ಬೆಳಗಾವಿ:ಮಹಾರಾಷ್ಟ್ರದಿಂದ ಬೆಳಗಾವಿಗೆ ಅಕ್ರಮವಾಗಿ ನುಗ್ಗಿದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ಕ್ವಾರಂಟೈನ್ ಗೆ ಒಳಪಡಿಸಿ ಮುಂದೆ ಆಗಬಹುದಾದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.
ಸಿಕ್ಕಿಬಿದ್ದ ಮೂವರಲ್ಲಿ ಓರ್ವನ ಉಷ್ಣಾಂಶವು 103 ಡಿಗ್ರಿ ಇದ್ದು ಬೆಳಗಾವಿ ಬಸ್ ನಿಲ್ಧಾಣದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಪೋಲೀಸ್ ಹವಾಲ್ದಾರ್ ಎಸ್ ಬಿ ಮಡಿವಾಳ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹವಾಲ್ದಾರ್ ಅವರ ಸಮಯ ಪ್ರಜ್ಞೆಯಿಂದಾಗಿ ಮೂವರು ಜನ ಮಹಾರಾಷ್ಟ್ರದ ಶಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.
ಬೆಳಗಾವಿಯ ಬಸ್ ನಿಲ್ಧಾಣದಲ್ಲಿ ಮೂವರ ಕೈಗೆ ಕ್ವಾರಂಟೈನ್ ಮುದ್ರೆ ಇರುವದನ್ನು ಗಮನಿಸಿದ ಹವಾಲ್ದಾರ್ ಎಸ್ ಬಿ ಮಡಿವಾಳರ ತಕ್ಷಣ ಮಾರ್ಕೆಟ್ ಠಾಣೆಯ ಸಿಪಿಐ ಸಂಗಮೇಶ್ ಶಿವಯೋಗಿ ಅವರ ಗಮನಕ್ಕೆ ತಂದಿದ್ದಾರೆ. ಬಳಿಕ ತಕ್ಷಣ ಬಸ್ ನಿಲ್ಧಾಣಕ್ಕೆ ಆಗಮಿಸಿದ ಸಿಪಿಐ ಸಂಗಮೇಶ ಶಿವಯೋಗಿ ಮೂವರನ್ನು ವಶಕ್ಕೆ ಪಡೆದು ಅಂಬ್ಯುಲೆನ್ಸ ಕರೆಯಿಸಿ ಮಹಾರಾಷ್ಟ್ರದಿಂದ ಬೆಳಗಾವಿಗೆ ಆಕ್ರಮವಾಗಿ ಬಂದ ಮೂವರನ್ನು ಕ್ವಾರಂಟೈನ್ ಮಾಡಿಸಿದ್ದಾರೆ.
ಈ ಮೂವರಲ್ಲಿ ಒಬ್ಬ ಮಹಾರಾಷ್ಟ್ರದ ವೀಟಾ,ಮತ್ತೊಬ್ಬ ಪೂನಾ.ಇನ್ನೊಬ್ಬ ಗೀವಾದಿಂದ ಬೆಳಗಾವಿಗೆ ಆಕ್ರಮವಾಗಿ ಬಂದಿದ್ದರು ವೀಟಾದಿಂದ ಬಂದವನ ಬಾಡಿ ಟೆಂಪ್ರೇಚರ್ 103 ತೋರಿಸಿದೆ ಆತನಿಗೆ ವಿಪರೀತ ಜ್ವರ ಇತ್ತು ಎಂದು ತಿಳಿದು ಬಂದಿದೆ
ಮಾರ್ಕೆಟ್ ಸಿಪಿಐ ಸಂಗಮೇಶ ಶಿವಯೋಗಿ ಅವರು ಬಸ್ ನಿಲ್ಧಾಣದಲ್ಲಿ ಬಿಗಿ ಪೋಲೀಸ್ ಪಹರೆ ಏರ್ಪಡಿಸಿದ ಪರಿಣಾಮ, ಹವಾಲ್ದಾರ್ ಎಸ್ ಬಿ ಮಡಿವಾಳ ಅವರ ಸಮಯ ಪ್ರಜ್ಞೆ ಯಿಂದಾಗಿ ದೊಡ್ಡ ಅನಾಹುತವೇ ತಪ್ಪಿದಂತಾಗಿದೆ
ಮಹಾರಾಷ್ಟ್ರದ ವೀಟಾ ದಿಂದ ಬೆಳಗಾವಿಗೆ ಆಕ್ರಮವಾಗಿ ಬಂದ ಶಂಕಿತ ಖಾನಾಪುರ ತಾಲ್ಲೂಕಿನ ಬಡಸ ಗ್ರಾಮಕ್ಕೆ ತೆರಳುತ್ತಿದ್ದ ಎಂದು ತಿಳಿದುಬಂದಿದೆ.