Breaking News

ಗಂಡ ಹೆಂಡತಿ ಜಗಳದಲ್ಲಿ ಮಧ್ಯೆ ಪ್ರವೇಶಿಸಿ ದುಡ್ಡು ಮಾಡಲು ಯತ್ನ: ಇನ್ಸ್​ಪೆಕ್ಟರ್​ ವಿರುದ್ಧ ಎಫ್ಐಆರ್

Spread the love

ಬೆಂಗಳೂರು: ಗಂಡ ಹೆಂಡತಿಯ ಜಗಳದಲ್ಲಿ ಲಾಭ ಪಡೆಯಲು ಯತ್ನಿಸಿದ ಪೊಲೀಸ್ ಇನ್ಸ್​ಪೆಕ್ಟರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಎಫ್‌ಐಆರ್ ದಾಖಲಿಸಿದೆ.

ಕೆ.ಆರ್. ಪುರ ಠಾಣೆಯಲ್ಲಿ ಇನ್ಸ್​ಪೆಕ್ಟರ್ ಆಗಿದ್ದ ಜಯರಾಜ್ ಮತ್ತು ಎಎಸ್ಐ ಶಿವಕುಮಾರ್ ಎಂಬವರ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.

ಕೌಟುಂಬಿಕ ಕಲಹದ ಹಿನ್ನೆಲೆ ಸಂಜು ರಾಜನ್ ವಿರುದ್ಧ ಆಕೆಯ ಪತ್ನಿ ದೂರು ದಾಖಲಿಸಿದ್ದರು. ಹೀಗಾಗಿ ಬಂಧನಕ್ಕೆ ಒಳಗಾಗಿದ್ದ ಸಂಜು ರಾಜನ್ ಬಳಿಕ ಜಾಮೀನಿನ ಮೇರೆಗೆ ಹೊರಬಂದಿದ್ದ. ನಂತರ ಪ್ರತಿ ಬಾರಿ ಠಾಣೆಗೆ ಆಗಮಿಸಿ ಸಹಿ ಮಾಡಲು ಸಂಜುರಿಂದ ಪೊಲೀಸರು 500 ರಿಂದ 10 ಸಾವಿರ ರೂ. ವರೆಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು.

ಜಯರಾಜ್ ಸದ್ಯ ಸಿಐಡಿಯಲ್ಲಿ ಕೆಲಸ ಮಾಡುತ್ತಿದ್ದು, ಶಿವಕುಮಾರ್ ಕೆ.ಆರ್.ಪುರ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಲಂಚ ಪಡೆದ ಕುರಿತು ದೂರು ದಾಖಲಿಸಿ ತನಿಖೆ ನಡೆಸಿದ ಎಸಿಬಿ ಅಧಿಕಾರಿಗಳು, ಇನ್ಸ್​ಪೆಕ್ಟರ್ ವಿರುದ್ಧ ಕ್ರಮಕ್ಕೆ ಅನುಮತಿ ನೀಡಬೇಕೆಂದು 17ಎ ಅಡಿ ಸಕ್ಷಮ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ. ಅಲ್ಲಿಂದ ಅನುಮತಿ ಸಿಕ್ಕ ಬಳಿಕ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.


Spread the love

About Laxminews 24x7

Check Also

ಸಕ್ರೆಬೈಲು ಆನೆ ಬಾಲಣ್ಣನ ಕಿವಿ ಕತ್ತರಿಸಿದ ವೈದ್ಯರ ತಂಡ: ಚಿಕಿತ್ಸೆ ಕುರಿತು ಡಿಎಫ್ಒ ಹೇಳಿದ್ದಿಷ್ಟು

Spread the love ಶಿವಮೊಗ್ಗ: ಸಕ್ರೆಬೈಲು ಆನೆ‌ ಬಿಡಾರದ ಬಾಲಣ್ಣ ಎಂಬ ಹೆಸರಿನ ಸಾಕಾನೆಯ ಬಲ ಕಿವಿಯನ್ನು ಬೆಂಗಳೂರಿನ ವೈದ್ಯರ ತಂಡವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ