Breaking News

ಸಿದ್ದರಾಮಯ್ಯ ಮೂಲೆಗುಂಪು ಮಾಡಿದರೆ ಕಾಂಗ್ರೆಸ್‍ಗೆ ಉಳಿಗಾಲವಿಲ್ಲ’

Spread the love

ಶ್ರೀನಿವಾಸಪುರ: ‘ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಿದರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ’ ಎಂದು ಶಾಸಕ ಕೆ.ಆರ್‌.ರಮೇಶ್ ಕುಮಾರ್ ತಿಳಿಸಿದ್ದಾರೆ.

ಮಾರ್ಚ್‌ 31ರಂದು ಪಟ್ಟಣ ಹೊರವಲಯದ ಕನಕಭವನದಲ್ಲಿ ನಡೆದ ಕುರುಬರ ಸಭೆಯಲ್ಲಿ ಅವರು ತೆಲುಗಿನಲ್ಲಿ ಮಾತನಾಡಿರುವ ವಿಚಾರ ತಡವಾಗಿ ಗೊತ್ತಾಗಿದೆ.

 

‘ಸಿದ್ದರಾಮಯ್ಯ ಮುನಿಸಿಕೊಂಡು ಕಾಂಗ್ರೆಸ್‌ನಿಂದ ಪಕ್ಕಕ್ಕೆ ಸರಿದರೆ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‍ಗೆ ಬಂದಿರುವ ಗತಿ ರಾಜ್ಯ ಕಾಂಗ್ರೆಸ್‍ಗೂ ಬರುತ್ತದೆ’ ಎಂದಿದ್ದಾರೆ.

‘ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸದಿದ್ದರೆ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ತೊಂದರೆ ಆಗಲಿದೆ. ಮತ್ತೆ ಮತ್ತೆ ಕಸರತ್ತು ಮಾಡಿ ರಾಹುಲ್ ಗಾಂಧಿ ಮನಸ್ಸು ಪರಿವರ್ತನೆ ಮಾಡಿಸಿದರೆ ಸಿದ್ದರಾಮಯ್ಯ ಅವರನ್ನು ಮತ್ತೆ ವಿರೋಧ ಪಕ್ಷದಲ್ಲಿ ಕೂರಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಕನ್ಹೇರಿ ಶ್ರೀಗಳ ಜಿಲ್ಲಾ ಪ್ರವೇಶ ನಿರ್ಬಂಧ ಹಿಂಪಡೆಯಿರಿ… ಡಾ. ರವಿ ಪಾಟೀಲ್ ಡಿಸಿಗೆ ಮನವಿ

Spread the love ಕನ್ಹೇರಿ ಶ್ರೀಗಳ ಜಿಲ್ಲಾ ಪ್ರವೇಶ ನಿರ್ಬಂಧ ಹಿಂಪಡೆಯಿರಿ… ಡಾ. ರವಿ ಪಾಟೀಲ್ ಡಿಸಿಗೆ ಮನವಿ ಕನ್ಹೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ