Breaking News

ರಾಷ್ಟ್ರೀಯ

ಜಿಲ್ಲೆಯಲ್ಲಿ ಚಲನಚಿತ್ರ ಮಂದಿರಗಳು ಅ. 15ರಿಂದ ಪುನರಾರಂಭಗೊಳ್ಳುತ್ತಿಲ್ಲ.

ಬೆಳಗಾವಿ: ಕೋವಿಡ್-19 ಕಾರಣದಿಂದ ಹೇರಲಾಗಿದ್ದ ನಿರ್ಬಂಧದಿಂದ ವಿನಾಯಿತಿ ನೀಡಿದ್ದರೂ ಜಿಲ್ಲೆಯಲ್ಲಿ ಚಲನಚಿತ್ರ ಮಂದಿರಗಳು ಅ. 15ರಿಂದ ಪುನರಾರಂಭಗೊಳ್ಳುತ್ತಿಲ್ಲ. ಏಳು ತಿಂಗಳುಗಳಿಂದ ಚಲನಚಿತ್ರ ಮಂದಿರ ಮತ್ತು ಮಲ್ಟಿಪ್ಲೆಕ್ಟ್‌ಗಳನ್ನು ಬಂದ್ ಮಾಡಲಾಗಿದೆ. ನಗರದಲ್ಲಿ 6 ಏಕ ಪರದೆ ಚಲನಚಿತ್ರ ಮಂದಿರಗಳು ಹಾಗೂ 2 ಮಲ್ಟಿಪ್ಲೆಕ್ಸ್‌ಗಳಿವೆ. ಜಿಲ್ಲೆಯ ಚಲನಚಿತ್ರ ಮಂದಿರಗಳ ಸಂಖ್ಯೆ 30ಕ್ಕೂ ಜಾಸ್ತಿ ಇದೆ. ಇಲ್ಲಿ ಚಲನಚಿತ್ರ ಪ್ರದರ್ಶನಗಳನ್ನು ಪುನರಾರಂಭಿಸಲು ಮಾಲೀಕರು ಸದ್ಯಕ್ಕೆ ಉತ್ಸಾಹ ತೋರುತ್ತಿಲ್ಲ. ‘ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸುವುದು ಕಷ್ಟಕರವಾಗಿರುವುದು, …

Read More »

ಕೃಷಿ ಪ್ರೋತ್ಸಾಹ ಯೋಜನೆಯಡಿ ಸಹಾಯ ಧನವನ್ನೂ ಒದಗಿಸುತ್ತಿದೆ.

ಕಾರ್ಕಳ: ಆರ್ಥಿಕ ಸಂಕಷ್ಟದ ಜತೆಗೆ ಉದ್ಯೋಗ ಸಮಸ್ಯೆಗೆ ಸಿಲುಕಿರುವ ಕೃಷಿಕರಿಗೆ ಕೇಂದ್ರ ಸರಕಾರ ರಾಷ್ಟ್ರೀಯ ಬಿದಿರು ಮಿಷನ್‌ ಯೋಜನೆಯಡಿ ಬಿದಿರು ಬೆಳೆಗೆ ಪ್ರೋತ್ಸಾಹ ನೀಡುತ್ತಿದ್ದು, ಕೃಷಿ ಪ್ರೋತ್ಸಾಹ ಯೋಜನೆಯಡಿ ಸಹಾಯ ಧನವನ್ನೂ ಒದಗಿಸುತ್ತಿದೆ. ರಾಷ್ಟ್ರೀಯ ಬಿದಿರು ಮಿಷನ್‌ ಯೋಜನೆ ಯಡಿ 2010-21ನೇ ಸಾಲಿನಲ್ಲಿ ಕೇಂದ್ರ ಮತ್ತು ರಾಜ್ಯದ 60:40 ಅನುಪಾತದಲ್ಲಿ 2091.64 ರೂ. ಮೊತ್ತದ ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆ ನೀಡಲಾಗಿದೆ. ವಿವಿಧ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಿಭಾಗಗಳಿಗೆ …

Read More »

75 ರೂಪಾಯಿಗೆ ಸಿಗಲಿದೆಯಾ ಕೊರೊನಾ ಲಸಿಕೆ?

ರಷ್ಯಾ ಹೊರತುಪಡಿಸಿದರೆ ಜಗತ್ತಿನ ಬೇರೆ ಯಾವ ದೇಶದಲ್ಲೂ ಕೊರೊನಾಗೆ ಸೂಕ್ತ ಲಸಿಕೆ ಸಿಕ್ಕಿಲ್ಲ. ಭಾರತದಲ್ಲೂ 3 ಪ್ರಮುಖ ಕಂಪನಿಗಳು ಕೊರೊನಾ ಲಸಿಕೆಗೆ ಸಂಶೋಧನೆ ನಡೆಸುತ್ತಿವೆ. ಆದ್ರೆ ಭಾರತದಲ್ಲಿ ಲಸಿಕೆಗೆ ಸಾಮಾನ್ಯ ಜನರು ಎಷ್ಟು ಹಣ ತೆರಬೇಕಾಗುತ್ತೆ, ಲಸಿಕೆ ದುಬಾರಿಯಾಗುತ್ತಾ, ಇಲ್ಲ ಅಗ್ಗವಾಗುತ್ತಾ, ಸರ್ಕಾರವೇ ಖರೀದಿಸಿ ಉಚಿತ ಲಸಿಕೆ ನೀಡುತ್ತಾ ಎನ್ನುವ ಕುತೂಹಲ ಇದ್ದು, ಇದಕ್ಕೆಲ್ಲಾ ಉತ್ತರ ಇಲ್ಲಿದೆ. ಕೊರೊನಾ ಮಹಾಮಾರಿಗೆ ವ್ಯಾಕ್ಸಿನ್ ಇನ್ನೂ ಕನ್ಫರ್ಮ್ ಆಗಿಲ್ಲ. ಸೆರಮ್ ಇನ್ಸ್​ಟಿಟ್ಯೂಟ್ ಆಫ್ …

Read More »

ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗೆ ‘ರೆಡ್‌ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು  : ರಾಜ್ಯದಲ್ಲಿ ಮುಂಗಾರಿನ ಆರ್ಭಟ ಉತ್ತರ ಒಳನಾಡಿನ ಜೊತೆಗೆ ಕರಾವಳಿ ಭಾಗಕ್ಕೂ ಆವರಿಸಿದ್ದು, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗೆ ‘ರೆಡ್‌ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ. ಗುಡುಗು ಸಹಿತ ಅತ್ಯಂತ ಹೆಚ್ಚು ಮಳೆ ಸುರಿಯುವುದರಿಂದ ಅ.15ರಂದು ಕರಾವಳಿ ಜಿಲ್ಲೆಗಳು ಹಾಗೂ ಬಾಗಲಕೋಟೆ, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಿಗೆ ‘ರೆಡ್‌ ಅಲರ್ಟ್‌’. ಅತಿ ಹೆಚ್ಚು ಮಳೆ ಸುರಿಯುವ ಸಂಭವ ಇರುವುದರಿಂದ ಧಾರವಾಡ, ಗದಗ, ಕಲಬುರ್ಗಿ ಸೇರಿದಂತೆ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, …

Read More »

ಕೊವಿಡ್-19: ಕರ್ನಾಟಕದಲ್ಲಿ ಮತ್ತೆ ಹೆಚ್ಚಿದ ಸೋಂಕಿತರು

ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಇಂದು ಸಾಯಂಕಾಲ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕರ್ನಾಕದಲ್ಲಿ ಇಂದು ಕೊರೊನಾ ಸೋಂಕಿನಿಂದ 75 ಜನ ಮರಣವನ್ನಪ್ಪಿದ್ದಾರೆ ಮತ್ತು ಹೊಸದಾಗಿ 9,265 ಜನರಲ್ಲಿ ಸೋಂಕು ದೃಢಪಟ್ಟಿದೆ . ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7,35,371 ಕ್ಕೇರಿದ್ದು ಇದುವರೆಗೆ ಬಲಿಯಾದವರ ಸಂಖ್ಯೆ 10,198 ತಲುಪಿದೆ. ಸೋಂಕಿತರ ಪೈಕಿ 6,11,167 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಮಿಕ್ಕಿದ 1,13,987 ಜನರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ …

Read More »

ಫಿರಂಗಿಪುರ ಬಳಿ ಭೀಕರ ಘಟನೆ: ಬಸ್ ಪಲ್ಟಿ, 20ಕ್ಕೂ ಹೆಚ್ಚು ಜನರಿಗೆ ಗಾಯ

ಹೈದರಾಬಾದ್: ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವ ದುರಂತ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಫಿರಂಗಿಪುರ ಬಳಿ ನಡೆದಿದೆ. ಚಿರಾಲದಿಂದ ಹೈದರಾಬಾದ್​ಗೆ ಹೊರಟಿತ್ತು ಎನ್ನಲಾದ ಬಸ್ ಚಲಿಸುತ್ತಿರುವಾಗ ಏಕಾಏಕಿ ಪಲ್ಟಿಯಾಗಿದೆ. ಈ ಪರಿಣಾಮ ಇಷ್ಟೆಲ್ಲಾ ಅನಾಹುತಗಳು ಸಂಭವಿಸಿವೆ. ಬಸ್ ಸೀಟುಗಳಲ್ಲಿ ಇಬ್ಬರು ಮಕ್ಕಳು ಸಿಕ್ಕಿ‌ ಹಾಕಿ ಕೊಂಡಿದ್ದರು. ಸದ್ಯ ಅವರನ್ನ ಅಡ್ಡವಾಗಿದ್ದ ರಾಡ್, ಗ್ಲಾಸ್ ಮುರಿದು ರಕ್ಷಣೆ ಮಾಡಲಾಗಿದೆ. ಬಸ್​ನಲ್ಲಿ 30ಕ್ಮೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದೆ. …

Read More »

ದಿನಕ್ಕೆ 50 ಕೇಸ್​ನಂತೆ ಟಾರ್ಗೆಟ್: ಸಿಕ್ಕ ಸಿಕ್ಕವರ ಬಳಿ ದಂಡ ವಸೂಲಿ, ಪೊಲೀಸರ ನಡೆಗೆ ಸ್ಥಳೀಯರ ಕಿಡಿ

ನೆಲಮಂಗಲ: ಕೊರೊನಾ ಸೋಂಕು ಹರಡದಂತೆ ತಡೆಯಲು ಮಾಸ್ಕ್ ಧರಿಸದವರಿಂದ ದಂಡ ವಸೂಲಿ ಮಾಡಲು ಸರ್ಕಾರ ನಿರ್ಧರಿಸಿದ್ದು ನಗರ ಪ್ರದೇಶಗಳಲ್ಲಿ 250 ರುಪಾಯಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 100 ರುಪಾಯಿ ದಂಡ ವಸೂಲಿ ಮಾಡಲು ಪೊಲೀಸರಿಗೂ ಸಹ ಸೂಚನೆ ನೀಡಲಾಗಿದೆ. ಆದ್ರೆ ಸೂಚನೆ ನೀಡಿದ ಬೆನ್ನಲ್ಲಿ ಪೊಲೀಸರಿಗೆ ಪ್ರತಿದಿನಕ್ಕೆ 50 ಕೇಸ್ ಮಾಡುವಂತೆ ಟಾರ್ಗೆಟ್ ಸಹ ನೀಡಲಾಗಿದೆ.     ಸರ್ಕಾರದ ದಂಡಕ್ಕೆ ಜನ ಭಯಭೀತರಾಗಿದ್ದು, ಮಾಸ್ಕ್ ಹಾಕಿಕೊಂಡು ಓಡಾಡುವವರ ಸಂಖ್ಯೆ …

Read More »

ಕಲಬುರಗಿ ಮಹಾಮಳೆ: ಪ್ರವಾಹದಲ್ಲಿ ಸಿಲುಕಿದ್ದ 6 ಶಾಲಾ ಸಿಬ್ಬಂದಿ ರಕ್ಷಣೆ..

ಕಲಬುರಗಿ: ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ಜನಜೀವನ ಕಷ್ಟ ಪಡುತ್ತಿದೆ. ಪ್ರವಾಹಕ್ಕೆ ಸಿಲುಕಿ ನರಳುತ್ತಿದೆ. ಕಾಗಿಣಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಶಾಲೆ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಸೇಡಂ ತಾಲೂಕಿನ ಮಳಖೇಡ್ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6 ಜನ ಸಿಬ್ಬಂದಿ ಸಿಲುಕಿದ್ದರು. ಅವರನ್ನು NDRF ತಂಡ ರಕ್ಷಿಸಿದೆ. ನಿನ್ನೆ ಬೆಳಗ್ಗೆ ಶಾಲೆಗೆ ಕಾಗಿಣಾ ನದಿಯ ನೀರು ನುಗ್ಗಿ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿ ಪರದಾಡುತ್ತಿದ್ದರು. ವಸತಿ ಶಾಲೆಯಿಂದ …

Read More »

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಾರಾ ಕೆ.ಎಚ್ ಮುನಿಯಪ್ಪ?

ಕೋಲಾರ: ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ರಾಜಕಾರಣದತ್ತ ಗಮನ ಹರಿಸುವಂತೆ ಕೆಪಿಸಿಸಿ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಅಭಿಮತ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಹೇಳಿದ್ರು. ಕೋಲಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು ಜೊತೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲವೆಂದು ಸ್ಪಷ್ಟಪಡಿಸಿದ್ರು. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ …

Read More »

ಕೊರೊನಾ ನಡುವೆ ದೀಪಾವಳಿ ಹಬ್ಬ ಆಚರಿಸಲು ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಬೆಂಗಳೂರು: ಕೊರೊನಾ ನಡುವೆ ದೀಪಾವಳಿ ಹಬ್ಬ ಆಚರಿಸಲು ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ವರ್ಷದ ದೀಪಾವಳಿ ಹಬ್ಬಕ್ಕೆ ಕೊರೊನಾ ಕಾರ್ಮೋಡ ಕವಿದಿದೆ. ರಾಜ್ಯದಲ್ಲಿ ಕೊರೊನಾ ಅಬ್ಬರದ ನಡುವೆ ಸರಳವಾಗಿ ಹಬ್ಬ ಮಾಡಲು ರಾಜ್ಯ ಸರ್ಕಾರ 10 ನಿಯಮಗಳಿರುವ ಒಂದು ಮಾರ್ಗಸೂಚಿಯನ್ನು ಹೊರಡಿಸಿದೆ. 10 ನಿಯಮಗಳು 1. ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರಗಳಿಂದ ಅಧಿಕೃತ ಪರವಾನಗಿಯನ್ನು ಪಡೆದ ಮಾರಾಟಗಾರರು ಮಾತ್ರ ಪಟಾಕಿಯನ್ನು ಮಾರಾಟ ಮಾಡತಕ್ಕದ್ದು. 2. ಪಟಾಕಿ ಮಾರಾಟದ ಮಳಿಗೆಗಳನ್ನು …

Read More »