Breaking News

ಸಿದ್ಧಗಂಗಾ ಕ್ಷೇತ್ರದಲ್ಲಿ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪ್ರಥಮ ವರ್ಷದ ಪುಣ್ಯ ಸ್ಮರಣೆ ನಾಳೆ

Spread the love

ತುಮಕೂರು, ಜ.18- ಸಿದ್ಧಗಂಗಾ ಕ್ಷೇತ್ರದಲ್ಲಿ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪ್ರಥಮ ವರ್ಷದ ಪುಣ್ಯ ಸ್ಮರಣೆ ನಾಳೆ ನಡೆಯಲಿರುವ ಹಿನ್ನೆಲೆಯಲ್ಲಿ ಮಠದ ಆವರಣ ಕಾರ್ಯಕ್ರಮಕ್ಕಾಗಿ ವಿಶೇಷವಾಗಿ ಸಜ್ಜುಗೊಳ್ಳುತ್ತಿದೆ.  ಜ.19ರಂದು ಬೆಳಗಿನಿಂದ ಸಂಜೆಯವರೆಗೆ ವಿವಿಧ ಕಾರ್ಯಕ್ರಮಗಳು ಏರ್ಪಾಟಾಗಿದ್ದು, ಸರಿ ಸುಮಾರು 1 ಲಕ್ಷ ಜನರು ಸೇರುವ ಅಂದಾಜಿದೆ.

ಈ ಹಿನ್ನೆಲೆಯಲ್ಲಿ ಬಂದು ಹೋಗುವ ಭಕ್ತರು, ಸಾರ್ವಜನಿಕರಿಗಾಗಿ ಪ್ರಸಾದದ ವ್ಯವಸ್ಥೆ ಸಿದ್ಧಗೊಂಡಿದ್ದು, ಬೆಳಗ್ಗೆ 11.30 ರಿಂದ ಪ್ರಸಾದದ ವ್ಯವಸ್ಥೆ ಆರಂಭವಾಗಿ ರಾತ್ರಿ 11.30ರವರೆಗೂ ಮುಂದುವರೆಯಲಿದೆ. ಬೂಂದಿ, ಪಾಯಸವನ್ನು ತಯಾರಿಸಲಾಗುತ್ತಿದ್ದು, ಅನ್ನಾ, ಸಾಂಬರಿನ ಜೊತೆಗೆ ಇದನ್ನು ನೀಡಲಾಗುವುದು. ಕಳೆದ ಎರಡು ದಿನಗಳಿಂದ ಬೂಂದಿ ತಯಾರಿಕೆಗೆ ಮಠದಲ್ಲಿ ಸಿದ್ಧತೆಗಳು ನಡೆದಿವೆ.

ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ವಿವಿಧ ಗಣ್ಯರು, ಮಠಾಧೀಶರು ಆಗಮಿಸುತ್ತಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರೂ ಸಹ ಕಾರ್ಯಕ್ರಮಕ್ಕೆ ಆಗಮಿಸುವರು.

ಬೆಂಗಳೂರಿನ ಶಿವಕುಮಾರ ಸ್ವಾಮೀಜಿ ಅನ್ನದಾನ ಟ್ರಸ್ಟ್ ವತಿಯಿಂದ ಕಾರ್ಯಸೂಚಿ ಕೈಪಿಡಿ ಹಾಗೂ ವೆಬ್‍ಸೈಟ್ ಬಿಡುಗಡೆ ಮಾಡಲಾಗುತ್ತಿದೆ. ಗುರು ಕರುಣೆ ಮತ್ತು ನಿಷ್ಠೆ, ಯೋಗಾಂಗ ತ್ರಿವಿಧಿ, ಶಿವಕುಮಾರ ಚರಿತೆ ಪುಸ್ತಕಗಳು ಇದೇ ಸಂದರ್ಭದಲ್ಲಿ ಬಿಡುಗಡೆಯಾಗಲಿವೆ.

ಕೈಗಾರಿಕೋದ್ಯಮಿ ಮುಖೇಶ್ ಗರ್ಗ್ ಅವರು ಸುಮಾರು 50 ಕೆ.ಜಿ. ತೂಕದ ಶ್ರೀಗಳ ಬೆಳ್ಳಿ ಪುತ್ಥಳಿ ಸಮರ್ಪಿಸಲಿದ್ದಾರೆ. ಶ್ರೀಗಳ ಗದ್ದುಗೆಯಲ್ಲಿ ಅಂದು ಪೂಜ ಕೈಂಕರ್ಯಗಳು ನಡೆಯಲಿವೆ. ತುಮಕೂರು ಮಾತ್ರವಲ್ಲದೆ, ಇತರೆ ಜಿಲ್ಲಾಗಳಿಂದಲೂ ಶ್ರೀಮಠದ ಭಕ್ತರು ಅಂದು ಆಗಮಿಸಲಿದ್ದು, ಬಂದು ಹೋಗುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ವಿಶೇಷ ಗಮನ ಕೈಗೊಳ್ಳಲಾಗಿದೆ.

Advertisement


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ