Breaking News

ಕನ್ನಡಿಗರನ್ನ ಮಹಾರಾಷ್ಟ್ರದಿಂದ ಓಡಿಸಬೇಕಾಗುತ್ತೆ’: ಮಹಾರಾಷ್ಟ್ರ ನಾಯಕರ ಉದ್ಧಟತನದ ಹೇಳಿಕೆ.

Spread the love

ಚಿಕ್ಕೋಡಿ: ಕರ್ನಾಟಕ ಮತ್ತು ಮಹಾಷ್ಟ್ರದ ಗಡಿ ವಿವಾದ ದಿನೇ ದಿನೇ ಕಾವು ಪಡೆಯುತ್ತಿದೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರೇ ಖಡಕ್​ ಉತ್ತರ ನೀಡಿದರೂ ಇನ್ನೂ ಮಹಾ ಪುಂಡರ ಆಟಾಟೋಪ ನಿಲ್ಲುತ್ತಿಲ್ಲ. ಉದ್ಧವ್​ ಠಾಕ್ರೆ ಬಣದವರು ಗಡಿ ಭಾಗದಲ್ಲಿ ‘ಮಹಾರಾಷ್ಟ್ರಕ್ಕೆ ಕರ್ನಾಟಕ ಬಸ್ ಬರೋದು ಬ್ಯಾನ್ ಮಾಡಬೇಕಾಗುತ್ತೆ’ ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ.

 

ನಿನ್ನೆ ಉದ್ಧವ್ ಠಾಕ್ರೆ ಬಣದಿಂದ ಗಡಿಯಲ್ಲಿ ಪ್ರತಿಭಟನೆ ನಡೆದಿತ್ತು. ಇಂದು ರಾಜ್ ಠಾಕ್ರೆ ಬಣದವರಿಂದ ಗಡಿಯಲ್ಲಿ ಪ್ರತಿಭಟನೆ ನಡೆದಿದೆ. ಇವರ ಪ್ರತಿಭಟನೆ ಕಾಗವಾಡ ಚೆಕ್‌ ಪೋಸ್ಟ್‌ವರೆಗೂ ಬಂದಿತ್ತು. ಈ ಸಂದರ್ಭ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಸಾಂಗ್ಲಿ ಜಿಲ್ಲಾಧ್ಯಕ್ಷ ಉದ್ಧಟತನದ ಹೇಳಿಕೆ ನೀಡಿದ್ದಾರೆ.

ಮನಸೇ ಅಧ್ಯಕ್ಷ ತಾನಾಜಿ ಸಾವಂತ 10ಕ್ಕೂ ಹೆಚ್ಚು ಕಾರ್ಯಕರ್ತರೊಡನೆ ಬಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ. ‘ಕರ್ನಾಟಕದವರು ನಮ್ಮ ಮೇಲೆಯೇ ಅವಲಂಬಿತರಾಗಿದ್ದಾರೆ. ಇವರಿಗೆ ಆರೋಗ್ಯ ಸೇವೆಗೆ ಮಹಾರಾಷ್ಟ್ರ ಬೇಕು. ಉದ್ಯೋಗಕ್ಕಾಗಿ ಹಲವು ಜನ ನಮ್ಮಲ್ಲಿಗೇ ಬರುತ್ತಾರೆ. ಇವರಿಗೆ ‌ಕುಡಿಯುವ ನೀರು ಸಹ ಮಹಾರಾಷ್ಟ್ರದಿಂದಲೇ‌ ಬೇಕು. ಆದರೆ ಗಡಿ ವಿಚಾರ ಬಂದಾಗ ಮಾತ್ರ ನಮ್ಮ ಮೇಲೆ ದೌರ್ಜನ್ಯ ಮಾಡ್ತಾರೆ. ಕರ್ನಾಟಕದ ಸಂಘಟನೆಗಳಿಂದ ಮಹಾ ಲಾರಿಗಳ ಮೇಲೆ ದಾಳಿ ಆಗುತ್ತೆ. ಇದು ಮುಂದುವರೆದರೆ ಮಹಾರಾಷ್ಟ್ರದಲ್ಲಿ ಇರುವಂತಹ ಕನ್ನಡಿಗರನ್ನು ಓಡಿಸಬೇಕಾಗುತ್ತೆ. ಮಹಾರಾಷ್ಟ್ರಕ್ಕೆ ಕರ್ನಾಟಕ ಬಸ್ ಬರೋದು ಕೂಡ ಬ್ಯಾನ್ ಮಾಡಬೇಕಾಗುತ್ತೆ’ ಎಂದು ಬೊಬ್ಬಿರಿದು ಹೋಗಿದ್ದಾರೆ.


Spread the love

About Laxminews 24x7

Check Also

ಆಡಳಿತ ವ್ಯವಸ್ಥೆ ಕುಸಿದಿದೆ, ನಾನು 2 ದಿನದಲ್ಲಿ ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ: ಶಾಸಕ ರಾಜು ಕಾಗೆ

Spread the loveಚಿಕ್ಕೋಡಿ(ಬೆಳಗಾವಿ): “ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಎರಡು ದಿನದಲ್ಲಿ ನಾನು ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ. ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ