ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇತ್ತ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮುಚ್ಚಿದ್ದ ಶಾಲೆಗಳು ಜುಲೈನಿಂದ ದೇಶಾದ್ಯಂತ ಆರಂಭವಾಗುವ ಸಾಧ್ಯತೆ ಇದೆ.
ಶೇಕಡಾ 30ರಷ್ಟು ಹಾಜರಾತಿಯೊಂದಿಗೆ ಶಾಲೆಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಚಿಂತನೆ ಮಾಡಿದೆ. ಜೊತೆಗೆ ಗ್ರೀನ್, ಆರೆಂಜ್‍ಝೋನ್‍ಗಳಲ್ಲಿರುವ ಶಾಲೆಗಳ ಆರಂಭ ಮಾಡುವ ಸಾಧ್ಯತೆ ಇದೆ. ಆರಂಭದಲ್ಲಿ ಹೈಸ್ಕೂಲ್ ತರಗತಿಗಳಷ್ಟೇ ಶುರುವಾಗಲಿದ್ದು, ಉಳಿದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಶಿಕ್ಷಣ ಮುಂದುವರಿಕೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ವಾರವೇ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಶಾಲಾ-ಕಾಲೇಜ್ ಓಪನ್ ಮಾಡುವ ವಿಚಾರವಾಗಿ ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಶಾಲೆಗಳು ಪ್ರಾರಂಭದ ಕುರಿತು ಚರ್ಚೆ ನಡೆಸಲಾಗುತ್ತದೆ. ಸಭೆ ಬಳಿಕ ಶಾಲೆಗಳ ಪ್ರಾರಂಭ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಬಹುತೇಕ ಜುಲೈ- ಆಗಸ್ಟ್ ನಲ್ಲಿ ಶಾಲೆಗಳು ಪ್ರಾರಂಭ ಮಾಡೋಕೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದ್ದು, ಇದಕ್ಕಾಗಿ ಈಗಾಗಲೇ ಶಿಕ್ಷಣ ಇಲಾಖೆ ಪ್ರಾರಂಭಿಕ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.
ಮೇ 31 ನಂತರ ಕೇಂದ್ರ ಸರ್ಕಾರದ ನಿಯಮಗಳನ್ನ ನೋಡಿಕೊಂಡು ಶಾಲೆಗಳ ಪ್ರಾರಂಭದ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಅಲ್ಲದೇ ಕೇಂದ್ರ ಸರ್ಕಾರದ ಮಾರ್ಗಸೂಚಿ ನಂತರ ರಾಜ್ಯದಲ್ಲಿ ಶಾಲೆಗಳ ಪ್ರಾರಂಭ ಮಾಡುವ ಬಗ್ಗೆ ಅಂತಿಮ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆ ಇದೆ. ಹೀಗಾಗಿ ಶಾಲೆಗಳು ಪ್ರಾರಂಭ ಮಾಡುವುದಕ್ಕೆ ಶಿಕ್ಷಣ ಇಲಾಖೆ 3-4 ಆಯ್ಕೆಗಳನ್ನ ಇಟ್ಟುಕೊಂಡಿದೆ.
ಶಾಲೆ ಪ್ರಾರಂಭಕ್ಕೆ ಆಯ್ಕೆಗಳು
1. ಸದ್ಯಕ್ಕೆ 1-5 ತರಗತಿ ಶಾಲೆಗಳು ಪ್ರಾರಂಭ ಮಾಡದೇ ಕೇವಲ 6-10 ನೇ ತರಗತಿವರೆಗೆ ಮಾತ್ರ ಶಾಲೆಗಳು ಪ್ರಾರಂಭ ಮಾಡೋದು.
– ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ, ಸ್ಯಾನಿಟರೈಸ್ ಬಳಕೆಯೊಂದಿಗೆ 6-10 ತರಗತಿ ಪ್ರಾರಂಭ ಮಾಡೋದು.
3. ಪಾಳಿ ವ್ಯವಸ್ಥೆಯಲ್ಲಿ ಶಾಲೆಗಳನ್ನು ಪ್ರಾರಂಭ ಮಾಡುವುದು. ಈ ಮೂಲಕ ಮಕ್ಕಳ ಸಂಖ್ಯೆ ಕಡಿಮೆ ಮಾಡಿ ಪಾಠ ಮಾಡೋದು.
4. ಬ್ಯಾಚ್ ಗಳ ಮಾದರಿಯಲ್ಲಿ ಶಾಲೆಗಳ ಪ್ರಾರಂಭ ಮಾಡೋದು. (3 ದಿನ ಒಂದು ಬ್ಯಾಚ್, ಮತ್ತೆ 3 ದಿನ ಮತ್ತೊಂದು ಬ್ಯಾಚ್ ಮಾಡಿ) ಪಾಠ ಮಾಡೋದು.
5. ಕೊರೊನಾ ಸೋಂಕು ಕಡಿಮೆ ಆಗೋವರೆಗೂ ಶಿಕ್ಷಣ ಇಲಾಖೆ ಚಾನೆಲ್ ಪ್ರಾರಂಭ ಮಾಡಿ. (ದೂರದರ್ಶನ) ತರಗತಿಗಳನ್ನ ಆಯೋಜನೆ ಮಾಡಿ ಶಿಕ್ಷಣ ನಿಡೋದು.