ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸೇವೆ ಸಲ್ಲಿಸಿ ಮನೆಗೆ ಮರಳಿದ ಮೈಸೂರು ಮೂಲದ ವೈದ್ಯೆ ಉಮಾ ಮಧುಸೂದನ್ ಅವರಿಗೆ ವಿಶೇಷ ಗೌರವ ಸಿಕ್ಕಿದೆ. ಓಕ್‍ಲ್ಯಾಂಡ್‍ನ ಸೌತ್ ವಿಂಡ್ಸರ್ ಆಸ್ಪತ್ರೆ ಮತ್ತು ಸ್ಥಳೀಯ ಆಡಳಿತ ಡಾ.ಉಮಾ ಮಧುಸೂದನ್ ಅವರಿಗೆ ಡ್ರೈವ್ ಆಫ್ ಹಾನರ್ ಮೂಲಕ ಗೌರವ ಸಲ್ಲಿಸಿದೆ. ವೈದ್ಯ ಉಮಾ ಅವರ ಮನೆ ಎದುರು ನೂರಾರು ವಾಹನಗಳಲ್ಲಿ ಬಂದ ಜನ, ಅಂಬುಲೆನ್ಸ್ ಸಿಬ್ಬಂದಿ, ಅಗ್ನಿಶಾಮಕ ಪಡೆ, ಅಧಿಕಾರಿಗಳು ನಿಮ್ಮ ಸೇವೆ ಅನನ್ಯ …
Read More »ಕ್ಕೆ ವಲಸೆ ಬರುವವರಿಗೆ ಅಮೆರಿಕ ನಿರ್ಬಂಧ, ಲಕ್ಷಾಂತರ ಭಾರತೀಯರಿಗೆ ಸಂಕಷ್ಟ..!
ವಾಷಿಂಗ್ಟನ್, ಏ.21- ಕಿಲ್ಲರ್ ಕೊರೊನಾ ದಾಳಿಯಿಂದಾಗಿ ಅಪಾರ ಸಾವು-ನೋವು ಮತ್ತು ಸೋಂಕು ಪ್ರಕರಣಗಳ ವ್ಯಾಪಕ ಹೆಚ್ಚಳದಿಂದಾಗಿ ಅಮೆರಿಕಾಗೆ ವಲಸೆ ಬರುವ ಹೊರ ದೇಶದವರಿಗೆ ತಾತ್ಕಾಲಿಕ ನಿರ್ಬಂಧ ವಿಧಿಸುವ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ. ಇದರಿಂದಾಗಿ ಉದ್ಯೋಗ, ವ್ಯಾಸಂಗ ಮತ್ತಿತರ ಉದ್ದೇಶಗಳಿಗಾಗಿ ಅಮೆರಿಕಕ್ಕೆ ತೆರಳಬೇಕಿದ್ದ ಲಕ್ಷಾಂತರ ಭಾರತೀಯರ ಭವಿಷ್ಯ ಅತಂತ್ರವಾಗಿದೆ. ಅಲ್ಲದೆ, ಅಮೆರಿಕದಲ್ಲಿರುವ ಅಸಂಖ್ಯಾತ ಭಾರತೀಯರೂ ಕೂಡ ಇದರಿಂದ ಭಾರೀ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ಕೊರೊನಾ ಹಾವಳಿಯಿಂದಾಗಿ ಲಕ್ಷಾಂತರ ಅಮೆರಿಕನ್ನರು ಉದ್ಯೋಗ …
Read More »ಕೊರೊನಾ ಅಟ್ಟಹಾಸಕ್ಕೆ ವಿಶ್ವಾದ್ಯಂತ 1.70 ಲಕ್ಷ ಜನ ಬಲಿ..!
ವಾಷ್ಟಿಂಗ್ಟನ್/ರೋಮ್/ಮ್ಯಾಡ್ರಿಡ್, ಏ.21- ವಿನಾಶಕಾರಿ ಕೊರೊನಾ ಇಡೀ ಲೋಕಕ್ಕೆ ಕಂಟಕವಾಗಿಯೇ ಮುಂದುವರಿದಿದ್ದು, ಈ ದುಷ್ಟಶಕ್ತಿಯ ಅಟ್ಟಹಾಸಕ್ಕೆ ಯಾವ ದೇಶವು ಲೆಕ್ಕಕ್ಕಿಲ್ಲದಂತಾಗಿದೆ. ಈ ಹೆಮ್ಮಾರಿಯ ದಾಳಿಗೆ 220ಕ್ಕೂ ಹೆಚ್ಚು ದೇಶಗಳು ಕಂಗೆಟ್ಟಿವೆ. ಜಗತ್ತಿನಾದ್ಯಂತ ವ್ಯಾಪಕ ಸಾವು ಮತ್ತು ಸೋಂಕು ಪ್ರಕರಣಗಳು ದಿನನಿತ್ಯದ ಸುದ್ದಿಯಾಗುತ್ತಿದೆ. ಈವರೆಗೆ ಸುಮಾರು 1,70 ಲಕ್ಷ ಜನರನ್ನು ವೈರಸ್ ನುಂಗಿದೆ. ಅಲ್ಲದೆ, ಸೋಂಕಿರ ಸಂಖ್ಯೆ 25 ಲಕ್ಷ ದಾಟುತ್ತಿದೆ. ಅಮೆರಿಕದಲ್ಲಿ ಈಗಾಗಲೇ ಸುಮಾರು 43,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ …
Read More »ನಿರಾಶ್ರಿತ ಕೇಂದ್ರಗಳಲ್ಲಿ ಓಪನ್ ಥಿಯೇಟರ್ ವ್ಯವಸ್ಥೆ ಕಲ್ಪಿಸಿದ ಪೊಲೀಸರು
ಖಿನ್ನತೆಗೊಳಗಾಗದಂತೆ ಕ್ರಮ – ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ ನಿರಾಶ್ರಿತ ಕೇಂದ್ರಗಳಲ್ಲಿ ಓಪನ್ ಥಿಯೇಟರ್ ವ್ಯವಸ್ಥೆ ಕಲ್ಪಿಸಿದ ಪೊಲೀಸರು – ಮುಂಬೈ: ಕೊರೊನಾ ವೈರಸ್ ನಿಂದಾಗಿ ಲಾಕ್‍ಡೌನ್ ಮಾಡಲಾಗಿದೆ. ಅಲ್ಲದೆ ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇದರ ಮಧ್ಯೆ ನಾಗ್ಪುರ ಪೊಲೀಸರು ನಿರಾಶ್ರಿತ ಕೇಂದ್ರಗಳಲ್ಲಿ ಮನರಂಜನೆಗಾಗಿ ಉತ್ತಮ ವ್ಯವಸ್ಥೆ ಕಲ್ಪಿಸಿದ್ದಾರೆ. ನಿರಾಶ್ರಿತರು ಒಂದೇ ಸ್ಥಳದಲ್ಲಿದ್ದು ಆತಂಕಕ್ಕೊಳಗಾಗಿದ್ದು, ಅವರ ಆತಂಕವನ್ನು ಕಡಿಮೆ ಮಾಡಿ ಮನರಂಜನೆ …
Read More »ಅಮೆರಿಕ ವಿಶೇಷ ತಂಡದಿಂದ ಚೀನಾ ವೈರಸ್ ಕಳ್ಳಾಟದ ತನಿಖೆ ………
ವಾಷಿಂಗ್ಟನ್/ಚೀನಾ, ಏ.20-ಕಿಲ್ಲರ್ ಕೊರೊನಾ ವ್ಯಾಪನೆ ಮೂಲಕ ಜಗತ್ತಿನಾದ್ಯಂತ ಭಾರೀ ಸಾವು-ನೋವು ಮತ್ತು ಸೋಂಕು ಹೆಚ್ಚಳಕ್ಕೆ ಕಾರಣವೆನ್ನಲಾದ ಚೀನಾಗೆ ವಿಶೇಷ ತಜ್ಞರ ತಂಡವೊಂದನ್ನು ರವಾನಿಸಿ ತನಿಖೆ ನಡೆಸಲು ಅಮೆರಿಕ ಗಂಭೀರ ಚಿಂತನೆ ನಡೆಸಿದೆ. ಅಮೆರಿಕದಲ್ಲಿ 41,000 ಮಂದಿ ಸೇರಿದಂತೆ ವಿಶ್ವಾದ್ಯಂತ 1.65 ಲಕ್ಷ ಜನರ ಸಾವಿಗೆ ಚೀನಾ ಹೊಣೆ ಎಂಬುದು ಸಾಬೀತಾದಲ್ಲಿ ಆ ದೇಶ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ನಿನ್ನೆಯಷ್ಟೇ ಖಡಕ್ ಎಚ್ಚರಿಕೆ ನೀಡಿದ್ದರು. ರಾಜಧಾನಿ ವಾಷಿಂಗ್ಟನ್‍ನ …
Read More »ಅಮೆರಿಕದಲ್ಲಿ ಕೊರೊನಾಗೆ ಒಂದೇ ದಿನ 1,997 ಮಂದಿ ಬಲಿ
ವಾಷಿಂಗ್ಟನ್: ಅಮೆರಿಕದಲ್ಲಿ ಒಂದೇ ದಿನಕ್ಕೆ 1,997 ಮಂದಿ ಬಲಿಯಾಗಿದ್ದಾರೆ ಎಂಬುದಾಗಿ ವರದಿಯಾಗಿದೆ. ಈ ಮೂಲಕ ಭಾನುವಾರದವರೆಗೆ ಮೃತಪಟ್ಟವರ ಸಂಖ್ಯೆ 40,661 ಕ್ಕೆ ಏರಿಕೆಯಾಗಿದೆ. ಪ್ರಪಂಚದಾದ್ಯಂತ ಕೋವಿಡ್ 19 ಎಂಬ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಇತ್ತ ವಿಶ್ವದ ದೊಡ್ಡಣ್ಣ ಈ ಮಹಾಮಾರಿಗೆ ತತ್ತರಿಸಿ ಹೋಗಿದೆ. ಭಾನುವಾರದ ಅಂಕಿ-ಅಂಶವನ್ನು ಗಮನಿಸಿದಾಗ ಇನ್ನೂ ದುಪ್ಪಟ್ಟಾಗುವ ಸಾಧ್ಯತೆಗಳಿರುವುದಾಗಿ ರಾಜ್ಯಪಾಲ ಆಂಡ್ರ್ಯೂ ಕುಮೊ ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅಮೆರಿಕದಲ್ಲಿ 7,64,265 ಕೊರೊನಾ ಸೋಂಕಿತರಿದ್ದು, ಈ ಮೂಲಕ ಜಗತ್ತಿನಲ್ಲೇ …
Read More »ಸಿನಿಮಾ ಬಿಟ್ಟರೂ ಲಿಪ್‍ಲಾಕ್, ಹಸಿಬಿಸಿ ದೃಶ್ಯಗಳಲ್ಲಿ ನಟಿಸಲ್ಲ ಎಂದ ರೌಡಿ ಬೇಬಿ
ಹೈದರಾಬಾದ್: ಬಹುಭಾಷಾ ನಟಿ ಸಾಯಿ ಪಲ್ಲವಿ ವಿಭಿನ್ನ ನಟನೆ ಮೂಲಕ ದಕ್ಷಿಣ ಭಾರತದ ಸಿನಿ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲವೇ ಸಿನಿಮಾಗಳಲ್ಲಿ ನಟಿಸಿದರೂ ತಮ್ಮದೇಯಾದ ಫ್ಯಾನ್ ಫಾಲೋವರ್ಸ್ ಹೊಂದುವ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ನಟನೆಗೆ ಹೊರತಾಗಿಯೂ ಅವರ ವೈಯಕ್ತಿಕ ಜೀವನದಲ್ಲಿ ಸಹ ಇತರರಿಗೆ ಮಾದರಿಯಾಗಿದ್ದಾರೆ. ಇದೀಗ ಬೋಲ್ಡ್ ಸ್ಟೇಟ್‍ಮೆಂಟ್ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಸಾಯಿ ಪಲ್ಲವಿ ಎಂದರೆ ಅದೊಂದು ಚಾರ್ಮ್ ಎಂಬುದು ತಿಳಿದಿರುವ ವಿಚಾರ. ಅವರ ಅಭಿಮಾನಿಗಳೂ ಸಹ ಅವರನ್ನು …
Read More »ದೇಶದಲ್ಲಿ 15 ಸಾವಿರ ದಾಟಿದ ಸೋಂಕಿತರ ಸಂಖ್ಯೆ- ಅಮೆರಿಕದಲ್ಲಿ ಒಂದೇ ದಿನ 4,600 ಸಾವು
ನವದೆಹಲಿ: ದೇಶದಲ್ಲಿ ಇಂದು ಒಂದೇ ದಿನ 1,300ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 15,232ಕ್ಕೆ ತಲುಪಿದೆ. ಈ ಪೈಕಿ ತಬ್ಲೀಘಿಗಳ ಪಾಲು 4,200ಕ್ಕೂ ಹೆಚ್ಚು. ಅಂದರೆ ಪ್ರತಿ ಮೂವರು ಸೋಂಕಿತರಲ್ಲಿ ಒಬ್ಬರು ತಬ್ಲಿಘಿಗಳು. ಕಳೆದ 24 ಗಂಟೆಗಳಲ್ಲಿ 43 ಮಂದಿ ಸಾವನ್ನಪ್ಪಿದ್ದು, ಒಟ್ಟು 505 ಜನ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 3,648 ದಾಟಿದ್ದು, ಇಂದು 328 ಹೊಸ ಪ್ರಕರಣಗಳು ಪತ್ತೆಯಾಗಿವೆ. ಗುಜರಾತ್‍ನಲ್ಲಿ ಒಂದೇ ದಿನ …
Read More »ಭಾರತೀಯ ನೌಕಾಪಡೆಗೂ ತಟ್ಟಿದ ಕೊರೊನಾ ಭೀತಿ – 21 ಸಿಬ್ಬಂದಿಗೆ ಸೋಂಕು
ಮುಂಬೈ: ಭಾರತೀಯ ನೌಕಾಪಡೆಗೂ ಕೊರೊನಾ ವೈರಸ್ ಭೀತಿ ಶುರುವಾಗಿದ್ದು, ಮುಂಬೈನಲ್ಲಿ ಇರುವ ನೌಕಾನೆಲೆಯ 21 ಮಂದಿ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ನೌಕಾಪಡೆಯ 20 ಸೇಲರ್ ಗಳು ಸೇರಿ ಒಟ್ಟು 21 ಮಂದಿ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ. ಐಎನ್‍ಎಸ್ ಅಶ್ವಿನಿ ನೌಕಾಪಡೆ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕಿತರ ಸಂಪರ್ಕದಲ್ಲಿದ್ದ ಮಂದಿಯನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ಸೋಂಕಿತ ಸೇಲರ್ ಗಳು ಮುಂಬೈನ ಐಎನ್‍ಎಸ್ ಆಂಗ್ರೆಯಲ್ಲಿ …
Read More »ವುಹಾನ್ ಲ್ಯಾಬ್‍ನಿಂದ ವೈರಸ್ ಹೊರಬಂದಿದ್ದು ಹೇಗೆ..? : ತನಿಖೆಗೆ ಟ್ರಂಪ್ ಚಿಂತನೆ
ವಾಷಿಂಗ್ಟನ್, ಏ.18-ವಿಶ್ವವ್ಯಾಪಿ 1.50 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಕಿಲ್ಲರ್ ಕೊರೊನಾ ವೈರಸ್‍ನ ಉಗಮ ಬಿಂದು ಚೀನಾದ ವುಹಾನ ನಗರಿಯ ಪ್ರಯೋಗಾಲಯದಿಂದ ಡೆಡ್ಲಿ ವೈರಸ್ ತಪ್ಪಿಸಿಕೊಂಡಿರುವ ವರದಿ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕೊರೊನಾ ವೈರಸ್ ಸೋಂಕು ಮತ್ತು ಸಾವು ನೋವಿನ ಬಗ್ಗೆ ಸಾಕಷ್ಟು ಸುಳ್ಳುಗಳನ್ನು ಹೇಳಿ ಜಗತ್ತಿನ ದಿಕ್ಕು ತಪ್ಪಿಸುತ್ತಿರುವ ಚೀನಾದ ಕರ್ಮಕಾಂಡಗಳು ಒಂದೊಂದೇ ಬಯಲಿಗೆ ಬರುತ್ತಿದ್ದು, ಆ ದೇಶಕ್ಕೆ …
Read More »
Laxmi News 24×7