Breaking News

ಸಹೋದರತೆಯ ಬಂಧ ಇನ್ನಷ್ಟು ಗಟ್ಟಿಯಾಗಲಿ: ಸಂತೋಷ್ ಜಾರಕಿಹೊಳಿ

Spread the love

ಬದುಕಿನುದ್ದಕ್ಕೂ ಭರವಸೆಯಾಗಿ ನಿಲ್ಲುವ, ಅಪ್ಪನಂತೆ ಕಾಳಜಿ ಇಟ್ಟುಕೊಂಡಿರುವ, ಅಮ್ಮನಂತೆ ಪ್ರೀತಿ ತೋರುವ, ಗೆಳೆಯನಂತೆ ಕ್ಷಮಿಸುವ ಔದಾರ್ಯದ ಜೀವ ಹೀಗೆಂದಾಗ ನೆನಪಾಗುವ ಹೆಸರೇ ಅಣ್ಣ. ಅಣ್ಣ – ತಂಗಿ ನಡುವೆ ಇರುವ ಬಾಂಧವ್ಯವೇ ಅಂತಹದ್ದು. ವರ್ಷಪೂರ್ತಿ ಜಗಳವಾಡುತ್ತಲೇ ಕಾಲ ಕಳೆಯುವ ಈ ಸಂಬಂಧ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಅನುಬಂಧದ ಸುತ್ತ ನಿಂತಿದೆ.

ಸಹೋದರ ಸಹೋದರಿಯರ ನಡುವಿನ ಭ್ರಾತೃತ್ವವನ್ನು ಗಟ್ಟಿಗೊಳಿಸುವ ನೆಲೆಯಲ್ಲಿಯೂ ರಕ್ಷಾ ಬಂಧನ ಮುಖ್ಯವಾಗುತ್ತದೆ.

ಶ್ರಾವಣ ಮಾಸವೆಂಬುದು ಸಂಬಂಧ ಮತ್ತು ಸಂಸ್ಕಾರಗಳಿಗೆ ಮಹತ್ವವನ್ನು ನೀಡುವ ಮಾಸವಾಗಿದ್ದು ಹುಣ್ಣಿಮೆಯ ದಿನದಂದು ಆಚರಿಸುವ ಹಬ್ಬವೇ ರಕ್ಷಾ ಬಂಧನ. ಮನುಷ್ಯ ತನ್ನ ಜೀವನದಲ್ಲಿ ಹಲವು ವಸ್ತುಗಳ ರಕ್ಷಣೆ ಮಾಡಲೇ ಬೇಕು. ಅದು ಹೆಚ್ಚಾಗಿ ಸ್ತ್ರೀ ಸಂಬಂಧಿತವಾದದ್ದು ಎನ್ನುವುದು ವಿಶೇಷ. ಇದರ ಅರ್ಥ ಅವರು ಅಬಲರು ಎಂದಲ್ಲ.

ಅವರ ರಕ್ಷಣೆ ಕರ್ತವ್ಯವೆಂದು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರೀತಿಸುವಂತೆ ಕಾಡುವ ಹುಡುಗರಿಂದ ತಪ್ಪಿಸಿಕೊಳ್ಳಲು ರಕ್ಷಾಬಂಧನ ಆಚರಿಸುತ್ತಾರೆ.

ರಕ್ಷಾ ಬಂಧನದಲ್ಲಿ ರಾಖೀ ಕಟ್ಟುವ ಸಂಪ್ರದಾಯವಿದ್ದು ಇದು ರಕ್ಷಣೆಯ ಸೂಚಕವೆಂದು ಕರೆಯುತ್ತಾರೆ. ಹಾಗೆಂದು ಸಂಬಂಧಗಳನ್ನು ಕೈಗೆ ಕಟ್ಟಿದ ದಾರದಿಂದಾಗಲಿ ಅಥವಾ ಕೊಡುವ ಉಡುಗೊರೆಯಿಂದಾಗಲಿ ಅಳೆಯಲು ಸಾಧ್ಯವಿಲ್ಲ. ಸಹೋದರತೆಯ ಸಂಬಂಧ ಗಟ್ಟಿಗೊಳ್ಳಲು ನಂಬಿಕೆ, ಪ್ರೀತಿ ಎಂಬ ತಳಪಾಯದ ಅಗತ್ಯವಿದೆ. ಆದರೆ ಇಂದು ಇದು ಕೇವಲ ಸಾಮಾಜಿಕ ಜಾಲತಾಣದ ತೋರ್ಪಡಿಕೆಯ ಹಬ್ಬವಾಗಿ ಆಚರಿಸುತ್ತಿರುವುವುದು ಸಹೋದರತೆಯ ಭ್ರಾತೃತ್ವ ಎಂಬ ವಿಟಮಿನ್‌ ಕೊರತೆ ಯಿಂದ ಈ ಜಗತ್ತೇ ಬಳಲುತ್ತಿದೆ ಎಂಬ ಅರ್ಥವನ್ನು ಇದು ಕಲ್ಪಿಸುತ್ತದೆ.

ಮಹಿಳೆ ಸಬಲಳೆಂದು ಮಾರುದ್ಧ ಬೋರ್ಡ್‌ ಹಾಕಿದರಾಯಿತೆ ಆಕೆ ಮನೆಯಿಂದ ಹೊರ ಹೋಗಲು ಇಂದಿಗೂ ಅಂಜುತ್ತಾಳೆ, ಉದ್ಯೋಗ ಕ್ಷೇತ್ರದಲ್ಲಿ ಅಭದ್ರತೆಯ ಭೂತ ಇನ್ನೂ ಆಕೆಯನ್ನು ಬಿಟ್ಟಿಲ್ಲ ಹೀಗೆ ತಾನಿದ್ದ ಪ್ರದೇಶವೆಲ್ಲ ಅಸುರಕ್ಷತೆ ಎಂದು ಆಕೆಗನಿಸುವ ಈ ಕಾಲಘಟಕ್ಕೆ ರಕ್ಷಾಬಂಧನವೆಂಬ ಆಚರಣೆ ಒಂದು ದಿನಕ್ಕೆ ಸೀಮಿತವಾದರೆ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯವೇ ಎಂಬುದನ್ನು ಸಹ ಪ್ರಶ್ನಿಸಬೇಕಾಗುತ್ತದೆ.

ಹಾಗಿದ್ದರೂ ಕಟ್ಟುವ ಸಣ್ಣ ದಾರದ ಮೂಲಕವಾದರೂ ಸಹೋದರತೆಯ ಬಂಧ ಉಳಿಯಲೆಂಬ ಚಿಂತನೆಯಲ್ಲಿ ಸಾಗೋಣ.

 


Spread the love

About Laxminews 24x7

Check Also

ಗಡಿ ವಿವಾದದಿಂದಾಗಿ ಮತ್ತೆ ಮಹಾರಾಷ್ಟ್ರ ಅಲರ್ಟ್

Spread the loveಬೆಳಗಾವಿ : ಗಡಿ ಸಚಿವರಾಗಿ ಹೆಚ್. ಕೆ. ಪಾಟೀಲ್ ಅವರನ್ನು ಕರ್ನಾಟಕ ಸರ್ಕಾರ ನೇಮಿಸುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಮತ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ