Breaking News

ಸಿನೆಮಾ

ಸರಳ #ವಿವಾಹದೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ #ಚೇತನ್_ಹಾಗು_ಮೇಘ ದಂಪತಿ.

ಬೆಂಗಳೂರು: ನಟ ಚೇತನ್ ಅವರು ತನ್ನ ಬಾಳ ಸಂಗಾತಿ ಮೇಘ ಅವರೊಂದಿಗೆ ಗಾಂಧಿನಗರದ ಉಪ ರಿಜಿಸ್ಟ್ರಾರ್ ಕಛೇರಿಯಲ್ಲಿ ಇಂದು ಸರಳ ವಿವಾಹದ ಮೂಲಕ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಸವಣ್ಣ, ಪೆರಿಯಾರ್ ಮತ್ತು ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳಿಗೆ ಬದ್ದರಾಗಿ, ಸಿನಿಮಾದ ಜೊತೆ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ನಟ ಚೇತನ್ ಅವರು, ಆಡಂಬರದ ಮದುವೆಯ ಗೋಜಿಗೆ ಹೋಗದೆ ಸಂಬಂಧಿಕರು, ಆತ್ಮೀಯ ಒಡನಾಡಿಗಳು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾರೆ. …

Read More »

ಇತ್ತೀಚೆಗಷ್ಟೇ ಕೀನ್ಯಾ ಕಾಡಿನಲ್ಲಿ ವೈಲ್ಡ್‌ಲೈಫ್‌ ಫೋಟೋಗಳನ್ನು ಸೆರೆಹಿಡಿದಿದ್ದ ದರ್ಶನ್

ಚಾಲೇಂಜಿಂಗ್ ಸ್ಟಾರ್ ದರ್ಶನ್ ಹಾಗೂ ಟೀಂ ಮತ್ತೆ ಕಾಡಿನತ್ತ ಮುಖಮಾಡಿದ್ದು, ಈ ಬಾರಿ ಉತ್ತರಾಖಂಡ್‍ನ ಸತ್ತಲ್ ಫಾರೆಸ್ಟ್ ನಲ್ಲಿ ವನ್ಯಜೀವಿಗಳ ಛಾಯಾಗ್ರಹಣ ಮಾಡಲಿದೆ. ಹೌದು. ಇತ್ತೀಚೆಗಷ್ಟೇ ಕೀನ್ಯಾ ಕಾಡಿನಲ್ಲಿ ವೈಲ್ಡ್‌ಲೈಫ್‌ ಫೋಟೋಗಳನ್ನು ಸೆರೆಹಿಡಿದಿದ್ದ ದರ್ಶನ್ ಈಗ ಉತ್ತರಾಖಂದದ ಕಾಡಿನತ್ತ ಕ್ಯಾಮರಾ ಹಿಡಿದು ಹೊರಟಿದ್ದಾರೆ. ದೊಡ್ಡ ಕ್ಯಾಮೆರಾ ಹೆಗಲಿಗೆ ಹಾಕೊಂಡು ವೈಲ್ಡ್‌ಲೈಫ್‌ ಫೋಟೋಗ್ರಾಫರ್ ಟೀಂ ಜೊತೆ ಕಲ್ಲು, ಬಂಡೆಯ ನಡುವೆ ಸಾಗಿ ಕಾಡು ಸುತ್ತಿದ್ದಾರೆ. ಆ ದಟ್ಟಕಾಡಿನಲ್ಲಿ ದಾಸ ಮಾಡಿರುವ ಸಾಹಸಮಯ …

Read More »

ಸಾಮಾಜಿಕಬದಲಾವಣೆಯ ಕ್ರಾಂತಿಗಾಗಿ ಹೋರಾಟ ಮಾಡಬೇಕಿಲ್ಲ

ಬೆಂಗಳೂರು: ಸಾಮಾಜಿಕಬದಲಾವಣೆಯ ಕ್ರಾಂತಿಗಾಗಿ ಹೋರಾಟ ಮಾಡಬೇಕಿಲ್ಲ. ಅವರಿವರ ಕಾಲು ಹಿಡಿಯಬೇಕಿಲ್ಲ. ನಿನ್ನ ವೋಟ್ ನಿನ್ನ ಅಸ್ತ್ರ ಎಂದು ನಟ, ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ‌ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟ ಉಪೇಂದ್ರ, ‘ನಿಮ್ಮ ದೇಶದ ಭವಿಷ್ಯ ನಿಮ್ಮ ಬೆರಳ ತುದಿಯಲ್ಲಿಯೇ ಇದೆ’ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಬದಲಾವಣೆಯ ಕ್ರಾಂತಿಗಾಗಿ ಹೋರಾಟ ಮಾಡಬೇಕಿಲ್ಲ. ಅವರಿವರ ಕಾಲು ಹಿಡಿಯಬೇಕಿಲ್ಲ. ನಿನ್ನ ವೋಟ್ ನಿನ್ನ ಅಸ್ತ್ರ..ಅರ್ಥ …

Read More »

ಬೆಳಗಾವಿಯಲ್ಲಿ ಚಿತ್ರೀಕರಣಗೊಂಡಿರುವ ‘ಗಡಿನಾಡು’ ಬೆಳ್ಳಿ ಪರದೆಗೆ ………

ಬೆಳ್ಳಿ ಪರದೆ ಮೇಲೆ ಯುವ ತಂಡವು ಗಡಿನಾಡು ಚಿತ್ರದ ಮೂಲಕ ಸದ್ದು ಮಾಡಲು ಬರುತ್ತಿದ್ದಾರೆ. ಕರ್ನಾಟಕದ ಗಡಿ ಭಾಗವಾಗಿರುವ ಬೆಳಗಾವಿಯಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ಗಡಿ ಸಮಸ್ಯೆ ಹಾಗೂ ನವೀರಾದ ಪ್ರೇಮ ಕಾವ್ಯವನ್ನು ತೆರದಿಡಲು ತಂಡ ಸಜ್ಜಾಗಿದೆ. ಈ ಚಿತ್ರ ಇದೇ ವಾರ ರಾಜ್ಯದಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿದೆ. ನಾಗ್ ಹುಣಸೋಡ್ ನಿರ್ದೇಶನದ ಗಡಿನಾಡು ಚಿತ್ರ ನಿರ್ಮಾಪಕ ವಸಂತ್ ಮುರಾರಿ ದಳವಾಯಿ ಗಡಿನಾಡಿನಲ್ಲಿ ಗಮನಿಸಿದ ವಿಚಾರಗಳನ್ನು ಒಳಗೊಂಡಿದೆ. ಅಥಣಿ, …

Read More »

ಯಾವ ಕಾರಣಕ್ಕೂ ಕ್ಷಮೆ ಯಾಚಿಸುವುದಿಲ್ಲ ಸೂಪರ್‍ ಸ್ಟಾರ್ ರಜನಿಕಾಂತ್

ಚೆನ್ನೈ, ಜ.21- ದ್ರಾವಿಡ ಚಳವಳಿಯ ಪಿತಾಮಹ ಪೆರಿಯಾರ್ ವಿರುದ್ಧ ಹೇಳಿಕೆ ನೀಡಿ ಅವರ ವರ್ಚಸ್ಸಿಗೆ ಧಕ್ಕೆ ತಂದಿರುವ ಸೂಪರ್‍ ಸ್ಟಾರ್ ರಜನಿಕಾಂತ್ ಅವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದ ದ್ರಾವಿಡರ್ ವಿದುತಲೈ ಕಳಗಂ ಸಂಘಟನೆಯ ಸದಸ್ಯರಿಗೆ ರಜನಿ ತಮ್ಮ ಶೈಲಿಯಲ್ಲೇ ಜವಾಬು ನೀಡಿರುವುದೇ ಅಲ್ಲದೆ ಯಾವ ಕಾರಣಕ್ಕೂ ಕ್ಷಮೆ ಯಾಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ರಜನಿ ಅವರು ಸಮಾರಂಭವೊಂದರಲ್ಲಿ 1971ರಲ್ಲಿ ಸಮಾಜ ದಲ್ಲಿನ ಮೌಢ್ಯತೆ ನಿರ್ಮೂಲನೆ ಯನ್ನು ಹೋಗಲಾಡಿಸಲು ಪೆರಿಯಾರ್ ಅವರು ಸಾಕಷ್ಟು …

Read More »

ವಿಷ್ಣುವರ್ಧನ್ ಪುಣ್ಯಸ್ಮರಣೆ ನಿಮಿತ್ಯ ಕರುನಾಡ ಸಿರಿ ಪ್ರಶಸ್ತಿ ಪ್ರಧಾನ ಹಾಗೂ 1001 ಸಸಿ ನೆಡುವ ಕಾರ್ಯಕ್ರಮ

ವಿಷ್ಣುವರ್ಧನ್ ಪುಣ್ಯಸ್ಮರಣೆ ನಿಮಿತ್ಯ ಕರುನಾಡ ಸಿರಿ ಪ್ರಶಸ್ತಿ ಪ್ರಧಾನ ಹಾಗೂ 1001 ಸಸಿ ನೆಡುವ ಕಾರ್ಯಕ್ರಮ ಜೇವರ್ಗಿ : ಸಹಾಹ ಸಿಂಹ ಡಾ|| ವಿಷ್ಣುವರ್ಧನರವರ 10ನೇ ಪುಣ್ಯಸ್ಮರಣೆ ನಿಮಿತ್ಯ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐದು ಜನ ಸಾಧಕರಿಗೆ ಹಾಗೂ 1001 ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ|| ವಿಷ್ಣುಸೇನಾ ಸಮಿತಿ ತಾಲೂಕ ಅಧ್ಯಕ್ಷರಾದ ಬಸವರಾಜ ಬಾಗೇವಾಡಿ ಹೇಳಿದರು. ಪಟ್ಟಣದ ಪ್ರವಾಸಿ ಮಂದೀರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, …

Read More »

ದುನಿಯಾ ವಿಜಯ್ ಗೆ ಇಂದು 46ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ ತಲ್ವಾರ್ ನಿಂದ ಕೇಕ್ ಕಟ್..ವಿಜಿ ವಿರುದ್ಧ ಕೇಸ್

ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಗೆ ಇಂದು 46ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಸೇರಿ ತಲ್ವಾರ್ ನಿಂದ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ತಲ್ವಾರ್ ನಲ್ಲಿ ಕೇಕ್ ಕತ್ತರಿಸೋ ಮೂಲಕ ದುನಿಯಾ ವಿಜಯ್ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕಾನೂನಿನ ಪ್ರಕಾರ ಯಾವುದೆ ಆಯುಧಗಳನ್ನು ಸಾರ್ವಜನಿಕವಾಗಿ ಬಳಸುವಂತಿಲ್ಲ ಹಾಗೂ ಪ್ರದರ್ಶಿಸುವಂತಿಲ್ಲ. ಐದು ಇಂಚಿಗೂ ಉದ್ದದ ಕತ್ತಿಯನ್ನು …

Read More »

ಬೆಳ್ಳಿ ಪರದೆ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಶ್ರೀ ಭರತ ಬಾಹುಬಲಿ ಇದೇ ವಾರ ರಾಜ್ಯಾದ್ಯಂತ ಬಿಡುಗಡೆ

ಬೆಳ್ಳಿ ಪರದೆ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಶ್ರೀ ಭರತ ಬಾಹುಬಲಿ ಇದೇ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.  ಚಿತ್ರದ ನಾಯಕ ಕಂ ನಿರ್ದೇಶಕ ಮಂಜು ಮಾಂಡವ್ಯ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರೊಮೋಷನ್‍ನ ಕೊನೆಯ ಹಂತವಾಗಿ ಮಾಧ್ಯಮಗಳ ಮುಂದೆ ಚಿತ್ರತಂಡ ಬಂದಿತ್ತು. ಈ ಸಂದರ್ಭದಲ್ಲಿ ಹಿರಿಯ ನಟ ಚರಣ್ ರಾಜ್ ಅವರ ಮಗನ ಪರಿಚಯವನ್ನು ನಿರ್ದೇಶಕರು ಮಾಡಿಕೊಟ್ಟಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಮಂಜು ಮಾಂಡವ್ಯ ಚಿತ್ರದ ಟ್ರೇಲರ್‍ನಲ್ಲಿ …

Read More »

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಇದೇ 21ರಂದು ವಿಚಾರಣೆಗೆ ಹಾಜರಾಗುವಂತೆ ಐಟಿ ನೋಟಿಸ್

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಸಿಲುಕಿರುವ ಬಹುಭಾಷಾ ನಟಿ ರಶ್ಮಿಕಾ ತಂದೆ ಮದನ್ ಮಂದಣ್ಣ ಹಾಗೂ ತಾಯಿ ಸುಮನ್ ಅವರಿಗೆ ಪ್ರತ್ಯೇಕವಾಗಿ ನೋಟಿಸ್ ಜಾರಿ ಬೆಂಗಳೂರು,ಜ.18- ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಸಿಲುಕಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಇದೇ 21ರಂದು(ಮಂಗಳವಾರ) ವಿಚಾರಣೆಗೆ ಹಾಜರಾಗುವಂತೆ ಐಟಿ ನೋಟಿಸ್ ಜಾರಿ ಮಾಡಿದೆ. ಐಟಿ ಅಧಿಕಾರಿಗಳು ರಶ್ಮಿಕಾ ಮಂದಣ್ಣ , ಅವರ ತಂದೆ ಮದನ್ ಮಂದಣ್ಣ ಹಾಗೂ ತಾಯಿ …

Read More »

ಭಜರಂಗಿ 2 ಸೆಟ್‍ನಲ್ಲಿ ಬೆಂಕಿ, 1 ಕೋಟಿ ವೆಚ್ಚದ ಸೆಟ್ ಭಸ್ಮ

ನೆಲಮಂಗಲ, ಜ.16- ಸೆಂಚುರಿಸ್ಟಾರ್ ಶಿವರಾಜ್‍ಕುಮಾರ್ ಅಭಿನಯದ ಭಜರಂಗಿ 2 ಚಿತ್ರದ ಸೆಟ್‍ಗೆ ಇಂದು ಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಸಿದೆ.  ಹರ್ಷ ನಿರ್ದೇಶನದ ಭಜರಂಗಿ 2 ಚಿತ್ರದ ಚಿತ್ರೀಕರಣವು ನೆಲಮಂಗಲದ ಬಳಿ ಇರುವ ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ 1 ಕೋಟಿ ರೂ. ವೆಚ್ಚದ ಸೆಟ್‍ನ್ನು ನಿರ್ಮಿಸಲಾಗಿತ್ತು. ಇಂದಿನ ಚಿತ್ರೀಕರಣದಲ್ಲಿ ನಾಯಕ ನಟ ಶಿವರಾಜ್‍ಕುಮಾರ್ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಸಹಕಲಾವಿದರು ಪಾಲ್ಗೊಂಡಿದ್ದು ಶೂಟಿಂಗ್ ನಡೆಯುವ …

Read More »