Breaking News

ಧಾರವಾಡ-ಬೆಳಗಾವಿ ಪ್ಯಾಸೆಂಜರ್ ಬೋಗಿಯಲ್ಲಿ ಅಪರಿಚಿತ ಹೆಣ್ಣು ಮಗುವಿನ ಮೃತದೇಹ ಪತ್ತೆ

Spread the love

ಬೆಳಗಾವಿ : ಬೆಳಗಾವಿ ರೇಲ್ವೆ ಪೊಲೀಸ್ ಠಾಣೆಯ ಕ್ಲಿನಿಂಗ್ ಯಾರ್ಡ್‌ನಲ್ಲಿ ಧಾರವಾಡ-ಬೆಳಗಾವಿ ಪ್ಯಾಸೆಂಜರ್ ರೇಲ್ವೆ ಗಾಡಿಯ ಗಾಡಿಯ ಎಸ್-೩ ಬೋಗಿಯಲ್ಲಿ ಸಿಟ್ ನಂ ೨೦ರ ಕೆಳಗೆ ಅಪರಿಚಿತ ಹೆಣ್ಣು ಮಗು(೩) ಮೃತಪಟ್ಟಿದ್ದು, ಸದರಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.

ಮೃತ ಮಗುವಿನ ಚಹರೆ ಪಟ್ಟಿಯ ವಿವರ:
ಎತ್ತರ ೩ ಅಡಿ, ಕೆಂಪು ಮೈ ಬಣ್ಣ, ತೆಳ್ಳನೆ ಮೈಕಟ್ಟು, ಉದ್ದು ಮುಖ, ನೀಟಾದ ಸಣ್ಣ ಮೂಗು, ಕಪ್ಪು ಕೂದಲು, ಕೊರಳಲ್ಲಿ ಕೇಸರಿ ಬಣ್ಣದ ಸಿದ್ದಾರೂಢ ಸ್ವಾಮಿಯ ತಾಯತ, ಎಡಗಾಲಿನಲ್ಲಿ ಕಪ್ಪು ದಾರವಿದ್ದು, ತಿಳಿ ಗುಲಾಬಿ ಬಣ್ಣದ ಸ್ಲೀವ್ ಲೆಸ್ ಪ್ರಾಕ್ ಹಾಗೂ ನೀಲಿ ಬಣ್ಣದ ಒಳ ಉಡುಪು ಧರಿಸಿರುತ್ತಾಳೆ.
ಈ ರೀತಿ ಚಹರೆಯುಳ್ಳ ಅಪರಿಚಿತ ಹೆಣ್ಣು ಮಗುವಿನ ವಾರಸುದಾರರು ಇದ್ದಲ್ಲಿ ಬೆಳಗಾವಿ ರೈಲ್ವೆ ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ: (೦೮೩೧) ೨೪೦೫೨೭೩ ಪಿ.ಎಸ್.ಐ ಮೊಬೈಲ್ ನಂ : ೯೪೮೦೮೦೨೧೨೭ ಅಥವಾ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ. (೦೮೦) ೨೨೮೭೧೨೯೧ ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ರೈಲ್ವೆ ಪೋಲಿಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ