Breaking News

ಬೆಂಗಳೂರು

ಕಾನ್ಸ್‌ಟೇಬಲ್‌ಗೆ ಪೇಟ ತೊಡಿಸಿ ಸನ್ಮಾನ; ಶಿವು ಉತ್ತಮ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಪಂತ್ ಶ್ಲಾಘನೆ

ಬೆಂಗಳೂರು: ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್‌ ಅವರು ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣೆ ಕಾನ್ಸ್‌ಟೇಬಲ್‌ ಶಿವುಗೆ ಪೇಟ ತೋಡಿಸಿ, ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಬಕ್ರೀದ್ ಹಿನ್ನಲೆ ನೆನ್ನೆ ರಾತ್ರಿ ಪೊಲೀಸ್ ಆಯುಕ್ತರಾದ ಕಮಲ್‌ಪಂತ್‌ ಸಿಟಿ ರೌಂಡ್ಸ್‌ ಹಾಕಿದ್ದರು. ಈ ವೇಳೆ ಕಮಲ್‌ಪಂತ್ ಅವರನ್ನು ಸನ್ಮಾನಿಸಲು ಮುಸ್ಲಿಮರು ಆಗಮಿಸಿದ್ದರು, ಆಗ ಸನ್ಮಾನಿಸಬೇಕಿರುವುದು ನನಗಲ್ಲ ಎಂದು ಪೊಲೀಸ್ ಕಾನ್ಸ್‌ಟೇಬಲ್‌ ಶಿವು ಅವರಿಗೆ ಸನ್ಮಾನಿಸಿದ್ದಾರೆ. ನಿನ್ನೆ ರಾತ್ರಿ ಶಿವಾಜಿನಗರ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ, ಗೋವಿಂದಪುರ, …

Read More »

‘ಸಿಡಿ ಅಸ್ತ್ರ’ಕ್ಕೆ ಬೆಟ್ಟಿ ಬಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ : ‘ಶಾಸಕ ಎಂಪಿ ರೇಣುಕಾಚಾರ್ಯ’ ವಿರುದ್ಧ ‘CD ಷಡ್ಯಂತ್ರ’.?

ಬೆಂಗಳೂರು : ಸಿಎಂ ಬದಲಾವಣೆ ಬೆನ್ನಲ್ಲೇ, ಈಗ ಸಿಡಿ ಷಡ್ಯಂತ್ರದ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಸಿಡಿ ವಿಚಾರ ಕೂಡ ಈಗ ಮುನ್ನಲೆಗೆ ಬಂದಿದ್ದು, ಇದೇ ಕಾರಣಕ್ಕಾಗಿ ದಿಢೀರ್ ದೆಹಲಿಗೆ ಅವರು ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಎಂಪಿ ರೇಣುಕಾಚಾರ್ಯ ವಿರುದ್ಧ ಸಿಡಿ ಷಡ್ಯಂತ್ರ ನಡೆಯುತ್ತಿದೆ ಎನ್ನಲಾಗಿದೆ.   ಇಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ದೆಹಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿಎಂ ಪರವಾಗಿ …

Read More »

ಸಿಎಂ ಯಡಿಯೂರಪ್ಪನವರನ್ನು ಬದಲಿಸಿದ್ರೆ ಬಿಜೆಪಿ ಸರ್ವನಾಶ; ಹೈಕಮಾಂಡ್ ಗೆ ದಿಂಗಾಲೆಶ್ವರ ಸ್ವಾಮೀಜಿ ಎಚ್ಚರಿಕೆ

ಬೆಂಗಳೂರು: ಸಿಎಂ ಬದಲಾವಣೆ ವದಂತಿ ಬೆನ್ನಲ್ಲೇ ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ ಮಠಾಧೀಶರ ನಿಯೋಗ ಬಿಜೆಪಿ ಹೈಕಮಾಂಡ್ ಗೆ ಖಡಕ್ ಎಚ್ಚರಿಕೆ ನೀಡಿದೆ. ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿಂಗಾಲೇಶ್ವರ ಶ್ರೀ, ಸಮರ್ಥವಾಗಿ ಆಡಳಿತ ನಡೆಸುತ್ತಿರುವ ಯಡಿಯೂರಪ್ಪನರನ್ನು ಬದಲಾವಣೆ ಮಾಡಬೇಕು ಎಂಬುದು ಒಂದು ಕೆಟ್ಟ ಉದ್ದೇಶ. ಸಿಎಂ ಬಿ ಎಸ್ ವೈ ಕೇವಲ ಲಿಂಗಾಯತ ನಾಯಕ ಮಾತ್ರವಲ್ಲ, ಈ ರಾಜ್ಯದ …

Read More »

ತಾವು ನೀಡಿದ್ದ ಜಾಹೀರಾತಿನಲ್ಲಿ ಸಿಎಂ ಯಡಿಯೂರಪ್ಪ ಅವರ ಫೋಟೋ ಪ್ರಕಟಿಸದ ಸಚಿವೆ ಶಶಿಕಲಾ ಜೊಲ್ಲೆ

ರಾಷ್ಟ್ರೀಯ ಆಂಗ್ಲ ಮಾಧ್ಯಮಕ್ಕೆ ತಾವು ನೀಡಿದ್ದ ಜಾಹೀರಾತಿನಲ್ಲಿ ಸಿಎಂ ಯಡಿಯೂರಪ್ಪ ಅವರ ಫೋಟೋ ಪ್ರಕಟಿಸದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಫೋಟೋ ಹಾಕದಿರುವುದು ಉದ್ದೇಶಪೂರ್ವಕ ಕೆಲಸ ಅಲ್ಲ. ಇದು ಜಾಹೀರಾತು ಏಜೆನ್ಸಿ ಕಡೆಯಿಂದ ಆಗಿರುವ ಪ್ರಮಾದ. ಇನ್ನು ಮುಂದೆ ಹೀಗೆ ಆಗದಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದ್ದೇನೆ. ಸಿಎಂ ಯಡಿಯೂರಪ್ಪರ ಫೋಟೋ ಮಿಸ್ ಆಗಿರುವುದಕ್ಕೆ ಗೊಂದಲ ಬೇಡ. ಜಾಹೀರಾತಿನಲ್ಲಿ …

Read More »

ಪೆಗಾಸಸ್ ವಿವಾದ: ಮೋದಿ ಸರ್ಕಾರದ ವಿರುದ್ಧ ಮುಗಿಬಿದ್ದ ಕರ್ನಾಟಕ ಕಾಂಗ್ರೆಸ್, ಸುಪ್ರೀಂಕೋರ್ಟ್ ನೇತೃತ್ವದಲ್ಲಿ ತನಿಖೆಗೆ ಆಗ್ರಹ

ಬೆಂಗಳೂರು: ಪೆಗಾಸಸ್ ಗೂಡಚಾರಿಕೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲೂ ಈ ಸಾಫ್ಟ್ ವೇರ್ ಬಳಸಿ ಪ್ರತಿಪಕ್ಷಗಳ ನಾಯಕರ ಆಪ್ತರ ಫೋನ್ ಕದ್ದಾಲಿಕೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿಯವರ ಆಪ್ತರು ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಬೇಹುಗಾರಿಕೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ರಾಜ್ಯ ಕಾಂಗ್ರೆಸ್ …

Read More »

ವೀರಶೈವ ಸಮುದಾಯದವರಿಗೇ ಸಿಎಂ ಹುದ್ದೆ ನೀಡಬೇಕು; ಹೋರಾಟದ ಎಚ್ಚರಿಕೆ ನೀಡಿದ ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಪರ ವಿವಿಧ ಸ್ವಾಮೀಜಿಗಳು ಬ್ಯಾಟಿಂಗ್ ಬೀಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರಿನ ಕೊಳದ ಮಠದ ಡಾ.ಶಾಂತವೀರ ಶ್ರೀಗಳು, ಯಡಿಯೂರಪ್ಪ ಬದಲಾವಣೆ ವಿಚಾರ ಕುರಿತು ಊಹಾಪೋಹ ಕೇಳಿ ಬರುತ್ತಿದೆ. ರಾಜ್ಯಕೀಯ ಅನ್ನೋದು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ವೀರಶೈವ ಲಿಂಗಾಯತ ಜನಾಂಗದವರು ಐವತ್ತಕ್ಕು ಹೆಚ್ಚು ಜನ ಸ್ಥಾನದಲ್ಲಿದ್ದಾರೆ. ಸಮುದಾಯವನ್ನು ಕಡೆಗಣಿಸುವ ಕೆಲಸ ಆಗಬಾರದು ಅಂತ ಹೇಳಿದರು. ನಾಯಕತ್ವ ಬದಲಾವಣೆ ಮಾಡುವುದಾದರೆ …

Read More »

ಬಾಂಗ್ಲಾ ಯುವತಿ ಅತ್ಯಾಚಾರ ಆರೋಪಿಗಳಿಂದ ವಿದೇಶಗಳಿಗೆ ಮಹಿಳೆಯರ ಸಾಗಾಟ

ಬೆಂಗಳೂರು: ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಯುವತಿ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣದ ತನಿಖೆಯಲ್ಲಿ ಪೋಲೀಸರಿಗೆ ಇವರು ಇತರ ದೆಶಗಳಿಗೆ ಮಹಿಳೆಯರ ಸಾಗಾಟ ಮಾಡುತ್ತಿರುವ ಮಾಹಿತಿ ತಿಳಿದು ಬಂದಿದೆ. ಬಾಂಗ್ಲಾದೇಶ ದಿಂದ ಸಮುದ್ರದ ಮೂಲಕ ಚೆನ್ನೈ ತಲುಪಿಸಿ, ಅಲ್ಲಿಂದ ಕರ್ನಾಟಕ, ಕೇರಳ, ತಮಿಳು, ಗೋವಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಇಲ್ಲಿನ ಯುವಕ – ಯುವತಿಯನ್ನು ಬಳಸಿಕೊಳ್ಳುವುದು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಇದೇ ಯುವತಿಯನ್ನು ಕೆಲ ಕಿಂಗ್ ಪಿನ್ …

Read More »

ಮಳೆಗೆ ಮನೆಯ ಗೋಡೆ ಕುಸಿದು ಅಣ್ಣ, ತಂಗಿ ದಾರುಣ ಸಾವು

ಬೆಂಗಳೂರು: ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಅಣ್ಣ, ತಂಗಿ ಮೃತಪಟ್ಟ ಘಟನೆ ನಡೆದಿದೆ. ತುಮಕೂರು ಮೂಲದ ಕಾವ್ಯ (19) ಹಾಗೂ ವೇಣುಗೋಪಾಲ್ (22) ಮೃತರು. ಬಿನ್ನಮಂಗಲದ ಕೃಷ್ಣಪ್ಪ ಎಂಬ ವ್ಯಕ್ತಿಗೆ ಸೇರಿದ ಜಾಗದಲ್ಲಿ ಕಟ್ಟಿದ್ದ ಕಾಂಪೌಂಡ್ ಗೋಡೆ ಪಕ್ಕದಲ್ಲಿದ್ದ ಮನೆ ಮೇಲೆ ಕುಸಿದಿದ್ದು, ಘಟನೆಯಲ್ಲಿ ಸಂಪ್ರಥ್ (22) ಎಂಬ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ನೆಲಮಂಗಲ ಟೌನ್ ಇನ್ಸ್ ಪೆಕ್ಟರ್ ಕುಮಾರ್ ಸ್ಥಳ ಪರಿಶೀಲನೆ ನಡೆಸಿ …

Read More »

ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 1ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆ ನೀಡಲು ಆದೇಶ: B.S.Y.

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 1ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಕ್ಷರಿ ಅವರು ಮಾಡಿಕೊಂಡ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ತಕ್ಷಣ ಹಿಂದಿನ ಬಾಕಿಯೂ ಸೇರಿ ಶೇ.11 ತುಟ್ಟಿ ಭತ್ಯೆಯನ್ನು ಜುಲೈ 1ರಿಂದ ಅನ್ವಯವಾಗುವಂತೆ ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ರಾಜ್ಯ ಸರ್ಕಾರದ ಈ ಆದೇಶದಿಂದ 6 ಲಕ್ಷ …

Read More »

ವಿಶೇಷ ಜಿಲ್ಲಾಧಿಕಾರಿ: ಐಎಎಸ್‌ ಅಧಿಕಾರಿ ನೇಮಕಕ್ಕೆ ಸೂಚನೆ

 ಕೆಎಎಸ್ ಅಧಿಕಾರಿಗಳಾದ ಎಂ. ಕೆ.ಜಗದೀಶ್ ಮತ್ತು ಬಸವರಾಜ್ ಅವರನ್ನು ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಹುದ್ದೆಗಳಿಗೆ ನೇಮಕ ಮಾಡಿದ್ದ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.   ನಗರದ ವಕೀಲ ವಾಸುದೇವ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ನೇತೃತ್ವದ ವಿಭಾಗೀಯ ಪೀಠ, ‘ಐಎಎಸ್ ಅಧಿಕಾರಿಗಳನ್ನೇ ಈ ಹುದ್ದೆಗಳಿಗೆ ನೇಮಕ ಮಾಡಬೇಕು’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ನಿರ್ದೇಶನ ನೀಡಿದೆ. ‘ಕರ್ನಾಟಕ ಭೂಕಂದಾಯ …

Read More »