Breaking News

Laxminews 24x7

ಬೆಳಗಾವಿ: ಸರ್ಕಾರಿ ಕಟ್ಟಡಗಳು ಹಾವು, ಚೇಳುಗಳಿಗೆ ಮೀಸಲು

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಹಲವು ಸರ್ಕಾರಿ ಕಟ್ಟಡಗಳು ಖಾಲಿ ಬಿದ್ದಿವೆ. ಮಾತ್ರವಲ್ಲ; ಹಲವು ಕಟ್ಟಡಗಳು ಹೊಸದಾಗಿ ನಿರ್ಮಿಸಿದ್ದರೂ ಉದ್ಘಾಟನೆ ಕಾಣದೇ ಜೇಡು ತಿನ್ನುತ್ತಿವೆ. ಇದಕ್ಕೆ ತದ್ವಿರುದ್ಧವಾಗಿ ಸರ್ಕಾರಿ ಕಚೇರಿಗಳು, ಶಾಲೆಗಳು, ಗ್ರಂಥಾಲಯ, ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸರ್ಕಾರ ಒಂದೆಡೆ ತನ್ನದೇ ಕಟ್ಟಡಗಳನ್ನು ಪಾಳುಗೆಡವಿ ಇನ್ನೊಂದೆಡೆ ಬಾಡಿಗೆ ಕಟ್ಟಡಗಳನ್ನು ಆಶ್ರಯಿಸುತ್ತಿದೆ. ಒಂದೆಡೆ ವ್ಯರ್ಥ, ಇನ್ನೊಂದೆಡೆ ದುಂದುವೆಚ್ಚಕ್ಕೆ ಅಧಿಕಾರಿಗಳು ಕಾರಣವಾಗಿದ್ದಾರೆ. ಬೆಳಗಾವಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿದ ಕಲಾ ಮಂದಿರ ಉದ್ಘಾಟನೆಯಾಗಿ …

Read More »

ಭಾವಪೂರ್ಣ ಶ್ರದ್ಧಾಂಜಲಿ

ಶ್ರೀಮಠದ ಹಿರಿಯ ಸ್ವಾಮಿಜಿಗಳು, ಸುಕ್ಷೇತ್ರ ತವಗಮಠ) ಗೋಕಾಕ ತಾಲೂಕಿನ ಸುಕ್ಷೇತ್ರ ತವಗ ಮಠದ ಬ್ರಹ್ಮಶ್ರೀ ಶ್ರೀ ಸಿದ್ದಲಿಂಗಯ್ಯ ತವಗಮಠ ಮಹಾಸ್ವಾಮಿಜಿಗಳು ಇಂದು ಸೋಮವಾರ ದಿ. 2.3.2026.ರಂದು ಬೆಳಗಿನ ಜಾವ ಹೃದಯಾಘಾತ ದಿಂದ ಲಿಂಗಕ್ಯರಾಗಿದ್ದು ಮೃತರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬದ ಸದಸ್ಯರಿಗೆ ಹಾಗೂ ಶ್ರೀಮಠದ ಅಪಾರ ಭಕ್ತಾಧಿಗಳಿಗೆ ದುಃಖ ಭರಿಸುವ ಶಕ್ತಿ ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥನೆ..

Read More »

ಮದ್ಯ ಮಾರಾಟ ನಿಷೇಧಿಸಿದ ಬೆಳಗಾವಿ ಜಿಲ್ಲಾಧಿಕಾರಿ

ಬೆಳಗಾವಿ: ಹೋಳಿ ಹಾಗೂ ರಂಗಪಂಚಮಿ ಹಬ್ಬ-2026 ರ ಅಂಗವಾಗಿ ಬೆಳಗಾವಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳ ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧಿಸಿದ ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 21 (1) ರಡಿ ಪ್ರದತ್ತವಾದ ಅಧಿಕಾರದ ಮೇರೆಗೆ ಅನುಬಂಧದಲ್ಲಿ ನಮೂದಿಸಲಾದ ಬೆಳಗಾವಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಬೇರೆ ಬೇರೆ ದಿವಸಗಳಂದು ರಂಗಪಂಚಮಿಯನ್ನು ಆಚರಿಸಲಾಗುತ್ತದೆ. …

Read More »

ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ: ಕೇಸ್ ದಾಖಲಿಸಿದ ಮಾರಿಹಾಳ ಠಾಣೆ ಪೊಲೀಸರು

ಬೆಳಗಾವಿ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣದ ದಾಖಲಿಸಿ ಬೆಳಗಾವಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.‌ ಭರತ ರತ್ನಾಜಿ ಮುತಗೇಕರ (29) ಎಂಬುವರು ಮುತಗಾ ಗ್ರಾಮ ಬಳಿಯ ಭಾರತ ಪೆಟ್ರೋಲ್ ಪಂಪ್ ಸಮೀಪ ಇರುವ ಬೆಳಗಾವಿ-ಬಾಗಲಕೋಟ ರಸ್ತೆ ಪಕ್ಕದ ಖುಲ್ಲಾ ಜಾಗೆಯಲ್ಲಿ ಅಕ್ರಮವಾಗಿ ಸರಾಯಿ ಸೇವನೆ ಮಾಡುವ ವೇಳೆ ಮಾರಿಹಾಳ ಪೊಲೀಸರು ದಾಳಿ ಮಾಡಿ, ಆರೋಪಿತನಿಂದ ಒರಿಜಿನಲ್ ಚಾಯಿಸ್ ವಿಸ್ಕಿ ಹಾಗೂ ಗ್ಲಾಸ್‌ ಜಪ್ತ …

Read More »

ಬಾಗಲಕೋಟೆ: ಹೋಳಿಯಾಟಕ್ಕೆ ಬರಲಿದ್ದಾರೆ ರಷ್ಯನ್ ಬೆಡಗಿ ಮೀನಾ! ಭಾರತದ ಆರಿಯಾ, ಅಕ್ಷಯ್

ಬಾಗಲಕೋಟೆ: ಬನಹಟ್ಟಿಯ ಎಸ್‌ಆರ್‌ಎ ಮೈದಾನದಲ್ಲಿ ಮಹಿಳೆಯರಿಗಾಗಿ ಸಿದ್ದು ಕೊಣ್ಣೂರ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ 7 ಗಂಟೆಯಿಂದ ರಂಗ ಸಂಭ್ರಮ ಕಾರ್ಯಕ್ರಮ ನಡೆಸಲಾಗುವುದೆಂದು ಕವಿತಾ ಕೊಣ್ಣೂರ ತಿಳಿಸಿದರು. ಬನಹಟ್ಟಿಯಲ್ಲಿ ರಂಗ ಸಂಭ್ರಮದ ಕುರಿತಾಗಿ ಮಾತನಾಡಿದ ಅವರು, ಅಂತಾರಾಷ್ಟ್ರಮಟ್ಟದ ಹೆಸರಾಂತ ಡಿಜೆ ಆಪರೇಟರ್ ರಷ್ಯಾದ ಮೀನಾ ಹಾಗೂ ಭಾರತದ ಆರಿಯಾ ಮತ್ತು ಅಕ್ಷಯ ಪ್ರಮುಖರಾಗಿ ಆಗಮಿಸಲಿದ್ದಾರೆ. ರಾಜ್ಯದ ಹೆಸರಾಂತ ಕಲಾ ತಂಡಗಳಾದ ಸಾಧನಾ ಹಾಗೂ ಸಮನ್ವಿ ನೇತೃತ್ವದ ತಂಡಗಳು ಕಾರ್ಯಕ್ರಮ ನೀಡಲಿದ್ದಾರೆ. ರಷ್ಯಾ …

Read More »

ಪ್ರೇಯಸಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಹತ್ಯೆಗೈದ ಪ್ರಿಯಕರ

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಹೊರವಲಯದ ಜಮೀನಲ್ಲಿ ಯುವಕ ಫಾರೂಕ್ ಸನದಿ  ಎನ್ನುವಾತನನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದು, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಿಶ್ವಿತಾರ್ಥ ಮಾಡಿಕೊಂಡಿದ್ದ ಹುಡುಗಿ ಪ್ರಿಯಕರನೇ ಫಾರೂಕ್ ಸನದಿಯನ್ನು ಕೊಲೆ ಮಾಡಿರುವುದು ಎಂದು ಗೊತ್ತಾಗಿದೆ. ಪ್ರಿಯಕರ ದಾವಲಸಾಬ್ ಹಾಗೂ ಸ್ನೇಹಿತ ಮಕ್ಕಬೂಲ್ ಸಾಬ್ ಹಾಗೂ ಇಬ್ಬರು ಅಪ್ರಾಪ್ತರು ಸೇರಿಕೊಂಡು ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದು, ಹತ್ಯೆ ನಡೆದ 24 ಗಂಟೆಯಲ್ಲಿ ನಾಲ್ಕು ಜನರನ್ನು ಪೊಲೀಸರು …

Read More »

IPSಗೆ ಸೇರಿದ ವಿಲ್ಲಾದಲ್ಲಿ ಅತ್ಯಾಚಾರ: ಬೆಂಗಳೂರು ಕಾರ್ಪೊರೇಟರ್ ಮಗ ಅರೆಸ್ಟ್, ಒಬ್ಬೊಬ್ಬರದ್ದು ಒಂದೊಂದು ಪಾತ್ರ

ಬೆಂಗಳೂರು: ಅಮೃತಹಳ್ಳಿಯ ವಿಲ್ಲಾದಲ್ಲಿ ನಡೆದಿರುವ ಅತ್ಯಾಚಾರ ಕೇಸ್  ಸಂಬಂಧ ಮತ್ತೆ ಮೂವರ ಬಂಧನವಾಗಿದೆ. ಮಾಸ್ಟರ್ ಮೈಂಡ್ ನಿಖಿಲ್ ಕೃತ್ಯಕ್ಕೆ ಸಾಥ್ ನೀಡುತ್ತಿದ್ದ ರಾಜಕಾರಣಿ ಮಗ ಸೇರಿದಂತೆ ಮೂವರನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇನ್ನು ಕೃತ್ಯದ ವೇಳೆ ನಿಖಿಲ್ ಬಳಸಿದ್ದ ಕಾರ್​​ನ್ನ ಖಾಕಿ ಸೀಜ್ ಮಾಡಿದೆ. ಡ್ರಗ್ಸ್ ದಂಧೆ ಜತೆ ಸೆಕ್ಸ್ ದಂಧೆಗೂ ಬಯಲಾಗಿದ್ದ ಕೇಸ್​ನಲ್ಲಿ ಮತ್ತೆ ಮೂವರು ಲಾಕ್ ಆಗಿದ್ದಾರೆ. ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ನಿಖಿಲ್, ಡಿಕ್ಸನ್ ಹೆಡೆಮುರಿ …

Read More »

ವಿದ್ಯಾರ್ಥಿಗಳ ಫಲಿತಾಂಶವನ್ನು ಮತ್ತಷ್ಟು ಉತ್ತಮಗೊಳಿಸಲು ಒಂದು ದಿನದ ಕಾರ್ಯಾಗಾರ

ಚಿಕ್ಕೋಡಿ ನಗರದ ಪರಣ ನಾಗಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಮತ್ತಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಇಂದು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ಪರೀಕ್ಷಾ ತಯಾರಿ ವಿಧಾನಗಳು, ಸಮಯ ನಿರ್ವಹಣೆ ಕೌಶಲ್ಯ, ಒತ್ತಡ ನಿಯಂತ್ರಣ ಹಾಗೂ ಹೆಚ್ಚಿನ ಅಂಕಗಳನ್ನು ಸಾಧಿಸಲು ಅಗತ್ಯವಾದ ತಂತ್ರಗಳ ಕುರಿತು ತಜ್ಞರು ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದು ಹಾಗೂ ಉತ್ತಮ …

Read More »

ಕ್ರಿಕೆಟ್ ಪಂದ್ಯಾವಳಿಗೆ ಚನ್ನರಾಜ ಹಟ್ಟಿಹೊಳಿ ಚಾಲನೆ

ಬೆಳಗಾವಿ : ಕೆಕೆ ಕೊಪ್ಪ ಗ್ರಾಮದಲ್ಲಿ ಹರ್ಷಾ ಶುಗರ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಹರ್ಷಾ ಶುಗರ್ಸ್ ಕೆಪಿಎಲ್ -2026 ಕ್ರಿಕೆಟ್ ಪಂದ್ಯಾವಳಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಭರ್ಜರಿ ಚಾಲನೆ ನೀಡಿದರು. ಕೆಕೆ ಕೊಪ್ಪ ಗ್ರಾಮದಲ್ಲಿನ ಕ್ರೀಡಾಭಿಮಾನಿಗಳು, ಯುವಕರು ಹಾಗೂ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಮಟ್ಟದಲ್ಲಿ ಕ್ರೀಡಾಕಾರ್ಯಕ್ರಮಗಳನ್ನು ಆಯೋಜಿಸುವುದು ಯುವಕರಲ್ಲಿ ಶಿಸ್ತು, ತಂಡಭಾವನೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಲು …

Read More »

ಮಾದಕ ವಸ್ತು ಮುಕ್ತ ಕರ್ನಾಟಕ ಜಾಗೃತಿಗಾಗಿ ಬೆಳಗಾವಿ ಪೊಲೀಸ್ ಇಲಾಖೆಯಿಂದ ಮ್ಯಾರಾಥಾನ್

ಬೆಳಗಾವಿ : ಜಿಲ್ಲಾ ಹಾಗೂ ನಗರ ಪೊಲೀಸ್ ಕಮೀಷ್ನರೇಟ್ ವತಿಯಿಂದ ‘ಮಾದಕ ವಸ್ತು ಮುಕ್ತ ಕರ್ನಾಟಕ’ ಜಾಗೃತಿಗಾಗಿ ನಗರದಲ್ಲಿ ಭಾನುವಾರು 5 ಮತ್ತು 10 ಕಿಮೀ ವಿಭಾಗದಲ್ಲಿ ಮ್ಯಾರಥಾನ್ ಆಯೋಜಿಸಲಾಗಿತ್ತು. ಜಿಲ್ಲಾ ಪೊಲೀಸ್ ಮೈದಾನದಿಂದ ಬೆಳಗ್ಗೆ ಆರಂಭಗೊಂಡ 5ಕಿಮೀ ಓಟವು ಆರ್‌ಟಿಒ ವೃತ್ತ, ಅಶೋಕ ಸ್ಥಂಭ ವೃತ್ತ, ಕನಕದಾಸ ವೃತ್ತ, ಶ್ರೀನಗರ ಗಾರ್ಡನ್, ಧರ್ಮನಾಥ ವೃತ್ತದ ಮೂಲಕ ಸಂಚರಿಸಿ ಪುನಃ ಮೈದಾನದಲ್ಲಿ ಮುಕ್ತಾಯವಾಯಿತು. 10ಕಿಮೀ ಓಟ ಕೃಷ್ಣದೇವರಾಯ ವೃತ್ತ, ಸದಾಶಿವ ನಗರ, …

Read More »