Breaking News

ರಾಷ್ಟ್ರೀಯ

ಧಾರವಾಡದಲ್ಲಿ ವ್ಯವಸ್ಥಿತವಾಗಿ ಅಯ್ಯಪ್ಪನ ಮೂರ್ತಿ ಪ್ರತಿಷ್ಠಾಪನೆ…. ಸ್ಥಳದಲ್ಲಿ ಜಮಾಯಿಸಿದ ಮಾಲಾಧಾರಿಗಳು, ತೆರವಿಗೆ ಬಂದು ಸ್ಥಳೀಯರ ವಿರೋದಕ್ಕೆ ಮರಳಿದ ಜೆಸಿಬಿ….

ನಿನ್ನೆ ಹೊಸ ವರ್ಷಾಚರಣೆ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಅದರೆ ಧಾರವಾಡದಲ್ಲಿ ಯುವ ಸಮುದಾಯ‌ ಹೊಸ ವರ್ಷ ಸಂಭ್ರಮ ಮುಗಿಸಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಧಾರವಾಡದಲ್ಲಿ ವಿಚಿತ್ರ ಘಟನೆವೊಂದು ನಡೆದು ಹೋಗಿದೆ. ಅರೇ ಅದೇನಪ್ಪಾ ಘಟನೆ ಅಂತೀರಾ ಅದರ‌ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.. ಹೀಗೆ ಖುಲ್ಲಾ ಜಾಗದಲ್ಲಿ ವಿರಾಜಮಾನರಾಗಿರುವ ಅಯ್ಯಪ್ಪನ ಮೂರ್ತಿ. ಅದರ ಎದುರುಗಡೆಯೇ ನಾಗರ ಮೂರ್ತಿ. ಎರಡೂ ಮೂರ್ತಿಗಳಿಗೆ ಪೂಜೆ ಪುನಸ್ಕಾರ. ಮತ್ತೊಂದೆಡೆ ಅಯ್ಯಪ್ಪ ಮಾಲಾಧಾರಿಗಳ ಸಮಾಗಮ. …

Read More »

ಅಂಬೇಡ್ಕರ್ ಕುರಿತು ಅಮಿತ್​​​ ಶಾ ಹೇಳಿಕೆ ಖಂಡಿಸಿ ಬಳ್ಳಾರಿಯ ಕಂಪ್ಲಿ ಸಂಪೂರ್ಣ ಬಂದ್​!

ಬಳ್ಳಾರಿ: ಡಾ. ಬಿ.ಆರ್​​​. ಅಂಬೇಡ್ಕರ್​​​​ ಅವರ ಕುರಿತಾದ ಕೇಂದ್ರ ಗೃಹ ಸಚಿವ ಅಮಿತ್​​​ ಶಾ ಹೇಳಿಕೆ ಖಂಡಿಸಿ ಇಂದು ಜಿಲ್ಲೆಯ ಕಂಪ್ಲಿ ತಾಲೂಕು ಸಂಪೂರ್ಣ ಬಂದ್​ ಆಗಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್​​​ ಅವರ ಬಗ್ಗೆ ಬಿಜೆಪಿಗರು ಅವಮಾನ ಮಾಡುವುದೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ವಿವಿಧ ಸಂಘಟನೆಗಳ ಪ್ರತಿಭಟನಕಾರರು ಬೆಳಗ್ಗೆ 6 ಗಂಟೆಯಿಂದಲೇ ಬಂದ್​ ಆರಂಭಿಸಿದ್ದಾರೆ. ಬಂದ್​ ಇದ್ದರೂ ಕಂಪ್ಲಿಯಲ್ಲಿ ಎಂದಿನಂತೆ ದಿನಸಿ ಮಾರುಕಟ್ಟೆಗಳು, ಮತ್ತು ಆಟೋ, ಕ್ಯಾಬ್​ ಮಾತ್ರ ಓಪನ್ …

Read More »

ಗುತ್ತಿಗೆದಾರನ ಸಾವಿಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಯಾವುದೇ ಸಂಬಂಧವಿಲ್ಲ:ಡಿ. ಕೆ ಶಿ

ಬೆಂಗಳೂರು : ನಮ್ಮದು ಸ್ವಚ್ಛ ಆಡಳಿತದ ಸರ್ಕಾರ. ಗುತ್ತಿಗೆದಾರನ ಸಾವಿಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ತಿಳಿಸಿದರು. ಇಂದು ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯದಮವರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಪಾತ್ರವಿಲ್ಲ. ಆತ್ಮಹತ್ಯೆ ಪತ್ರದಲ್ಲಿ ಅವರ ಹೆಸರು ಯಾರೂ ಬರೆದಿಲ್ಲ. ಬೇರೆಯವರ ಮೇಲೆ ಆರೋಪ ಮಾಡಿದಾಕ್ಷಣ ಇವರು ರಾಜೀನಾಮೆ ನೀಡಲು ಸಾಧ್ಯವಿಲ್ಲ. ಪ್ರಿಯಾಂಕ್ ಖರ್ಗೆ ಅವರ …

Read More »

ಜ.15ರಂದು ಸಿಎಂ ಜೊತೆ ಸಭೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ: ಮುಷ್ಕರ ಕೈಬಿಟ್ಟ ಸಾರಿಗೆ ನೌಕರರ ಒಕ್ಕೂಟ

ಬೆಂಗಳೂರು: ಜನವರಿ 15ರಂದು ಸಿಎಂ ಸಿದ್ದರಾಮಯ್ಯ ರಸ್ತೆ ಸಾರಿಗೆ ನೌಕರರ ಜೊತೆ ಸಭೆ ನಡೆಸುವ ಭರವಸೆ ನೀಡಿದ್ದು, ಡಿ.31ರಿಂದ ಮಾಡಲು ಉದ್ದೇಶಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರದಿಂದ ಹಿಂದೆ ಸರಿಯಲು ಕೆಎಸ್​ಆರ್​ಟಿಸಿ ನೌಕರರ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ. ಭಾನುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಭೆ ನಡೆಸಿದ ಬೆನ್ನಲ್ಲೇ ಕ್ರಿಯಾ ಸಮಿತಿ ಮುಷ್ಕರದಿಂದ ಹಿಂದೆ ಸರಿಯಲು ತೀರ್ಮಾನಿಸಿದೆ. ಸಭೆಯಲ್ಲಿ ಮಕರ ಸಂಕ್ರಾಂತಿಯಂದು ಸಭೆ ನಡೆಸಿ …

Read More »

ಬೈಕ್ ವ್ಹೀಲಿಂಗ್ ವೇಳೆ ಅಪಘಾತವಾಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ದೇವನಹಳ್ಳಿ: ಬೈಕ್ ವ್ಹೀಲಿಂಗ್ ಮಾಡುವ ವೇಳೆ ಎದುರಗಡೆಯಿಂದ ಬರುತ್ತಿದ್ದ ಕ್ಯಾಂಟರ್​ಗೆ ಡಿಕ್ಕಿ ಹೊಡೆದು ಯುವಕರಿಬ್ಬರು ಮೃತಪಟ್ಟ ಘಟನೆ ದೇವನಹಳ್ಳಿಯ ವಿಜಯಪುರ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ವಿಜಯಪುರ ಪಟ್ಟಣದ ಮನೋಜ್ (19) ಮತ್ತು ಹರ್ಭಾಜ್ (19) ಮೃತರು. ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಇಂದು ಬೆಳಗ್ಗೆ ಮಳೆಯ ನಡುವೆ ಇಬ್ಬರು ದ್ವಿಚಕ್ರ ವಾಹನದಲ್ಲಿ ಬೈಕ್​ ವ್ಹೀಲಿಂಗ್​ ಮಾಡುತ್ತಿದ್ದರು. ಈ ವೇಳೆ ಎದುರುಗಡೆ ಬರುತ್ತಿದ್ದ ಕ್ಯಾಂಟರ್​ಗೆ ಡಿಕ್ಕಿ ಹೊಡೆದು ತೀವ್ರ …

Read More »

ಗದಗ ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಆರು ಜನರಿಗೆ ಚೂರಿಯಿಂದ ಇರಿತ

ಗದಗ, ಡಿಸೆಂಬರ್ 27: ಗದಗ ನಗರದಲ್ಲಿ ಪುಡಿ ರೌಡಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಜುಮ್ಮಾ ಮಸೀದಿ ಬಳಿ ಗುರುವಾರ ಸಂಜೆ ಆರು ಜನರಿಗೆ ಚೂರಿಯಿಂದ ಇರಿತಯಲಾಗಿದ್ದು, ಗಾಯಾಳುಗಳ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಅನಿಲ್ ಮುಳ್ಳಾಳ (27), ಚೇತನ್ ಮುಳ್ಳಾಳ, ವಿನಾಯಕ್ ಮುಳ್ಳಾಳ, ಶಾರುಖ್ ಮುಲ್ಲಾ, ಅಭಿಷೇಕ್ ಹರ್ಲಾಪುರ, ಕಿರಣ್ ಸಾಲಿಮಠ ಹೀಗೆ ಆರು ಮಂದಿ ಗಾಯಗೊಂಡಿದ್ದಾರೆ. ಇಬ್ಬರ ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ. ಅನಿಲ್ …

Read More »

ಸಿನಿಮಾ ಶೈಲಿಯಲ್ಲಿ ಬ್ಯಾಂಕಿಗೆ ವಂಚನೆ: ತಂಗಿ ಮದ್ವೆ ಸಾಲಕ್ಕೆ ಅಣ್ಣ ಜೈಲು ಸೇರುವ ಪರಿಸ್ಥಿತಿ

ನೆಲಮಂಗಲ, ಡಿಸೆಂಬರ್​ 27: ಆಭರಣ ಮೌಲ್ಯಮಾಪಕನಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್​ಗೆ 23 ಲಕ್ಷಕ್ಕೂ ಹೆಚ್ಚು ಹಣ ವಂಚನೆ (fraud) ಮಾಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ. ಆಭರಣ ಮೌಲ್ಯಮಾಪಕ ಮಂಜುನಾಥ ವಂಚಕ. ನೆಲಮಂಗಲ ಪೊಲೀಸ್ ಠಾಣೆಗೆ ಮ್ಯಾನೇಜರ್ ಆನಂದ್ ದೂರು ನೀಡುತ್ತಿದ್ದಂತೆ ಇತ್ತ ವಂಚಕ ಪರಾರಿ ಆಗಿದ್ದಾರೆ. ತಂಗಿಯ ಮದುವೆ ಸಾಲಕ್ಕೆ ಅಣ್ಣ ಜೈಲು ಸೇರುವ ಪರಿಸ್ಥಿತಿ ಎದರಾಗಿದೆ.ಅರ್ಧ ಕೆಜಿಯಷ್ಟು ನಕಲಿ ಚಿನ್ನಾಭರಣ ಅಡವಿಟ್ಟು ಮಂಜುನಾಥ …

Read More »

ಹಾವೇರಿ: ಅನೈತಿಕ ಸಂಬಂಧ ಆರೋಪ: ವಿದ್ಯುತ್​ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ- ವ್ಯಕ್ತಿ ಸಾವು

ಹಾವೇರಿ: ಅನೈತಿಕ ಸಂಬಂಧ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನಿಗೆ ಕೆಲವರು ಲೈಟ್ ಕಂಬಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿರುವ ಪ್ರಕರಣ ಜಿಲ್ಲೆಯ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದಿದೆ. ಮೃತನನ್ನು ಪ್ರಕಾಶ್ ಓಲೇಕಾರ ಎಂದು ಗುರುತಿಸಲಾಗಿದೆ. ಆರೋಪಿಗಳು ಪ್ರಕಾಶನನ್ನು ಲೈಟ್ ಕಂಬಕ್ಕೆ ಕಟ್ಟಿ ಮನ ಬಂದಂತೆ ಥಳಿಸಿದ್ದಾರೆ. ಅಲ್ಲದೇ, ಪ್ರಕಾಶ ಕೊರಳಿಗೆ ಚಪ್ಪಲಿ ಹಾರ ಹಾಕಿ, ಕಾಲಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಸಲಾಗಿದೆ. ಎಫ್​ಐಆರ್​ ವಿವರ: ”ಗುರುವಾರ …

Read More »

ಮೆಟ್ರೋ ನಿಲ್ದಾಣದಲ್ಲಿ ಲಿಪ್‌ ಟು ಲಿಪ್‌ ಕಿಸ್ ಮಾಡುತ್ತ ನಿಂತ ಜೊಡಿ

ಪ್ರೇಮಿಗಳು ಮಿತಿ ಮೀರಿ (lovers behaving beyond limits) ಸಾರ್ವಜನಿಕ ಸ್ಥಳಗಳಾದ ಮೆಟ್ರೋ, ರೈಲು, ಬಸ್ಸು ಹೀಗೆ ಸಾರ್ವಜನಿಕ ಸ್ಥಳ (public places) ಗಳಲ್ಲಿ ವರ್ತಿಸುತ್ತಿರುವ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಮತ್ತೊಂದು ಇಂತಹದ್ದೇ ಘಟನೆ ಮೆಟ್ರೋ ನಿಲ್ದಾಣ (Metro station) ದಲ್ಲಿ ನಡೆದಿದ್ದು, ಪ್ರೇಮಿಗಳಿಬ್ಬರು ಜಗತ್ತಿನ ಪರಿಜ್ಞಾನವೇ ಇಲ್ಲದೆ ಎಲ್ಲರೆದುರಲ್ಲೇ ಪರಸ್ಪರ ಬಿಗಿಯಾಗಿ ತಬ್ಬಿಕೊಂಡು ಲಿಪ್‌ ಟು ಲಿಪ್‌ (lip-to-lip) Kiss ಮಾಡಿದ್ದಾರೆ. ಈ ದೃಶ್ಯ ಸದ್ಯ …

Read More »

ಗೃಹಲಕ್ಷ್ಮಿ ಹಣದಿಂದ ಬೋರ್​ವೆಲ್ ಕೊರೆಸಿದ ಅತ್ತೆ, ಸೊಸೆ!

ಗದಗ,  ಕರ್ನಾಟಕ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿರುವ 2000 ರೂ. ಹಣವನ್ನು ಕೂಡಿಟ್ಟು ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ಅತ್ತೆ ಹಾಗೂ ಸೊಸೆ ಕೊಳವೆ ಬಾವಿ ಕೊರೆಸಿದ್ದಾರೆ. ಬೋರ್​ವೆಲ್​ನಲ್ಲಿ ಅವರಿಗೆ ನೀರು ಕೂಡ ದೊರೆತಿದೆ. ಇದೀಗ ಈ ಬಗ್ಗೆ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಹರ್ಷ ವ್ಯಕ್ತಪಡಿಸಿದ್ದಾರೆ. ಅತ್ತೆ ಹಾಗೂ ಸೊಸೆ ಸೇರಿ ಗೃಹಲಕ್ಷ್ಮಿ ಯೋಜನೆಯಿಂದ ದೊರೆತ 44 ಸಾವಿರ ರೂ. …

Read More »