ಬೆಳಗಾವಿಯ ಸ್ಮಶಾನಗಳ ದುಸ್ಥಿತಿ ಹೇಗಿದೆ ಎಂದರೆ ಮೃತರ ಅಂತ್ಯಕ್ರಿಯೆಗೆ ಹೋದವರು ಮರಳಿ ಮನೆಗೆ ಬರುತ್ತಾರೆ ಎನ್ನೋದು ಗ್ಯಾರಂಟಿ ಇಲ್ಲ. ಕೆಲವೊಂದು ಸ್ಮಶಾನಗಳಲ್ಲಿ ರಾತ್ರಿಯಾದ್ರೆ ಬೆಳಕಿನ ವ್ಯವಸ್ಥೆ ಇಲ್ಲ, ಮತ್ತೊಂದಿಷ್ಟು ಮುಕ್ತಿಧಾಮಗಳ ಮೇಲ್ಛಾವಣಿಯ ತಗಡುಗಳು ಆಗಲೋ ಈಗಲೋ ಬೀಳುವಂತಾಗಿವೆ.
ಹೌದು ನಾವು ತೋರಿಸುತ್ತಿರುವ ಈ ದೃಶ್ಯ ಶಾಹಪುರದ ಮುಕ್ತಿಧಾಮದಲ್ಲಿನ ಅವ್ಯವಸ್ಥೆಯನ್ನು. ಇಲ್ಲಿ ಮೇಲ್ಛಾವಣಿಯಲ್ಲಿ ಹಾಕಿರುವ ತಗಡುಗಳು ಸಂಪೂರ್ಣವಾಗಿ ತುಕ್ಕು ಹಿಡಿದಿವೆ. ಯಾವಾಗ ಬೀಳುತ್ತವೋ ಗೊತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೇ ಮೃತರ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು, ಅವರ ಸಂಬಂಧಿಕರು ನಡೆಸುತ್ತಿದ್ದಾರೆ.
ಈ ವೇಳೆ ಆ ತಗಡುಗಳು ಯಾರ ಮೇಲಾದ್ರೂ ಬಿದ್ದು ಏನಾದ್ರೂ ಜೀವ ಹಾನಿ ಆದ್ರೆ ಇದಕ್ಕೆ ಯಾರು ಹೊಣೆ..? ಇನ್ನು ಮಳೆ ನೀರು ಶವದ ಮೇಲೆಯೇ ಬೀಳುತ್ತಿರುವುದು ಶವಗಳು ಸಂಪೂರ್ಣವಾಗಿ ದಹನವಾಗುತ್ತಿಲ್ಲ. ಹೀಗಾಗಿ ತಕ್ಷಣವೇ ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಅವರು ಈ ಬಗ್ಗೆ ಗಮನಹರಿಸಬೇಕು. ಇಲ್ಲಿನ ಅವ್ಯವಸ್ಥೆ ಸರಿಪಡಿಸಿ ಹೊಸ ತಗಡುಗಳನ್ನು ಹಾಕಿ, ಮುಂದೆ ಆಗುವ ಅನಾಹುತ ತಪ್ಪಿಸಬೇಕು ಎಂದು ಇಲ್ಲಿನ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.