ಬೆಂಗಳೂರು: ‘ಕಾವೇರಿ ನೀರು, 110 ಹಳ್ಳಿಗಳ ಅಭಿವೃದ್ದಿ, ಎತ್ತಿನಹೊಳೆ ಯೋಜನೆ, ಉದ್ಯಾನಗಳ ಅಭಿವೃದ್ದಿ, ಒಳಚರಂಡಿ, ಮೇಲ್ಸೇತುವೆಗಳು ಸೇರಿದಂತೆ ಅಭಿವೃದ್ದಿ ಕೆಲಸಗಳು ಕಾಂಗ್ರೆಸ್ ಆಡಳಿತದಲ್ಲಿ ಮಾತ್ರ ಸಾಧ್ಯವಾಗಿವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು. ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಬಿಜೆಪಿಯಿಂದ ಯಾವುದೇ ಅಭಿವೃದ್ದಿ ಕೆಲಸ ನಡೆಯುತ್ತಿಲ್ಲ. ಭ್ರಷ್ಟಾಚಾರ, ದಬ್ಬಾಳಿಕೆ, ಅಕ್ರಮ, ಅನ್ಯಾಯ, ಅಭಿವೃದ್ದಿ ಹೆಸರಿನಲ್ಲಿ ಸಾವಿರಾರು ಕೋಟಿ ಲೂಟಿ …
Read More »ಸಂಭವನೀಯ ಕೋವಿಡ್ ಮೂರನೇ ಅಲೆ ಎದುರಿಸಲು ಸನ್ನದ್ಧರಾಗಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಸಂಭವನೀಯ ಕೋವಿಡ್ ಮೂರನೇ ಅಲೆ ಎದುರಿಸಲು ಈಗಿನಿಂದಲೇ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಾಲೂಕಾಡಳಿತಕ್ಕೆ ಸೂಚನೆ ನೀಡಿದರು. ಸೋಮವಾರ ಸಂಜೆ ಇಲ್ಲಿಯ ತಹಶೀಲ್ದಾರ ಕಛೇರಿಯಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಗರೀಕರ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಅವಳಿ ತಾಲೂಕುಗಳಲ್ಲಿ ಕೋವಿಡ್ ಸೊಂಕಿತರ ಸಂಖ್ಯೆ ಪ್ರಸಕ್ತ …
Read More »ಕೆಎಂಎಫ್ ವಾರ್ಷಿಕವಾಗಿ 17 ಸಾವಿರ ಕೋಟಿ ರೂ ಗಳ, ವ್ಯವಹಾರ ನಡೆಸುತ್ತಿರುವ ರಾಜ್ಯದ ನಂ1 ಸಹಕಾರಿ ಸಂಸ್ಥೆ
ಮೂಡಲಗಿ: ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳಿಂದ ಕೂಡಿರುವ ಕೆ.ಎಂ.ಎಫ್ ವಾರ್ಷಿಕವಾಗಿ ಸುಮಾರು 17 ಸಾವಿರ ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿರುವ ರಾಜ್ಯದ ಅಗ್ರಗಣ್ಯ ಸಹಕಾರಿ ಸಂಸ್ಥೆಯಾಗಿದೆ. ಈ ಮೂಲಕ ಹೈನೋದÀ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ರೈತರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಸೋಮವಾರದಂದು ತಾಲೂಕಿನ ನಾಗನೂರು ಹಾಲು ಉತ್ಪಾದಕರ ಸಹಕಾರಿ ಸಂಘದ …
Read More »ಅರಭಾವಿ, ಕಲ್ಲೊಳ್ಳಿ, ನಾಗನೂರ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರ ಭರ್ಜರಿ ಜಯ. ಸಂಸದ ಈರಣ್ಣ ಕಡಾಡಿಯವರಿಗೆ ತೀವ್ರ ಮುಖಭಂಗ
ಮೂಡಲಗಿ : ಕಳೆದ ಸೋಮವಾರದಂದು ಜರುಗಿದ ತಾಲೂಕಿನ ಕಲ್ಲೋಳಿ, ನಾಗನೂರ, ಅರಭಾವಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರೇ ಭರ್ಜರಿ ಜಯ ಸಾಧಿಸುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಭದ್ರಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಗಳ ಕಮಾಲ, : ಮತ್ತೆ ಸಾಹುಕಾರರಿಗೆ ಜೈ ಎಂದ ಪಕ್ಷೇತರ ವಿಜಯ ಶಾಲಿ ಅಭ್ಯರ್ಥಿಗಳು.. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ 16 ಸ್ಥಾನಗಳ …
Read More »ವಡೇರಹಟ್ಟಿಯ ಇಂದ್ರವೇಣಿ ಹಳ್ಳಕ್ಕೆ ಹರಿಯುತ್ತಿರುವ ತ್ಯಾಜ್ಯ ಮಿಶ್ರಿತ ರಾಸಾಯನಿಕ ನೀರು ವಿರೋಧಿಸಿ
ವಡೇರಹಟ್ಟಿಯ ಇಂದ್ರವೇಣಿ ಹಳ್ಳಕ್ಕೆ ಹರಿಯುತ್ತಿರುವ ತ್ ಮೂಡಲಗಿ : ತಾಲೂಕಿನ ವಡೇರಹಟ್ಟಿಯ ಇಂದ್ರವೇಣಿ ಹಳ್ಳಕ್ಕೆ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ್ಸ್‍ನಿಂದ ತ್ಯಾಜ್ಯ ಮಿಶ್ರಿತ ರಾಸಾಯನಿಕ ನೀರು ಬಿಡುವುದನ್ನು ವಿರೋಧಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ. ಮಂಗಳವಾರದಂದು ವಡೇರಹಟ್ಟಿ ಗ್ರಾಮದ ಸುಮಾರು ಇನ್ನೂರಕ್ಕೂ ಹೆಚ್ಚು ಜನರು ಇಂದು ತಹಶೀಲ್ದಾರ ಕಛೇರಿಗೆ ಆಗಮಿಸಿ ಕಾರ್ಖಾನೆಯ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆಹಾರ ಮತ್ತು ನಾಗರೀಕ ಸರಬರಾಜು …
Read More »ಕಲ್ಲೋಳಿ, ನಾಗನೂರ, ಅರಭಾವಿ ಪಟ್ಟಣ ಪಂಚಾಯತಿ ಚುನಾವಣೆ ನಿಮಿತ್ಯ ಪೂರ್ವಭಾವಿ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಪಟ್ಟಣ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡುವಾರು ಸಭೆಗಳನ್ನು ನಡೆಸಿ ನಾಳೆಯೊಳಗೆ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಾಗಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಸೋಮವಾರದಂದು ಮಾರುತಿ ದೇವಸ್ಥಾನದ ಸಭಾ ಭವನದಲ್ಲಿ ಪಟ್ಟಣ ಪಂಚಾಯತಿ ಚುನಾವಣೆ ನಿಮಿತ್ಯ ಜರುಗಿದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಸಮುದಾಯದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು. ಇದೇ ತಿಂಗಳ 27 ರಂದು …
Read More »ರಾಮ ರಾಮ ಅಂತಾರೆ ರಾಮನೇನು ಇವರಪ್ಪನ ಮನೆಯ ಸ್ವತ್ತಲ್ಲ : ಮಾಜಿ ಸಚಿವ ಹೆಚ್.ಆಂಜನೇಯ
ಬಾಗಲಕೋಟೆ : ಮತಾಂತರ ಅದು ವ್ಯಕ್ತಿಯ ಅಭಿವ್ಯಕ್ತಿತ್ವ ಸ್ವಾತಂತ್ರ್ಯವಾಗಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾನೀಗ ಹಿಂದೂ ಧರ್ಮದಲ್ಲಿ ಇದ್ದೇನೆ. ರಾಮ ರಾಮ ಅಂತಾರೆ ರಾಮನೇನು ಇವರಪ್ಪನ ಮನೆಯ ಸ್ವತ್ತಲ್ಲ. ರಾಮನಿಗೆ ಅತಿ ಹತ್ತಿರದವನು ಆಂಜನೇಯ, ಆಂಜನೇಯ ಇಲ್ಲದೆ ರಾಮನಿಲ್ಲ. ರಾಮನಿಲ್ಲದ ಆಂಜನೇಯ ಇಲ್ಲ ಎಂದು ಟಾಂಗ್ ನೀಡಿದರು. ನನ್ನ ಹೆಸರು ನಮ್ಮವ್ವ ಆಂಜನೇಯ ಅಂತ್ಹೇಳಿ ಇಟ್ಟಿದ್ದಾಳೆ. ನಾನು ಹಿಂದೂಧರ್ಮದಲ್ಲಿ ಇದ್ದೇನೆ, ಕಾಂಗ್ರೆಸ್‌ನಲ್ಲಿ ಇದ್ದೇನೆ. ಕೆಲವರು …
Read More »ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ.
ಬೆಂಗಳೂರು: ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರಿಗೆ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಕೊಡಬಾರದು ಎಂದು ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗದ ಮುಖಾಂತರ ಪತ್ರ ಬರೆಯಲಾಗುತ್ತದೆ. ಕಾಂಗ್ರೆಸ್ನಿಂದ ನಾಮನಿರ್ದೇಶಿತರಾದ ಸದಸ್ಯರಿಗೆ ಮತದಾನ ಮಾಡದಂತೆ ಸೂಚನೆ ನೀಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಬೆಂಗಳೂರು ಅಭ್ಯರ್ಥಿಯಿಂದ ಈ ವಿಚಾರವಾಗಿ ಅರ್ಜಿ ಸಲ್ಲಿಸಿ, ನಾಮನಿರ್ದೇಶಿತರ ಹಕ್ಕು ಪ್ರಶ್ನಿಸಿ ಕೋರ್ಟ್ಗೆ …
Read More »ಸ್ವಕ್ಷೇತ್ರದಲ್ಲಿ ಗೆಲ್ಲುವ ಯೋಗ್ಯತೆ ಇಲ್ಲಂದ್ರ ಯಾಕ ನಿಲ್ಲಬೇಕು?: ಚಿಮ್ಮನಕಟ್ಟಿ
ಬಾಗಲಕೋಟೆ: ‘ಸ್ವಕ್ಷೇತ್ರದಲ್ಲಿ ಗೆಲ್ಲುವ ಯೋಗ್ಯತೆ ಇಲ್ಲಂದ್ರ ಇಲ್ಲಿ ಯಾಕ ನಿಲ್ಲಬೇಕು? ನಮಗ ಯಾಕ ಗಂಟ ಬಿದ್ರಿ ನೀವು’ ಎಂದು ವಿಧಾನ ಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಸೋಮವಾರ ನೇರವಾಗಿಯೇ ಪ್ರಶ್ನಿಸಿದರು. ನಮಗ ಯಾಕ ಗಂಟ ಬಿದ್ರಿ ನೀವು’ ಎಂದು ವಿಧಾನ ಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಸೋಮವಾರ ನೇರವಾಗಿಯೇ ಪ್ರಶ್ನಿಸಿದರು. ಬಾದಾಮಿಯಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ …
Read More »ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ 109 ಜನರಿಗೆ ಕೋವಿಡ್ ಪಾಸಿಟಿವ್,ಕೇರಳದಿಂದ ಆಗಮಿಸಿರುವ 23 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢ
ತುಮಕೂರು: ಕೇರಳದಿಂದ ಆಗಮಿಸಿರುವ 23 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ಮೂರು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಲಲ್ಲಿ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಾದ್ಯಂತ ಆತಂಕ ಮನೆ ಮಾಡಿದೆ. ಅರುಣ ನರ್ಸಿಂಗ್ ಕಾಲೇಜಿನ 3, ಸಿದ್ಧಂಗಂಗಾ ನರ್ಸಿಂಗ್ ಕಾಲೇಜಿನ 8 ಹಾಗೂ ವರದರಾಜ ಕಾಲೇಜಿನ 12 ವಿದ್ಯಾರ್ಹಿಗಳು ಸೇರಿದಂತೆ ಒಟ್ಟು 23 ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ಸೋಂಕಿತ ವಿದ್ಯಾರ್ಥಿಗಳನ್ನು ಐಸೋಲೇಷನ್ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. …
Read More »