ಕಬೀರ್ ಖಾನ್ ನಿರ್ದೇಶನದ ’83’ ಸಿನಿಮಾ ಡಿಸೆಂಬರ್ 24 ರಂದು ತೆರೆಗೆ ಅಪ್ಪಳಿಸಲು ಸಖಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಎಲ್ಲರಿಗೂ ತಿಳಿದಿರುವಂತೆ ’83’ ಸಿನಿಮಾ 1983 ರಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ವಿರುದ್ಧ ವರ್ಲ್ಡ್ ಕಪ್ ಗೆದ್ದ ಕಥೆ. ’83’ ಸಿನಿಮಾದಲ್ಲಿ ನಟ ರಣವೀರ್ ಸಿಂಗ್ ಅವರು ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ಒಂದು ಪಾತ್ರ ಮಾಡಿದ್ದು 83 ಸಿನಿಮಾಗೆ ಹಣ ಕೂಡ ಹಾಕಿದ್ದಾರೆ. ಈಗ ಬಂದಿರುವ ಮಾಹಿತಿ ಪ್ರಕಾರ 83 ಸಿನಿಮಾಗಾಗಿ ರಣವೀರ್ ಸಿಂಗ್ ಬರೋಬ್ಬರಿ 20 ಕೋಟಿ ಸಂಭಾವನೆಯನ್ನು ಪಡೆದಿದ್ದಾರಂತೆ. ಬಾಲಿವುಡ್ನಲ್ಲಿ ರಣವೀರ್ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ರೆಕಾರ್ಡ್ ಸೃಷ್ಟಿ ಮಾಡಿವೆ. ಈ ಕಾರಣದಿಂದ, ರಣವೀರ್ ಸಿಂಗ್ ತಮ್ಮ ಸಂಭಾವನೆಯನ್ನು ಹೆಚ್ಚು ಮಾಡಿಕೊಂಡಿದ್ದಾರೆ.
’83’ ಚಿತ್ರಕ್ಕಾಗಿ ಅವರು 20 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಬಾಲಿವುಡ್ ಮೂಲಗಳು ಹೇಳಿವೆ. ಅಷ್ಟೇ ಅಲ್ಲದೆ ರಣವೀರ್ ಸಿಂಗ್, 83 ಸಿನಿಮಾ ಮಾಡಿದ ಕಲೆಕ್ಷನ್‌ನಲ್ಲಿಯೂ ಕಮಿಷನ್ ಕೊಡಿ ಎಂದು ಕೇಳಿದ್ದಾರಂತೆ. ಆದರೆ ಎಷ್ಟು ಕಮಿಷನ್ ಕೇಳಿದ್ದಾರೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ 83 ಸಿನಿಮಾ ತಂಡ ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದು, ಇತ್ತೀಚೆಗೆ ನಟ ರಣವೀರ್ ಸಿಂಗ್, ಕಬೀರ್ ಖಾನ್ ಅವರು ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಕರ್ನಾಟಕದಲ್ಲಿ ಕಿಚ್ಚ ಸುದೀಪ್ ಅವರು ’83’ ಸಿನಿಮಾದ ವಿತರಣೆ ಹಕ್ಕು ಪಡೆದಿದ್ದಾರೆ.