ಬೆಳಗಾವಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆಯ ಪರಿಣಾಮ ಭೂಮಿ ಮೇಲೆ ಇರುವ ಪ್ರಾಣಿಗಳಿಗೆ ಮಾತ್ರ ಸಂಕಷ್ಟಕ್ಕೆ ಒಳಗಾಗಿಲ್ಲ, ಜಲಚರ ಜೀವಿಗಳೂ ಆಘಾತಕ್ಕೆ ಒಳಗಾಗಿವೆ.
ಹುಕ್ಕೇರಿ ತಾಲೂಕಿನ ಬಸಾಪೂರ ಬಳಿ ಮಾರ್ಕಂಡಯ್ಯ ನದಿ ಪ್ರವಾಹದ ಜೊತೆ ದೊಡ್ಡದಾದ ಮೀನು ಒಂದು ಈಜಿಕೊಂಡು ಬಂದಿದೆ. ಸ್ಧಳೀಯರು ಈ ಮೀನಿನ ಫೋಟೋವನ್ನು ಮೊಬೈಲ್ನಲ್ಲಿ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಆ ವೀಡಿಯೋ ಸಖತ್ ವೈರಲ್ ಆಗಿದೆ.