Breaking News

ಬೆಂಗಳೂರು

ಗೋವಾ ಕನ್ನಡಿಗರ ರಕ್ಷಣೆಗೆ ಆಗ್ರಹಿಸಿ ಪ್ರತಿ ಪಕ್ಷ ಧರಣಿ- ಸಿಎಂ ಉತ್ತರಕ್ಕೆ ಬಿಗಿಪಟ್ಟು

ಬೆಂಗಳೂರು: ಗೋವಾದಲ್ಲಿ ಇರುವ ಕನ್ನಡಿಗರ ಸಮಸ್ಯೆ ವಿಧಾನ ಪರಿಷತ್ ನಲ್ಲಿಂದು ಪ್ರತಿ ಧ್ವನಿಸಿತು. ಗೋವಾ ಕನ್ನಡಿಗರನ್ನು ರಕ್ಷಣೆ ಮಾಡುವಂತೆ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಮುಖ್ಯಮಂತ್ರಿಗಳು ಉತ್ತರ ನೀಡುವಂತೆ ವಿಪಕ್ಷಗಳು ಒತ್ತಾಯ ಮಾಡಿದರು. ಸದನದಲ್ಲಿ ಗದ್ದಲ ಕೋಲಾಹಲಕ್ಕೆ ಸೃಷ್ಟಿಯಾಗಿದ್ದರಿಂದ ಕಲಾಪವನ್ನು ಮುಂದೂಡಿದ ಘಟನೆ ಕೂಡ ನಡೀತು. ವಿಧಾನ ಪರಿಷತ್ ಶೂನ್ಯವೇಳೆ ಕಲಾಪದಲ್ಲಿ ಗೋವಾದಲ್ಲಿ ಪೊಗೊ ಕಾಯಿದೆಯಿಂದ ಸಾವಿರಾರು ಕನ್ನಡಿಗರು ಆತಂಕದಲ್ಲಿ ಇದ್ದಾರೆ ಎಂದು ಬಸವರಾಜ …

Read More »

ಬೆಂಗಳೂರು: :ನಾನು ನಿರ್ಭಯಾ ತಾಯಿ ಪಾತ್ರ ಮಾಡ್ತೇನೆ: ಮಾಳವಿಕಾ

ಬೆಂಗಳೂರು: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಯಾರಾದರೂ ಸಿನಿಮಾ ಮಾಡಿದರೆ ಹೇಳಿ ನಾನು ನಿರ್ಭಯಾ ತಾಯಿ ಪಾತ್ರವನ್ನು ಮಾಡುತ್ತೇನೆ ಎಂದು ಹಿರಿಯ ನಟಿ ಮಾಳವಿಕಾ ಅವಿನಾಶ್ ಹೇಳಿದ್ದಾರೆ. ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಇಂದು ನಿರ್ಭಯಾ ದೋಷಿಗಳಿಗೆ ಮರಣದಂಡನೆ ಆಗಿದೆ. ನಿರ್ಭಯಾಳಿಗೆ ಇಂದು ನ್ಯಾಯ ಸಿಕ್ಕಿದೆ. ಇದು ದೇಶದ ಪ್ರತಿಯೊಬ್ಬ ಮಗಳ ಗೆಲವು ಎಂದು ನಿರ್ಭಯಾ ತಾಯಿ ಆಶಾದೇವಿ ತಮ್ಮ ಮೊದಲ …

Read More »

ಸಾರಥಿ ಹೆಗಲ ಮೇಲೆ ಕುಳಿತ ಪುಟ್ಟ ರಾಮನ ಪರಿಚಯಿಸಿದ ತರುಣ್ ಸುಧೀರ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಜೈಶ್ರೀರಾಮ್ ಹಾಡಿನಲ್ಲಿ ಕಾಣಿಸಿಕೊಂಡ ಪುಟ್ಟ ರಾಮನನ್ನು ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಪರಿಚಯ ಮಾಡಿಕೊಟ್ಟಿದ್ದಾರೆ. ತರುಣ್ ಸುಧೀರ್ ನಿರ್ದೇಶನ ಮತ್ತು ಡಿಬಾಸ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮುಂದಿನ ಏಪ್ರಿಲ್‍ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಹಿಂದೆ ಚಿತ್ರತಂಡ ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ದರ್ಶನ್ ಅವರ ಜೊತೆ ಪುಟ್ಟ ರಾಮನೊಬ್ಬ ಕಾಣಿಸಿಕೊಂಡಿದ್ದನು. ಈ ವಿಚಾರವಾಗಿ ದರ್ಶನ್ ಅವರ …

Read More »

ನೆಲಮಂಗಲ: ಕೊರೊನಾ ಆತಂಕದಲ್ಲಿ ನೆಲಮಂಗಲ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳಿಂದ ಕೆಲಸ

ಬೆಂಗಳೂರು: ಪ್ರಪಂಚದಾದ್ಯಂತ ಕೊರೊನಾ ಹರಡುತ್ತಿದೆ. ಅಲ್ಲದೆ ನಮ್ಮ ದೇಶದಲ್ಲೂ ಕೂಡ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ರಾಜ್ಯದಲ್ಲೂ ಕೂಡ ಮಾರ್ಚ್ 31ರವರೆಗೆ ಮೆಡಿಕಲ್ ಎಮರ್ಜೆನ್ಸಿಯನ್ನು ಸಹ ಘೋಷಣೆ ಮಾಡಿದೆ. ಮೆಡಿಕಲ್ ಎಮೆರ್ಜೆನ್ಸಿ ಸಮಯದಲ್ಲಿ ಗುಂಪು ಗುಂಪಾಗಿ ಜನ ಸೇರುವುದನ್ನು ನಿಷೇಧಿಸಿದೆ. ಬೆಂಗಳೂರು ಹೊರವಲಯ ನೆಲಮಂಗಲ ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾತ್ರ ಅಧಿಕಾರಿಗಳು ಕೊರೊನಾ ಭಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಶುಕ್ರವಾರ ಹಿನ್ನೆಲೆಯಲ್ಲಿ ರಿಜಿಸ್ಟರ್ ಮಾಡಿಸಲು ಮುಗಿಬಿದ್ದಿದ್ದಾರೆ. ಇದರಿಂದ ರಿಜಿಸ್ಟ್ರಾರ್ …

Read More »

ಬೆಂಗ್ಳೂರು ಸಿಸಿಬಿ ಪೊಲೀಸರಿಂದ 56 ಲಕ್ಷ ಮೌಲ್ಯದ ವಸ್ತುಗಳು ವಶ ನಕಲಿ ಸ್ಯಾನಿಟೈಸರ್‌ಗಳ ಹಾವಳಿ

ಬೆಂಗಳೂರು: ಡೆಡ್ಲಿ ಕೊರೊನಾ ವೈರಸ್ ಭೀತಿಯನ್ನೇ ಬಂಡವಾಳ ಮಾಡಿಕೊಂಡ ಖದೀಮರು ಲಕ್ಷಾಂತರ ಮೌಲ್ಯದ ನಕಲಿ ಸ್ಯಾನಿಟೈಸರ್ ಹಾಗೂ ಹ್ಯಾಡ್ ರಬ್‍ಗಳನ್ನು ತಯಾರಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ನಕಲಿ ಸ್ಯಾನಿಟೈಸರ್ ಹಾಗೂ ಹ್ಯಾಡ್ ರಬ್‍ಗಳ ತಯಾರಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಬೆಂಗಳೂರು ಸಿಸಿಬಿ ಪೊಲೀಸರು, ನಗರದ ಚಾಮರಾಜಪೇಟೆ ಮತ್ತು ವಿ.ವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಗೊಡೌನ್‍ಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಬರೋಬ್ಬರಿ 56 ಲಕ್ಷ …

Read More »

ವಿಶ್ವದ್ಯಂತ ಕೊರೊನಾ ವೈರಸ್ ಭೀತಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಹಂತ ಹಂತವಾಗಿ ಬಂದ್ ಮಾಡುವ ಬಗ್ಗೆ ಚಿಂತನೆ ನಡೆದಿದೆ.

ಬೆಂಗಳೂರು: ವಿಶ್ವದ್ಯಂತ ಕೊರೊನಾ ವೈರಸ್ ಭೀತಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಹಂತ ಹಂತವಾಗಿ ಬಂದ್ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಮೊದಲ ಹಂತವಾಗಿ ಇಂದು ಸುಮಾರು 32 ರೈಲುಗಳ ಸಂಚಾರವನ್ನು ನಿಲ್ಲಿಸಲಾಗಿದ್ದು, ನಾಳೆಯಿಂದ ಕೊರೊನಾ ವೈರಸ್ ಹಬ್ಬುತ್ತಿರುವ ಪ್ರಮಾಣವನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದು ಇಲಾಖೆ ಮುಖ್ಯಸ್ಥರು ತಿಳಿಸಿದ್ದಾರೆ. ರೈಲುಗಳ ಸೇವೆಯಲ್ಲಿ ವ್ಯತ್ಯಯದ ವಿಚಾರ ತಿಳಿದ ಸಾರ್ವಜನಿಕರು ಕೂಡ ಗುರುವಾರದಿಂದಲೇ ತಮ್ಮ ತಮ್ಮ ಊರುಗಳಿಗೆ …

Read More »

ಬೇಸಿಗೆಯಲ್ಲೂ ಬರಡು ಭೂಮಿಯಲ್ಲಿ ಕೇವಲ 790 ಅಡಿಗೆ ನೀರು

ಬೆಂಗಳೂರು: ಈಗಾಗಲೇ ಬೇಸಿಗೆ ಆರಂಭವಾಗಿ ಕುಡಿಯುವ ನೀರಿಗೆ ಅನೇಕ ಕಡೆ ಸಮಸ್ಯೆ ಶುರುವಾಗಿದೆ. ಸುಮಾರು 1000 ದಿಂದ 1500 ಅಡಿಗಳಷ್ಟು ಬೋರ್‌ವೆಲ್‌ ಕೊರೆದರೂ ನೀರು ಸಿಗುವುದು ತುಂಬಾ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ನೆಲಮಂಗಲ ತಾಲೂಕಿನ ಅವೇರಹಳ್ಳಿ ರೈತನೊಬ್ಬ ಬೋರ್‌ವೆಲ್‌ ಕೊರೆಸಿದ್ದು, ಗಗನದೆತ್ತರಕ್ಕೆ ನೀರು ಚಿಮ್ಮಿದೆ. ಅವೇರಹಳ್ಳಿ ಪ್ರಕಾಶ್ ಕೊಳವೆ ಬಾವಿ ಕೊರೆಸಿ ಸಂತಸಪಟ್ಟಿದ್ದಾರೆ. ಸುಮಾರು 1500 ಅಡಿ ಕೊರೆದರೂ ನೀರು ಸಿಗದ ಬರಡು ಭೂಮಿಯಲ್ಲಿ ಕೇವಲ 790 ಅಡಿಗೆ ನೀರು …

Read More »

14 ಮಾರ್ಗಗಳಲ್ಲಿ ರೈಲು ಸಂಚಾರವಿಲ್ಲ

ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ರೈಲು ಸೇವೆಗಳನ್ನು ಸ್ಥಗಿತ ಮಾಡಲಾಗಿದೆ. ರದ್ದಾದ ರೈಲುಗಳು? 1. ಮೈಸೂರು-ಯಲಹಂಕ-ಮೈಸೂರು, ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು 2. ಮೈಸೂರು-ಕೆ.ಎಸ್.ಆರ್, ಬೆಂಗಳೂರು- ಮೈಸೂರು, ರಾಜ್ಯರಾಣಿ ಎಕ್ಸ್‌ಪ್ರೆಸ್ ರೈಲು 3. ಬೆಳಗಾವಿಯಿಂದ ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು 4. ಮೈಸೂರಿನಿಂದ ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು 5. ಮೈಸೂರಿನಿಂದ ರೇಣಿಗುಂಟ …

Read More »

ದೇಶಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೋನಾ ಸೋಂಕು ಹಬ್ಬದಂತೆ ಮುಂಜಾಗ್ರತಾ ಕ್ರಮವಾಗಿ ಹಾಲಿ ಇರುವ ಮಾರ್ಗಸೂಚಿಯನ್ನೇ ಮುಂದುವರೆಸಲು ತೀರ್ಮಾನಿಸಲಾಗಿದ್ದು, ಈ ತಿಂಗಳ 31ರವರೆಗೆ ಬಂದ್

ಬೆಂಗಳೂರು,ಮಾ.- ದೇಶಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೋನಾ ಸೋಂಕು ಹಬ್ಬದಂತೆ ಮುಂಜಾಗ್ರತಾ ಕ್ರಮವಾಗಿ ಹಾಲಿ ಇರುವ ಮಾರ್ಗಸೂಚಿಯನ್ನೇ ಮುಂದುವರೆಸಲು ತೀರ್ಮಾನಿಸಲಾಗಿದ್ದು, ಈ ತಿಂಗಳ 31ರವರೆಗೆ ಬಂದ್ ಮುಂದುವರೆಯಲಿದೆ.ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಾರಿಗೂ ಹಬ್ಬದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಾ.31ರವರೆಗೆ ನಿಷೇಧಾಜ್ಞೆಯನ್ನು ಮುಂದುವರೆಸಲು ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನವನ್ನು ವಿಧಾನಸಭೆಯಲ್ಲಿ ಖುದ್ದು ಮುಖ್ಯಮಂತ್ರಿ …

Read More »

ನಾನ್​ವೆಜ್ ಪ್ರಿಯರಿಗೆ ಶಾಕ್​; ಯುಗಾದಿ ಹಬ್ಬದ ಹೊಸತೊಡುಕು ದಿನ ಮಾಂಸ‌ ಮಾರಾಟ ನಿಷೇಧ..!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾಗೂ ಹಕ್ಕಿಜ್ವರದ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಮಾಂಸ ಪ್ರಿಯರಿಗೆ ಬಿಗ್​ ಶಾಕ್​ ನೀಡಿದೆ.ಯುಗಾದಿ ಹಬ್ಬದ ಹೊಸತಡುಕು ದಿನ ಮಾಂಸ‌ ಮಾರಾಟ ನಿಷೇಧ ಮಾಡಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಸಾರ್ವಜನಿಕವಾಗಿ ಪ್ರಾಣಿ ಬಲಿ‌ ಕೊಡುವಂತಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ ಅಂತಾ ಆದೇಶ ಹೊರಡಿಸಿದ್ದಾರೆ.ಕೊರೊನಾ ವೈರಸ್​ ಹರಡಿದಾಗಿನಿಂದ ಈಗಾಗಲೇ ಕುಕ್ಕುಟೋದ್ಯಮ ನೆಲ ಕಚ್ಚಿದ. ನಮ್ಮ ರಾಜ್ಯದಲ್ಲೇ ಲಕ್ಷಾಂತರ ಕೋಳಿಗಳನ್ನು …

Read More »