Breaking News

ರಾಷ್ಟ್ರೀಯ

ವಿಪಕ್ಷಗಳಿಗೆ ನೆರವಾಗುವಂತೆ ಮಾತನಾಡಲು ನಾನು ಅವರ ಬಂಧು ಅಲ್ಲ:ರಾಜು ಕಾಗೆ

ಬೆಂಗಳೂರು: “ನಾನು ಸಿಎಂ ಮೇಲೆ, ಮಂತ್ರಿಗಳ ಮೇಲೆ ಆರೋಪ ಮಾಡಿಲ್ಲ. ಈ ವ್ಯವಸ್ಥೆಯ ಬಗ್ಗೆ ಆರೋಪ ಮಾಡಿದ್ದೇನೆ. ವ್ಯವಸ್ಥೆಯ ಬಗ್ಗೆ ನನಗೆ ಅಸಮಾಧಾನವಿದೆ. ನಾನು ಮಾಡಿದ ಆರೋಪಕ್ಕೆ ಈಗಲೂ ಬದ್ಧ” ಎಂದು ಕಾಂಗ್ರೆಸ್​ ಶಾಸಕ ರಾಜು ಕಾಗೆ ಸ್ಪಷ್ಟನೆ ನೀಡಿದ್ದಾರೆ. ಶಾಸಕರ ಭವದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ವ್ಯವಸ್ಥೆ ಸುಧಾರಣೆ ಆಗಬೇಕು. ನಮ್ಮ ಸರ್ಕಾರದ ಆಡಳಿತ ಚುರುಕಾಗಬೇಕು. ನನ್ನ ಕ್ಷೇತ್ರದಲ್ಲಿ ಸಮುದಾಯದ ಭವನ, ಸಿಸಿ ರಸ್ತೆ ಮಾಡಲು ಅವಕಾಶ …

Read More »

ಮಾತು ಕೇಳಲಿಲ್ಲವೆಂದು ದಲಿತರಿಗೆ ಬಹಿಷ್ಕಾರ ಹಾಕಿದ ಸವರ್ಣೀಯರು

ಯಾದಗಿರಿ, ಜೂನ್​ 25: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 77 ವರ್ಷ ಕಳೆಯುತ್ತಾ ಬಂದಿದೆ. ಆದರೂ ದೇಶದಲ್ಲಿ ಇನ್ನು ಕೂಡ ಅನಿಷ್ಟ ಪದ್ಧತಿಗಳು ಜೀವಂತ ಇದೆ. ಕಾನೂನು ಇದರೂ ದಲಿತರ (Dalits) ಮೇಲೆ ಇನ್ನು ಕೂಡ ದೌರ್ಜನ್ಯಗಳು ನಡೆಯುತ್ತಿವೆ. ಇಂತಹದೇ ಒಂದು ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿನ್ನಕಾರ ಗ್ರಾಮದಲ್ಲಿ ನಡೆದಿದ್ದು, ಸವರ್ಣೀಯರ (upper caste) ಮಾತು ಕೇಳಲಿಲ್ಲ ಎನ್ನುವ ಕಾರಣಕ್ಕೆ ದಲಿತರಿಗೆ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಜಿಲ್ಲೆಯ ಚಿನ್ನಕಾರ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ …

Read More »

ಕೇಂದ್ರ ವಿತ್ತ ಸಚಿವೆ – ಸಿಎಂ ಭೇಟಿ; ಬೆಳವಣಿಗೆಗೆ ಪೂರಕವಾಗಿರುವ ವಿಧಾನ ಅನುಸರಿಸಲು 16ನೇ ಹಣಕಾಸು ಆಯೋಗಕ್ಕೆ ಸೂಚಿಸುವಂತೆ ಸಿಎಂ ಮನವಿ

ನವದೆಹಲಿ/ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ರಾಜ್ಯಗಳ ನಡುವೆ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ ಬೆಳವಣಿಗೆಗೆ ಪೂರಕವಾಗಿರುವ ವಿಧಾನವನ್ನು ಅನುಸರಿಸಲು 16ನೇ ಹಣಕಾಸು ಆಯೋಗಕಕ್ಕೆ ಪ್ರತಿಪಾದಿಸುವಂತೆ ವಿನಂತಿಸಿದರು. 15ನೇ ಹಣಕಾಸು ಆಯೋಗ ತನ್ನ ಶಿಫಾರಸಿನಲ್ಲಿ ಕರ್ನಾಟಕದ ತೆರಿಗೆ ಪಾಲನ್ನು ಶೇ.4.713 ರಿಂದ ಶೇ.3.647 ಕ್ಕೆ ಇಳಿಕೆ ಮಾಡಿದ್ದರಿಂದ ರಾಜ್ಯದ ತೆರಿಗೆ ಪಾಲು 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದ ಅವಧಿಯಲ್ಲಿ …

Read More »

ರಾಷ್ಟ್ರಪತಿಗಳು ದ್ರೌಪದಿ ಮುರ್ಮು ಅವರನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ರಾಷ್ಟ್ರಪತಿ‌ ನಿವಾಸದಲ್ಲಿ ಭೇಟಿ

ಗೌರವಾನ್ವಿತ ರಾಷ್ಟ್ರಪತಿಗಳು ದ್ರೌಪದಿ ಮುರ್ಮು ಅವರನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ರಾಷ್ಟ್ರಪತಿ‌ ನಿವಾಸದಲ್ಲಿ ಭೇಟಿಯಾಗಿ, ಸನ್ಮಾನಿಸಿದರು ಭಾರತ ಸರ್ಕಾರದೊಂದಿಗೆ ಮಾನ್ಯ ರಾಷ್ಟ್ರಪತಿಗಳ ಅನುಮೋದನೆಗಾಗಿ ಬಾಕಿ ಇರುವ ರಾಜ್ಯದ ಕಾನೂನು ಪ್ರಸ್ತಾವನೆಗಳ ಕುರಿತು ಈ ಸಂದರ್ಭದಲ್ಲಿ ಚರ್ಚೆ ನಡೆಸಿದರು. ಈ ವೇಳೆ ಸಚಿವರಾದ ಕೆ.ಜೆ.ಜಾರ್ಜ್, ಹೆಚ್.ಸಿ.ಮಹದೇವಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ‌ ರಜನೀಶ್ ಅವರು ಉಪಸ್ಥಿತರಿದ್ದರು. #satishjarkiholi #delhi

Read More »

ಕನ್ನಡ ಚಿತ್ರರಂಗದ ಉಳಿವಿಗೆ ಸರ್ಕಾರವೇ ಚಿತ್ರಮಂದಿರ ನಿರ್ಮಿಸಬೇಕು’

ಗಂಗಾವತಿ: ”ಕನ್ನಡ ಚಿತ್ರರಂಗದ ಪಾಲಿಗೆ 70ರಿಂದ 90ರ ದಶಕ ಸುವರ್ಣಯುಗವಾಗಿತ್ತು. ಆದ್ರೀಗ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಕನ್ನಡ ಚಿತ್ರರಂಗದ ಅಳಿವು-ಉಳಿವು ಸರ್ಕಾರದ ಕೈಯಲ್ಲಿದೆ” ಎಂದು ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ತಿಳಿಸಿದರು. ‘ಸೆಪ್ಟಂಬರ್ 10’ ಶೀರ್ಷಿಕೆಯ ಚಿತ್ರದ ಪ್ರಚಾರಾರ್ಥ ಆಗಮಿಸಿದ್ದ ಅವರು ನಗರದಲ್ಲಿ ಈ ಬಗ್ಗೆ ಮಾತನಾಡಿದರು. ‘…ಇಲ್ಲವಾದಲ್ಲಿ ಇನ್ನೊಂದು 10-15 ವರ್ಷಕ್ಕೆ ಕನ್ನಡ ಚಿತ್ರರಂಗ ನಾಶ’: ಕನ್ನಡ ಸಿನಿಮಾಗಳು ಉಳಿಬೇಕಾದರೆ ಸರ್ಕಾರವೇ ಮಿನಿ ಥಿಯೇಟರ್​ಗಳನ್ನು ನಿರ್ಮಾಣ ಮಾಡಬೇಕು. ಕೇವಲ …

Read More »

ಬೆಂಗಳೂರು, ಶಿವಮೊಗ್ಗ, ಧಾರವಾಡ ಸೇರಿ ಕರ್ನಾಟಕದ ಹಲವೆಡೆ ಲೋಕಾಯುಕ್ತ ದಾಳಿ

ಬೆಂಗಳೂರು, ಜೂನ್ 24: ಶಿವಮೊಗ್ಗದ ಅರ್ಗ್ಯಾನಿಕ್ ಫಾರ್ಮಿಂಗ್ ಸಹಾಯಕ ನಿರ್ದೇಶಕ ಪ್ರದೀಪ್, ಚಿಕ್ಕಮಗಳೂರು ನಗರಸಭೆ ಅಧಿಕಾರಿ ಲತಾಮಣಿ ಮನೆ ಮೇಲೆ ಸೇರಿದಂತೆ ಕರ್ನಾಟಕದ ವಿವಿಧ ಕಡೆಗಳಲ್ಲಿ ಲೋಕಾಯುಕ್ತ (Lokayukta) ಅಧಿಕಾರಿಗಳು ಮಂಗಳವಾರ ಮುಂಜಾನೆಯೇ ದಾಳಿ ನಡೆಸಿದ್ದಾರೆ. ಆನೇಕಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಜಿ.ಅಮರನಾಥ್, ಗದಗದ ಪಟ್ಟಣ ಪೊಲೀಸ್ ನಿರೀಕ್ಷಕ ಧ್ರುವರಾಜ್​, ಧಾರವಾಡ ಮಲಪ್ರಭಾ ಯೋಜನೆ ಇಂಜಿನಿಯರ್ ಅಶೋಕ್ ವಾಲ್ಸಂದ್, ಕಲಬುರಗಿ ಪಿಆರ್​ಇ ವಿಭಾಗದ ಇಇ ಮಲ್ಲಿಕಾರ್ಜುನ ಅಲಿಪುರ, ಸಣ್ಣೂರು ಗ್ರಾ.ಪಂ. ಪಿಡಿಒ ರಾಮಚಂದ್ರ ಮನೆ ಮೇಲೆಯೂ …

Read More »

ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಶಾಸಕ ಬಿ. ಆರ್. ಪಾಟೀಲ್ ಆರೋಪ

ಬೆಂಗಳೂರು : ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆಡಳಿತ ಪಕ್ಷದ ಶಾಸಕರ ಹೇಳಿಕೆಗೆ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ವಿಧಾನಸೌಧದಲ್ಲಿ ಇಂದು ಪ್ರತಿಕ್ರಿಯೆ ನೀಡಿದ್ದಾರೆ. ಜೆಡಿಎಸ್ ಶಾಸಕ ಎ. ಮಂಜು ಮಾತನಾಡಿ, ಈಗಾಗಲೇ ಕಾಂಗ್ರೆಸ್ ಶಾಸಕ ಬಿ. ಆರ್. ಪಾಟೀಲ್ ಅವರು ಒಂದು ರೀತಿಯಲ್ಲಿ ಮಾತನಾಡಿದ್ದಾರೆ. ಬಿ. ಆರ್. ಪಾಟೀಲ್ ಅವರ ಮಾದರಿಯಲ್ಲೇ ಶಾಸಕ ರಾಜು ಕಾಗೆ ಹೇಳಿದ್ದಾರೆ. ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದೆ. ಅದರ ಬಗ್ಗೆ ನನಗೂ …

Read More »

ಹಲವು ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಶವ ಹೂತುಹಾಕಿದ್ದೆ ಎಂದು ಶರಣಾಗಲು ಮುಂದಾದ ವ್ಯಕ್ತಿ!

ಮಂಗಳೂರು, ಜೂನ್ 23: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿರುವ ಹಲವು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಮುಚ್ಚಿಹಾಕುವುದಕ್ಕಾಗಿ ಮೃತದೇಹಗಳನ್ನು ಹೂತು ಹಾಕಿದ್ದೆ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗಲು ಮುಂದಾಗಿದ್ದಾನೆ. ಈ ಸಂಬಂಧ ವಕೀಲರೊಬ್ಬರ ಬಳಿ ವಿಚಾರ ವಿನಿಮಯ ಮಾಡಿಕೊಂಡಿರುವ ವ್ಯಕ್ತಿ, ಪೊಲೀಸರ ಸಮ್ಮುಖದಲ್ಲಿ ಶವಗಳನ್ನು ಹೊರತೆಗೆಯಲು ನಿರ್ಧರಿಸಿರುವುದಾಗಿ ಹೇಳಿಕೊಂಡಿದ್ದಾನೆ. ಆರೋಪಿ ಶರಣಾಗತಿಗೆ ಒಪ್ಪಿಕೊಂಡಿರುವ ಬಗ್ಗೆ ವಕೀಲರು ಬಿಡುಗಡೆ ಮಾಡಿದ ಮಾಹಿತಿ ಪತ್ರವೊಂದು ವೈರಲ್ ಆಗಿದ್ದು, ಈ ವಿಚಾರವಾಗಿ ಅಡ್ವೋಕೇಟ್ ಅನ್ನು …

Read More »

ಶಾಸಕ ಬಿ.ಆರ್.ಪಾಟೀಲ್ ಆರೋಪ ಸುಳ್ಳು: ಡಿಸಿಎಂ

ರಾಮನಗರ: ಹಣ ಪಡೆದು ಮನೆ ನೀಡಿದ್ದಾರೆ ಎಂಬ ಶಾಸಕ ಬಿ.ಆರ್.ಪಾಟೀಲ್ ಅವರ ಆರೋಪ ಸುಳ್ಳು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ ಹೇಳಿದರು. ಕನಕಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬ ಹೇಳಿದರೆ ಇದೆಲ್ಲವೂ ಆಗುತ್ತದೆಯೇ?. ನಾನು ಅಥವಾ ನೀವು ಬಂದು ಗ್ರಾಮ ಸಭೆಯಲ್ಲಿ ಮನೆ ಕೇಳಿದ ತಕ್ಷಣ ಕೊಡಲು ಆಗುತ್ತದೆಯೇ? ಎಂದು ಪ್ರಶ್ನಿಸಿದರು. ಮನೆ ನೀಡಲು ತೀರ್ಮಾನ ಮಾಡುವವರು ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಸೇರಿದಂತೆ ಎಲ್ಲೆಲ್ಲಿ ಮನೆ ನಿಡಬೇಕೋ ಆಯಾ ಸ್ಥಳೀಯ …

Read More »

ಹೂತಿಟ್ಟ ಶವದ ಹಿಂದಿನ ಕಾರಣ ಬಯಲು

ಚಾಮರಾಜನಗರ: ಹೂತಿಟ್ಟ ಶವದಿಂದ ಮುಂಗೈ ಹೊರಬಂದ ಪ್ರಕರಣದಲ್ಲಿ ಮಹಿಳೆಯ ಗುರುತು ಪತ್ತೆಯಾಗಿದ್ದು, ಕೊಲೆಗೈದ ಪ್ರಿಯಕರ ಸಿಕ್ಕಿಬಿದ್ದಿದ್ದಾನೆ. ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರದ ಸುವರ್ಣಾವತಿ ನದಿ ದಂಡೆಯಲ್ಲಿ ಗುರುವಾರ ರಾತ್ರಿ ಶವದ ಮುಂಗೈ ಕಾಣಿಸಿಕೊಂಡಿತ್ತು. ಮೋಳೆ ಗ್ರಾಮದ ಸೋನಾಕ್ಷಿ (29) ಎಂಬಾಕೆಯ ಶವ ಇದಾಗಿದೆ. ಈಕೆಯನ್ನು ಪ್ರಿಯಕರ ಮಾದೇಶ(35) ಕೊಲೆ ಮಾಡಿ, ಹೂತು ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೋನಾಕ್ಷಿ ತನ್ನ ಸೋದರ ಮಾವ ವಿಜಯ್​ ಕುಮಾರ್​ ಎಂಬವರನ್ನು ಮದುವೆಯಾಗಿದ್ದರೂ ಸಂಬಂಧದಲ್ಲಿ …

Read More »