ವಾಷಿಂಗ್ಟನ್, ಏ.24-ವಿಶ್ವಕ್ಕೇ ಕಂಟಕವಾಗಿರುವ ಕಿಲ್ಲರ್ ಕೊರೊನಾ ನಿಗ್ರಹಕ್ಕಾಗಿ ವಿಶ್ವಾದ್ಯಂತ ಹೊಸ ಹೊಸ ಪ್ರಯೋಗಗಳು ಮುಂದುವರಿದಿರುವಾಗಲೇ ಕೋವಿಡ್-19 ಪ್ರಕರಣ ತಡೆಗಟ್ಟುವಲ್ಲಿ ಸೂರ್ಯನ ಕಿರಣ ಸಹಕಾರಿ ಎಂಬ ಸಂಗತಿ ಬೆಳಕಿಗೆ ಬಂಧಿದೆ.
ಸೂರ್ಯರಶ್ಮಿ, ತಾಪಮಾನ ಮತ್ತು ವಾತಾವರಣದ ಆದ್ರ್ರತೆ (ಬೇಸಿಗೆಯಂಥ ವಾತಾವರಣ) ಕೊರೊನಾ ವೈರಸ್ ಹರಡುವಿಕೆಯನ್ನು ಕ್ಷೀಣಿಸಬಲ್ಲದು ಎಂದು ಅಮೆರಿಕದ ಆರೋಗ್ಯ ಇಲಾಖೆಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತದಲ್ಲೀಗ ಬೇಸಿಗೆ ಕಾಲ. ಸೂರ್ಯನ ಬಿಸಿಲು ಪ್ರಖರವಾಗಿರುವುದರಿಂದ ಇದು ಭಾರತೀಯರಿಗೆ ಶುಭ ಸುದ್ದಿಯಾಗಿದೆ.
ಸೂರ್ಯನ ಪ್ರಖರ ಬೆಳಕು ಅಥವಾ ವಾತಾವರಣದ ಆದ್ರ್ರತೆಗೆ ಕೊರೊನಾ ವೈರಾಣುವನ್ನು ಒಳಪಡಿಸಿದಾಗ ಅದು ಕ್ಷಿಪ್ರವಾಗಿ ಮೃತಪಟ್ಟಿದೆ. ಚುರುಗುಟ್ಟುವ ಸೂರ್ಯ ಕಿರಣದಲ್ಲಿ ಇಂಥ ವೈರಸ್‍ಗಳು ಬೇಗನೇ ಸಾಯುತ್ತವೆ. ಇದರಲ್ಲಿನ ಐಸೋಪ್ರೊಫೈಲ್ ಆಲ್ಕೋಹಾಲ್ ವೈರಾಣುವನ್ನು ಕೇವಲ 30 ಸೆಕೆಂಡ್‍ಗಳಲ್ಲೇ ಕೊಂದು ಹಾಕುತ್ತದೆ ಎಂಬುದು ಸಾಬೀತಾತಿದೆ.
ಅಮೆರಿಕದ ಆಂತರಿಕ ಭದ್ರತಾ ಇಲಾಖೆಯ ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ದೇಶನಾಲಯ ನಡೆಸಿದ ವೈಜ್ಞಾನಿಕ ಅಧ್ಯಯನವೊಂದರ ಫಲಿತಾಂಶದಿಂದ ಈ ಸಂಗತಿ ಬೆಳಕಿಗೆ ಬಂದಿದೆ. ವಾಷಿಂಗ್ಟನ್‍ನ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದೈನಂದಿನ ಸುದ್ದಿಗೋಷ್ಠಿ ವೇಳೆ ಇಲಾಖೆಯ ಅದೀನ ಕಾರ್ಯದರ್ಶಿ ಬಿಲ್ ಬ್ರೆಯಾನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಿಲ್ಲರ್ ಕೊರೊನಾ ವೈರಸ್ ಕೊಲ್ಲಲು ಸೌರಶಕ್ತಿ ಅತ್ಯಂತ ಪ್ರಬಲವಾಗಿದೆ ಎಂಬುದು ಈಗ ಸಾಕ್ಷ್ಯಾಧಾರ ಸಮೇತ ದೃಢಪಟ್ಟಿದೆ. ಸೂರ್ಯನ ಪ್ರಖರ ಬೆಳಕು ಮತ್ತು ಕಿರಣಗಳು ನೆಲದ ವಿವಿಧ ಮೇಲ್ಮೈ ಮತ್ತು ಗಾಳಿಯಲ್ಲಿರುವ ಅಗೋಚರ ವೈರಸ್‍ಗಳನ್ನು ಕೊಂದು ಹಾಕುತ್ತದೆ ಎಂದು ಅವರು ವಿವರಿಸಿದರು.
ಬೇಸಿಗೆ ಕಾಲದಲ್ಲಿ ಕೋವಿಡ್-19 ಬದುಕುವುದು ಕಷ್ಟ ಎಂಬ ಬಗ್ಗೆ ಈ ಹಿಂದೆ ಹೇಳಲಾಗಿತ್ತಾದರೂ ಆ ಬಗ್ಗೆ ನಿಖರ ಫಲಿತಾಂಶ ಲಭ್ಯವಾಗಿಲ್ಲ. ಆದರೆ ಈಗ ಅಮೆರಿಕದ ವೈಜÁ್ಞನಿಕ ಅಧ್ಯಯನ ಮತ್ತು ಸಂಶೋಧನೆ ಇದನ್ನು ದೃಢಪಟ್ಟಿಸಿದೆ. ಸೂರ್ಯನ ಬೆಳಕು, ಸೌರಕಿರಣ, ಉಷ್ನಾಂಶ ಹೆಚ್ಚಳ ಮತ್ತು ವಾತಾವರಣದಲ್ಲಿನ ಆದ್ರ್ರತೆ (ಹ್ಯೂಮಿಡಿಟಿ) ವೈರಸ್ ನಿಗ್ರಹಕ್ಕೆ ರಾಮಬಾಣವಾಗಲಿದೆ ಎಂಬುದು ಈಗ ಭರವಸೆಯ ಹೊಸ ಆಶಾಕಿರಣವಾಗಿದೆ.
crdtesanje