Breaking News

ಜ್ಞಾನದಿಂದ ಜೀವನದಲ್ಲಿ ಏನಾದರೂ ಸಾಧಿಸಬಹುದು

Spread the love

ಅಂಕಲಗಿ. – ಜ್ಞಾನದಿಂದ ಜೀವನದಲ್ಲಿ ಏನಾದರೂ ಸಾಧಿಸಬಹುದು. ಸಾಧನೆಗೆ ಅಂತರಾವಲೋಕನ ಮುಖ್ಯ. ಕಾರಣ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಲಿಕೆಯಿಂvದ ರೂಪಿಸಿಕೊಳ್ಳಬೇಕು ಎಂದು ಬೆಳಗಾವಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹೇಳಿದರು.

ಅವರು ಗುರುವಾರ ಅಂಕಲಗಿ ಕೆ.ಜೆ.ಎಸ್. ಸಂಸ್ಥೆಯ ಎಸ್.ಎ. ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತ, ಮಕ್ಕಳಲ್ಲಿ ಹುದುಗಿರುವ ಶಕ್ತಿಗೆ ಆಸಕ್ತಿ ಮತ್ತು ಸ್ಪೂರ್ತಿ ತುಂಬುವ ಕಾರ್ಯ ಶಿಕ್ಷಕರಿಂದಾಗಬೇಕು. ಮಕ್ಕಳಿಗೆ ಕಲಿಕಾ ಸ್ಪೂರ್ತಿ ಅತ್ಯವಶ್ಯ ಎಂದರು.

ಈ ಕುಂದರನಾಡಿನಲ್ಲಿ ಕಲಿಕೆಗೆ ಪೂರಕವಾದ ಸಂಪನ್ಮೂಲಗಳಿಗೆ ಕೊರತೆ ಇಲ್ಲ. ಇಲ್ಲಿನ ಪರಿಸರ, ವಾತಾವರಣ, ಎಲ್ಲ ಸೌಲಭ್ಯಗಳು ಮತ್ತು ಸಾಧ್ಯತೆಗಳನ್ನು ಬಳಸಿಕೊಂಡು ಸಾಧಕರಾಗಿ. ಶಿಕ್ಷಣಕ್ಕಾಗಿ ಹಳ್ಳಿಗಳನ್ನು ತೊರೆಯುವದು ಬೇಡ. ಸಾಮಾಜಿಕ ಜಾಲ ತಾಣಗಳ ಮೂಲಕ ಧನಾತ್ಮಕ ಶಿಕ್ಷಣವನ್ನು ಪಡೆದು ವಿವಿಧ ವೃತ್ತಿ ಕೌಶಲ್ಯಗಳತ್ತ ಮನಸ್ಸನ್ನು ಕೇಂದ್ರೀಕರಿಸಬೇಕೆಂದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಕಾರ್ಮಿಕ ಧುರೀಣ, ಅಂಬಿರಾವ್ ಪಾಟೀಲ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ ಶಿವಾನಂದ ಡೋಣಿ ವಹಿಸಿದ್ದರು. ಚಿಕ್ಕೋಡಿ ಡಿ.ಡಿ.ಪಿ.ಐ ಗಜಾನನ ಮನ್ನಿಕೇರಿ, ಬಿ.ಇ.ಓ ಜಿ.ಬಿ.ಬಳಿಗಾರ, ಕಾರ್ಯದರ್ಶಿ ಭೀಮಗೌಡ ಪೋಲಿಸಗೌಡರ, ಸದಸ್ಯರಾದ ರಾಜು ತಳವಾರ, ಬಿ.ಬಿ.ಪಾಟೀಲ, ಎ.ಎನ್.ಕರಲಿಂಗಣ್ಣವರ, ಎಮ್.ಬಿ.ನಿರ್ವಾಣಿ, ಎಮ್.ಆರ್.ದೇಸಾಯಿ, ಎಲ್.ಕೆ.ಪೂಜೇರಿ, ಪದವಿ ಕಾಲೇಜಿನ ಪ್ರಾಚಾರ್ಯ, ಎಮ್.ಎನ್.ಮಾವಿನಕಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಗಣ್ಯರು ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ಎಸ್.ಆರ್.ವಾಸನ್ ಸ್ವಾಗತಿಸಿದರು. ಶಿಕ್ಷಕಿ, ಸಂಗೀತಾ ನಿರೂಪಿಸಿದರು. ಕ್ಯಾಪ್ಟನ್, ಬಿ.ಎಲ್.ಪರಗಣ್ಣವರ ವಂದಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿದವು.


Spread the love

About Laxminews 24x7

Check Also

ರಾಯಬಾಗ ಪೊಲೀಸರಿಂದ 7.82ಲಕ್ಷ ಮೊತ್ತದ ಗಾಂಜಾ ವಶ ಆರೋಪಿಗಳ ಬಂಧನ

Spread the loveರಾಯಬಾಗ ಪೊಲೀಸರಿಂದ 7.82ಲಕ್ಷ ಮೊತ್ತದ ಗಾಂಜಾ ವಶ ಆರೋಪಿಗಳ ಬಂಧನ ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ