಎರಡು ಕಡೆ ವಿವಿ ಕಾರ್ಯಚಟುವಟಿಕೆ ಹೆಚ್ಚುವರಿ ಕಟ್ಟಡಕ್ಕಾಗಿ  ಹಿರೇಬಾಗೇವಾಡಿಗೆ ಸ್ಥಳಾಂತರ ಅಭಿವೃದ್ದಿ ದೃಷ್ಠಿಯಿಂದ ಈ ನಿರ್ಧಾರ ಬೆಳಗಾವಿ: ರಾಣಿ  ಚನ್ನಮ್ಮ ವಿಶ್ವ ವಿದ್ಯಾಲಯ ಹಿರೇಬಾಗೇವಾಡಗೆ ಸ್ಥಳಾಂತರ ವಿಚಾರವಾಗಿ  ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ  ಸತೀಶ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ.   ಸದ್ಯ ಭೂತರಾಮನಹಟ್ಟಿಯಲ್ಲಿರುವ ವಿಶ್ವ ವಿದ್ಯಾಲಯ  ಅರಣ್ಯ ಪ್ರದೇಶದ ಜಾಗದ ಅಧೀನದಲ್ಲಿರುವುದಿಂದ ಹೆಚ್ಚುವರಿ ಕಟ್ಟಡ, ಮತ್ತೀತರ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. …

Read More »

ಯುವತಿಯರಿಬ್ಬರು ಮದುವೆ ಆಗುವ ಮೂಲಕ ಪೋಷಕರಿಗೆ ಶಾಕ್

ಪಾಟ್ನಾ: ಯುವತಿಯರಿಬ್ಬರು ಮದುವೆ ಆಗುವ ಮೂಲಕ ಪೋಷಕರಿಗೆ ಶಾಕ್ ನೀಡಿರುವ ಘಟನೆ ಬಿಹಾರದ ಬೇತಿಯಾ ಜಿಲ್ಲೆಯಲ್ಲಿ ನಡೆದಿದೆ. ಒಂದೇ ಲಿಂಗದವರು ಮದುವೆಗಳು ನಗರ ಪ್ರದೇಶಗಳಲ್ಲಿ ನಡೆದಿರೋದು ಆಗಾಗ್ಗೆ ವರದಿಯಾಗುತ್ತಿದ್ದವು. ಗ್ರಾಮೀಣ ಭಾಗದಲ್ಲಿ ಸಲಿಂಗಿಗಳ ಮದುವೆ ನೋಡಿ ಗ್ರಾಮಸ್ಥರು ಆಶ್ಚರ್ಯ ಚಕಿತರಾಗಿದ್ದಾರೆ. ಬೇತಿಯಾ ನಗರದ ಇಶರತ್ (ಪತ್ನಿ), ರಾಮನಗರದ ನಿವಾಸಿ ನಗ್ಮಾ ಖಾತೂನ್ (ಪತಿ) ಮದುವೆಯಾದ ಜೋಡಿ. ಆದ್ರೆ ಕುಟುಂಬಸ್ಥರು ಇಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. …

Read More »

T20: ಡೇವಿಡ್‌ ಮಾಲನ್‌ ನಂ.1 ಬ್ಯಾಟ್ಸ್‌ಮನ್‌

ದುಬಾೖ: ಇಂಗ್ಲೆಂಡಿನ ಡೇವಿಡ್‌ ಮಾಲನ್‌ ಟಿ20 ಕ್ರಿಕೆಟಿನ ನೂತನ ನಂಬರ್‌ ವನ್‌ ಬ್ಯಾಟ್ಸ್‌ಮನ್‌ ಆಗಿ ಮೂಡಿಬಂದಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಮಿಂಚಿದ ಮಾಲನ್‌ 4 ಸ್ಥಾನ ಮೇಲೇರಿ ಮೊದಲ ಸಲ ಅಗ್ರಸ್ಥಾನದ ಗೌರವ ಸಂಪಾದಿಸಿದರು. ಕಳೆದ ನವೆಂಬರ್‌ನಲ್ಲಿ ನಂ.2 ಎನಿಸಿದ್ದು ಮಾಲನ್‌ ಅವರ ಈವರೆಗಿನ ಅತ್ಯುತ್ತಮ ರ್‍ಯಾಂಕಿಂಗ್‌ ಆಗಿತ್ತು. ಇದರಿಂದ ಪಾಕಿಸ್ಥಾನದ ಬಾಬರ್‌ ಆಜಂ ಅವರಿಗೆ ನಂ.1 ಸ್ಥಾನ ನಷ್ಟವಾಯಿತು. ಅವರೀಗ ದ್ವಿತೀಯ ಸ್ಥಾನಕ್ಕೆ ಇಳಿದಿದ್ದಾರೆ. ದ್ವಿತೀಯ ಸ್ಥಾನದಲ್ಲಿದ್ದ ಕೆ.ಎಲ್‌. ರಾಹುಲ್‌ …

Read More »

ಗೆದ್ದು ನಂ.1 ಸ್ಥಾನ ಮರಳಿ ಪಡೆದ ಆಸೀಸ್‌

ಸೌತಾಂಪ್ಟನ್: ಇಂಗ್ಲೆಂಡ್‌ ಎದುರಿನ ಅಂತಿಮ ಟಿ20 ಪಂದ್ಯವನ್ನು 5 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಆಸ್ಟ್ರೇಲಿಯ ತನ್ನ ಸರಣಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಂಡಿತು. ಜತೆಗೆ ನಂ.1 ಗೌರವವನ್ನೂ ಮರಳಿ ಸಂಪಾದಿಸಿತು. ಸತತ 2 ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡ ಬಳಿಕ ಇಂಗ್ಲೆಂಡ್‌ ಟಿ20 ತಂಡ ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ನೆಗೆದಿತ್ತು. ಆದರೀಗ 3ನೇ ಪಂದ್ಯವನ್ನು ಜಯಿಸುವ ಮೂಲಕ ಕಾಂಗರೂ ಪಡೆ ಮತ್ತೆ ನಂ.1 ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಯಿತು. ಸರಣಿಯನ್ನು ಕ್ಲೀನ್‌ಸ್ವೀಪ್‌ …

Read More »

2016ರ ಬಳಿಕ ಆರ್‌ಸಿಬಿ ತಂಡ ಸಮತೋಲಿತವಾಗಿದೆ: ವಿರಾಟ್ ಕೊಹ್ಲಿ

ದುಬೈ: ಐಪಿಎಲ್ 2016ರ ಬಳಿಕ ಪ್ರಸ್ತುತ ಬೆಂಗಳೂರು ತಂಡ ಅತ್ಯಂತ ಸಮತೋಲಿತ ತಂಡವಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಬೆಂಗಳೂರು ತಂಡ 2016ರ ಫೈನಲ್‌ ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿತ್ತು. ಈ ಬಾರಿ ಯುವ ಮತ್ತು ಅನುಭವಿ ಆಟಗಾರರ ಉತ್ತಮ ಸಂಯೋಜನೆ ಇದ್ದು, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಬೇಕಾದ ಕೌಶಲ್ಯಗಳನ್ನು ಹೊಂದಿದ್ದಾರೆ ಎಂದು ವಿರಾಟ್ ಆರ್‌ಸಿಬಿ ಟಿವಿಗೆ ತಿಳಿಸಿದರು. ತಂಡದ ಯುವ …

Read More »

ಹೆಸ್ಕಾಂ ಅಕ್ರಮ-ಸಕ್ರಮ ಯೋಜನೆಯನ್ನು ರೈತರು ಸದ್ಭಳಕೆ ಮಾಡಿಕೊಳ್ಳಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

  ಗೋಕಾಕ : ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ವ್ಯಾಪ್ತಿಯ ರೈತರು ತಮ್ಮ ಪಂಪ್ ಸೆಟ್‍ಗಳಿಗೆ ಮೂಲ ಸೌಕರ್ಯಗಳು ಅಗತ್ಯವಿದ್ದಲ್ಲಿ ಶುಲ್ಕ ಮತ್ತು ಭದ್ರತಾ ಠೇವಣಿಯನ್ನು ಹೆಸ್ಕಾಂಗೆ ಪಾವತಿಸುವಂತೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ರೈತರಲ್ಲಿ ಮನವಿ ಮಾಡಿದ್ದಾರೆ. ಅಕ್ರಮ-ಸಕ್ರಮ ಯೋಜನೆಯಡಿ ಆರ್ ಆರ್ ಸಂಖ್ಯೆಗಳನ್ನು ಪಡೆದು 50 ರೂ. ನೋಂದಣಿ ಶುಲ್ಕ ಪಾವತಿಸಿದ ರೈತರು ತಮ್ಮ ಅನುಕೂಲದ ಪ್ರಕಾರ ಸರ್ವಿಸ್ ವೈರ್ ಗಳ ಮೂಲಕ ವಿದ್ಯುತ್ …

Read More »