Breaking News

ಬೆಳಗಾವಿ ತಾಲೂಕಿನ ಹೊನ್ಯಾಳ ಗ್ರಾಮದಲ್ಲಿ ಮಹಾಲಕ್ಷ್ಮೀ ದೇವಿ ದೇವಸ್ಥಾನ ಜಾಗವನ್ನು ಅನಧಿಕೃತವಾಗಿ ದೇವಸ್ಥಾನದ ಪೂಜಾರಿ ಮಾರಾಟ ಮಾಡಿದ್ದಾನೆ.

Spread the love

ಬೆಳಗಾವಿ ತಾಲೂಕಿನ ಹೊನ್ಯಾಳ ಗ್ರಾಮದಲ್ಲಿ ಮಹಾಲಕ್ಷ್ಮೀ ದೇವಿ ದೇವಸ್ಥಾನ ಜಾಗವನ್ನು ಅನಧಿಕೃತವಾಗಿ ದೇವಸ್ಥಾನದ ಪೂಜಾರಿ ಮಾರಾಟ ಮಾಡಿದ್ದಾನೆ. ದೇವಸ್ಥಾನ ಜಾಗ ದೇವಸ್ಥಾನಕ್ಕೆ ಬಿಟ್ಟು ಕೊಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಬೆಳಗಾವಿ ಗ್ರಾಮೀಣ ಠಾಣೆ ಎಸಿಪಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಹೌದು ಹೊನ್ಯಾಳ ಗ್ರಾಮದಲ್ಲಿ 700-800 ವರ್ಷಗಳ ಹಿಂದೆ ಸ್ಥಾಪನೆ ಆಗಿರುವ ಹೊನ್ಯಾಳ ಗ್ರಾಮದಲ್ಲಿ 4 ಎಕರೆ 28 ಗುಂಟೆ ಜಮೀನಿನಲ್ಲಿ ಗ್ರಾಮದೇವಿ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಉಪಯೋಗ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ ಕಳೆದ 11 ವರ್ಷಗಳ ಹಿಂದೆ ದೇವಸ್ಥಾನದ ಪೂಜಾರಿ ಆ ಜಾವನ್ನು ಮಾರಾಟ ಮಾಡಿದ್ದಾನೆ. ಪೂಜಾರಿಯನ್ನು ಗ್ರಾಮದ ಹಿರಿಯರು ಕರೆಸಿ ತಾಖೀತು ಮಾಡಿದಾಗ ಇದನ್ನು ಸರಿಪಡಿಸುತ್ತೇನೆ ಎಂದು ಹೇಳಿ ಹೋದವನು ಮತ್ತೆ ಊರಿಗೆ ಕಾಲನ್ನೇ ಇಟ್ಟಿಲ್ಲವಂತೆ. ಹೀಗೆ ಈ ಭೂಮಿ ಖರೀದಿ ಮಾಡಿಕೊಂಡವರು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ.

ಅಲ್ಲಿದ್ದ ಗದ್ದುಗೆಯನ್ನು ನಾಶ ಮಾಡಿದ್ದಾರೆ. ಎರಡ್ಮೂರು ತಿಂಗಳ ಹಿಂದೆ ಗ್ರಾಮದ ಹಿರಿಯರು ಸೇರಿಕೊಂಡು ಹೊಸದಾಗಿ ಗದ್ದುಗೆ ಸ್ಥಾಪಿಸಿ ಆ ಜಾಗ ಮಹಾಲಕ್ಷ್ಮೀ ದೇವಿ ದೇವಸ್ಥಾನದ ಜಾಗ ಎಂದು ಎಸಿ ಆಫೀಸ್‍ನಲ್ಲಿ ದೂರು ಕೊಟ್ಟಿದ್ದೇವೆ. ಯಾರು ಮಾರಾಟಕ್ಕೆ ತೆಗೆದುಕೊಂಡಿದ್ದಾರೆ ಅವರು ಅಲ್ಲಿ ಬಂದು ದಾಂಧಲೆ, ತಕರಾರು ಮಾಡುತ್ತಿದ್ದಾರೆ. ಕೋರ್ಟನಿಂದ ಏನು ಆದೇಶ ಬರುತ್ತದೆ ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಅಲ್ಲಿಯವರೆಗೂ ಯಾರೂ ಇಲ್ಲಿ ಕಿರಿಕಿರಿ ಮಾಡುವಂತಿಲ್ಲ ಎಂದು ಹೇಳಿದ್ದೇವೆ. ಆದರೆ ಗ್ರಾಮೀಣ ಎಸಿಪಿ ಅವರ ಬಳಿ ನಮ್ಮ ಮೇಲೆ ದೂರು ಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ!!

Spread the love ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ!! ದೇಶದಲ್ಲಿನ ಎಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ