ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದ NIA ತನಿಖೆಗೆ ಬಿಜೆಪಿಯಲ್ಲಿ ಆಗ್ರಹ ವ್ಯಕ್ತವಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲಾಗಿದ್ದು, SDPI ನಿಷೇಧಕ್ಕೂ ಪಕ್ಷ ಒತ್ತಾಯಿಸಿದೆ. ಡಿಜೆ ಹಳ್ಳಿಯಲ್ಲಿ ಪೊಲೀಸರನ್ನೇ ಟಾರ್ಗೆಟ್ ಮಾಡಿದ್ದ ಕಿರಾತಕರು, ರಸ್ತೆಯಲ್ಲಿ ನಿಂತಿದ್ದ ಪೊಲೀಸ್ ವಾಹನವನ್ನ ಪಲ್ಟಿ ಮಾಡಿ ಬೆಂಕಿ ಹಚ್ಚಿದ್ರು. ಪೊಲೀಸ್ ಠಾಣೆ ಆವರಣದಲ್ಲಿ ನಿಂತಿದ್ದ ವಾಹನಗಳಿಗೆ ಬೆಂಕಿ ಇಟ್ಟು, ವಾಹನವನ್ನ ಜಖಂ ಮಾಡಿದ್ರು. ಎರಡು ಪ್ರದೇಶಗಳನ್ನ ಕಟುಕರಪ …
Read More »ಅನುಶ್ರೀ ಜೊತೆ ಬಿಗ್ ಬಾಸ್ ಸ್ಪರ್ಧಿಗಳಿಗೂ ಇದೆಯಂತೆ ನಶೆ ನಂಟು, ಸ್ಯಾಮ್ ಬಿಚ್ಚಿಟ್ಟ ಸ್ಫೋಟಕ ಸತ್ಯ
ಬೆಂಗಳೂರು: ತನ್ನ ಮಾತು, ನಿರೂಪಣೆಯ ಮೂಲಕ ಕನ್ನಡಿಗರ ಮನ ಗೆದ್ದು ಮನೆ ಮಾತಾಗಿರುವ ಅನುಶ್ರೀ ಹೆಸರು ಡ್ರಗ್ಸ್ ಜಾಲದಲ್ಲಿ ಹೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಸ್ಫೋಟಕ ಮಾಹಿತಿಗಳನ್ನು ಹೊರ ಹಾಕುತ್ತಿದೆ. ಈಗ ಸ್ಯಾಂಡಲ್ ವುಡ್ ಬೆಚ್ಚಿ ಬೀಳಿಸುವ ಮತ್ತೊಂದು ಭಯಾನಕ ಸುದ್ದಿ ಸಿಸಿಬಿಗೆ ಗೊತ್ತಾಗಿದೆಯಂತೆ. ಬಗೆದಷ್ಟು ಬಯಲಾಗುತ್ತಿರುವ ಡ್ರಗ್ಸ್ ನಂಟಿನ ಬೃಹತ್ ಜಾಲದಲ್ಲಿ ಮತ್ತಿಬ್ಬರು ರಿಯಾಲಿಟಿ ಶೋ ಸ್ಪರ್ಧಿಗಳು ಭಾಗಿಯಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಸಿಕ್ಕಿದೆ. …
Read More »ಶುಕ್ರನತ್ತ ಇಸ್ರೋ ಚಿತ್ತ ನೆಟ್ಟಿದೆ.
ಬೆಂಗಳೂರು, – ಅಂತರಿಕ್ಷ ಸಂಶೋಧನೆ ಮತ್ತು ಉಪಗ್ರಹಗಳ ಉಡಾವಣೆಯಲ್ಲಿ ಹೊಸ ಹೊಸ ಸಾಧನೆಗಳನ್ನು ಮಾಡಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಈಗ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಗೆ ಸಜ್ಜಾಗಿದೆ. ಸೌರ ಮಂಡಲದ ಅತ್ಯಂತ ಪ್ರಕಾಶಮಾನ ಶುಕ್ರನತ್ತ ಇಸ್ರೋ ಚಿತ್ತ ನೆಟ್ಟಿದೆ. ಫ್ರಾನ್ಸ್‍ನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಿಎನ್‍ಇಎಸ್ ಸಹಭಾಗಿತ್ವದೊಂದಿಗೆ 2025ಕ್ಕೆ ವೀನಸ್ ಮಿಷನ್ (ಶುಕ್ರ ಗ್ರಹ ಯಾನ)ಕ್ಕೆ ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿವೆ. ಈ ಸಂಬಂಧ ಇಸ್ರೋ ಅಧ್ಯಕ್ಷ …
Read More »ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಬೆಂಗಳೂರು : ಪರಿಷತ್ ನಲ್ಲಿ ಎಪಿಎಂಸಿ, ಭೂಸುಧಾರಣೆ, ಕಾರ್ಮಿಕ ಕಾಯ್ದೆ ಪಾಸ್ ಆಗದ ಹಿನ್ನೆಲೆಯಲ್ಲಿ ಮತ್ತೆ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಪಿಎಂಸಿ ಕಾಯ್ದೆ, ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿಗಳು ಪರಿಷತ್ ನಲ್ಲಿ ಪಾಸ್ ಆಗದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
Read More »ಜಾತಿ ಅಥವಾ ಗುಂಪಿನ ಪ್ರಶ್ನೆ ಇಲ್ಲಿ ಬರುವುದಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.
ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ, ಜನಪ್ರಿಯ ಮತ್ತು ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗೆ ಪಕ್ಷದ ಟಿಕೆಟ್ ಕೊಡುತ್ತೇವೆ. ಜಾತಿ ಅಥವಾ ಗುಂಪಿನ ಪ್ರಶ್ನೆ ಇಲ್ಲಿ ಬರುವುದಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು. ನಗರದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಇನ್ನೂ ಆಕಾಂಕ್ಷಿಗಳು ಮುಂದೆ ಬಂದಿಲ್ಲ. ಪಕ್ಷದ ವೇದಿಕೆಯಲ್ಲಿ ಚರ್ಚೆ ಆರಂಭವಾಗಿಲ್ಲ. 15 ದಿನಗಳಲ್ಲಿ ಮುಖಂಡರ ಸಭೆ ಕರೆದು ಸಮಾಲೋಚಿಸುತ್ತೇನೆ’ ಎಂದು ಹೇಳಿದರು. ‘ಶಿರಾ ಹಾಗೂ ರಾಜರಾಜೇಶ್ವರಿ ನಗರ …
Read More »ಹತ್ರಾಸ್ ಪ್ರಕರಣ ಸದ್ಯ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.
ನವದೆಹಲಿ : ಹತ್ರಾಸ್ ಪ್ರಕರಣ ಸದ್ಯ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ರಾಹುಲ್ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕಾ ಜೊತೆಗೂಡಿ ಸಂತ್ರಸ್ತೆ ಕುಟುಂಬ ಸದಸ್ಯರನ್ನು ಭೇಟಿಯಾಗಲು ದೆಹಲಿಯಿಂದ ಹೊರಟಿದ್ದರು. ಆದರೆ ಗ್ರೇಟರ್ ನೊಯ್ಡಾ ಬಳಿ ಅವರ ತಂಡವನ್ನು ಪೊಲೀಸರು ತಡೆದಿದ್ದಾರೆ. ಹೀಗಿರುವಾಗ ಕೇವಲ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಮಾತ್ರ ಹತ್ರಾಸ್‌ಗೆ ಕಾಲ್ನಡಿಗೆಯಲ್ಲೇ ಪ್ರಯಾಣ ಬೆಳೆಸಿದ್ದಾರೆ. ಈ ನಡುವೆ ದೆಹಲಿ ನೊಯ್ಡಾ ಗಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಆದರೀಗ …
Read More »ಕೋಲು ಎಸೆದಿದ್ದಕ್ಕೆ ಬಾಲಕನ ಮೇಲೆ ದಾಳಿ ಮಾಡಿದ ನಾಯಿ.. ಎಲ್ಲಿ?
ನೆಲಮಂಗಲ: ಬೀದಿ ನಾಯಿ ಬಾಲಕನ ಮೇಲೆ ದಾಳಿ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಗ್ರಾಮದಲ್ಲಿ ನಡೆದಿದೆ. ಶಫೀರ್ (11) ನಾಯಿಯಿಂದ ದಾಳಿಗೆ ಒಳಪಟ್ಟ ಬಾಲಕ. ರಸ್ತೆಯಲ್ಲಿ ನಿಂತಿದ್ದ ನಾಯಿಗೆ ಕೋಲು ಎಸೆದ ಕಾರಣ ರೊಚ್ಚಿಗೆದ್ದ ನಾಯಿ ಬಾಲಕನ ಮೇಲೆ ಪ್ರತಿ ದಾಳಿ ನಡೆಸಿದೆ. ಈ ವೇಳೆ ಬಾಲಕ ಶಫೀರ್ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಮಾದನಾಯಕನಹಳ್ಳಿ ಪೋಲಿಸ್ …
Read More »ಕೊರೊನಾ ರುದ್ರನರ್ತನದ ನಡುವೆ ಮಕ್ಕಳನ್ನ ಶಾಲೆಗೆ ಕಳಿಸೋದು ಹೇಗೆ?
ಬೆಂಗಳೂರು: ಕೇಂದ್ರ ಸರ್ಕಾರ ಅನ್ಲಾಕ್ 5.0ಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದದೆ. ಈ ಅನುಸಾರ ಅಕ್ಟೋಬರ್ 15 ರಿಂದ ಶಾಲಾ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೆ ಜಿಲ್ಲೆಗಳಲ್ಲಿ ಇನ್ನೂ ಕೊರೊನಾ ರುದ್ರನರ್ತನ ನಿಂತಿಲ್ಲ. ಈ ನಡುವೆ ಮಕ್ಕಳನ್ನು ಶಾಲೆ ಕಳಿಸಲು ಪೋಷಕರಿಗೆ ಆತಂಕ ಉಂಟಾಗಿದೆ. ಹಲವು ಜಿಲ್ಲೆಗಳಲ್ಲಿ ನಿತ್ಯ 200ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ಗಳು ಪತ್ತೆಯಾಗುತ್ತಿವೆ. ಬೆಳಗಾವಿ, ಬಳ್ಳಾರಿ, ಚಿಕ್ಕಮಗಳೂರು ,ಚಿತ್ರದುರ್ಗ,ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಹಾಸನ, ಮಂಡ್ಯ, …
Read More »ಶಾರೂಖ್ ಖಾನ್, ಅರ್ಜುನ್ ರಾಂಪಾಲ್, ರಣ್‍ಬೀರ್ ಕಪೂರ್ ಮತ್ತು ಡಿನೋ ಮೊರಿಯಾ ಹೆಸರು ಡ್ರಗ್ಸ್ ಜಾಲದಲ್ಲಿ ಕೇಳಿ ಬಂದಿದೆ.
ಮುಂಬೈ: ಬಾಲಿವುಡ್ ನಟರಾದ ಶಾರೂಖ್ ಖಾನ್, ಅರ್ಜುನ್ ರಾಂಪಾಲ್, ರಣ್‍ಬೀರ್ ಕಪೂರ್ ಮತ್ತು ಡಿನೋ ಮೊರಿಯಾ ಹೆಸರು ಡ್ರಗ್ಸ್ ಜಾಲದಲ್ಲಿ ಕೇಳಿ ಬಂದಿದೆ. ಇಷ್ಟು ದಿನ ಡ್ರಗ್ಸ್ ಜಾಲದಲ್ಲಿ ನಟಿಯರ ಹೆಸರು ಕೇಳಿ ಬಂದಿತ್ತು. ಇದೀಗ ಮೊದಲ ಬಾರಿಗೆ ನಾಲ್ವರು ಹೆಸರಗಳು ಡ್ರಗ್ಸ್ ಜಾಲದ ಅಂಗಳದಲ್ಲಿ ಗಿರಕಿ ಹೊಡೆಯುತ್ತಿವೆ. ಖಾಸಗಿ ವಾಹಿನಿಯೊಂದು ನಾಲ್ವರ ಹೆಸರುಗಳನ್ನು ಖಚಿತಪಡಿಸಿ ವರದಿ ಬಿತ್ತರಿಸಿದೆ.ಹೆಸರು ಹೇಳಲು ಇಚ್ಛಿಸದ ಎನ್‍ಸಿಬಿ ಅಧಿಕಾರಿಯೊಬ್ಬರು ಈ ನಾಲ್ವರ ಹೆಸರನ್ನ ರಿವೀಲ್ …
Read More »ನಗರ ಪ್ರದೇಶಗಳಲ್ಲಿ ಮಾಸ್ಕ್ ಹಾಕದಿದ್ರೆ 1 ಸಾವಿರ ರೂ. ದಂಡ, ರಾಮೀಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸದಿದ್ದರೆ 500 ರೂ. ದಂಡ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಸರ್ಕಾರ ಈಗ ಫುಲ್ ಅಲರ್ಟ್ ಆಗಿದೆ. “ಮಾಸ್ಕ್ ಹಾಕ್ಕೊಳ್ಳಿ, ಜೀವ ಉಳಿಸಿಕೊಳ್ಳಿ” ಸದ್ಯಕ್ಕೆ ಇದೊಂದೆ ಲಸಿಕೆ ಸರ್ಕಾರದ ಬಳಿ ಇದ್ದು ಮಾಸ್ಕ್ ಹಾಕದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಸರ್ಕಾರ ಈಗ ಫುಲ್ ಅಲರ್ಟ್ ಆಗಿದೆ. “ಮಾಸ್ಕ್ ಹಾಕ್ಕೊಳ್ಳಿ, ಜೀವ ಉಳಿಸಿಕೊಳ್ಳಿ” ಸದ್ಯಕ್ಕೆ ಇದೊಂದೆ ಲಸಿಕೆ ಸರ್ಕಾರದ ಬಳಿ ಇದ್ದು ಮಾಸ್ಕ್ ಹಾಕದವರ ವಿರುದ್ಧ ಕಠಿಣ ಕ್ರಮ …
Read More »