ಬೀದರ : ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಿಲು ಶಾಸಕರೇಲ್ಲರೂ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರಿಗೆ ಮನವಿ ಮಾಡಿಕೊಂಡಿದ್ದೆವೆ. ಅವರು ಸಹ ಭರವಸೆ ನೀಡಿದ್ದಾರೆ ಎಂದು ಜೆಡಿಎಸ್ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಕಾರಾಂಜ ಜಲಾಶಯದ ಬಳಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರನ್ನು ಭೇಟಿಯಾದ ನಂತರ ಮಾತನಾಡಿದ ಅವರು, ಜಿಲ್ಲೆಯ ಕಾರಾಂಜ ಜಲಾಶಯದಲ್ಲಿ ಪ್ರಸ್ತುತ 0.3 ಟಿಎಂಸಿ ನೀರಿದ್ದು ನೀರಿನ ಸಮಸ್ಯೆ ಎದುರಾಗಿದೆ. ಜಲಾಶಯಕ್ಕೆ ಗೋದಾವರಿ ಇಲ್ಲವೇ ಕೃಷ್ಣಾ ನದಿಯ ನೀರು ತುಂಬಿಸಬೇಕು.
ಕಳೆದ ಸಂಮಿಶ್ರ ಸರ್ಕಾರದ ಅವಧಿಯಲ್ಲಿ ಅಂದಿನ ಸಿ.ಎಂ ಕುಮಾರಸ್ವಾಮಿಯವರು ಬಾಲ್ಕಿ, ಬೀದರ್, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 33 ಕೆರೆಗಳ ನೀರು ತುಂಬಿಸುವ ಯೋಜನೆಗಾಗಿ 375 ಕೋಟಿ ರೂ. ನಿಗದಿ ಮಾಡಿದ್ದರು.
ಕಳೆದ ವರ್ಷದ ಬಜೆಟ್ ನಲ್ಲಿ 75 ಕೋಟಿ ರೂ. ನಿಗದಿ ಪಡಿಸಿದ್ದರು. ಅದು ಪೇಂಡಿಂಗ್ ಇದ್ದು, ತೀವ್ರಗತಿಯಲ್ಲಿ ಆ ಕೆಲಸ ಕೈಗೊಳ್ಳುವಂತೆ ಸಚಿವರಿಗೆ ಮನವಿ ಮಾಡಿದ್ದೇವೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.