Breaking News

ಚಾಮುಂಡಿ, ವರುಣಾ ಬಿಟ್ಟು ಬಾದಾಮಿಗೆ ಯಾಕೆ ಬಂದ್ರಿ?, ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಚಿಮ್ಮನಕಟ್ಟಿ ಬಹಿರಂಗ ವಿರೋಧ

Spread the love

ಬಾಗಲಕೋಟೆ : ಚಾಮುಂಡಿ, ವರುಣಾ ಕ್ಷೇತ್ರ ಬಿಟ್ಟು ಬಾದಾಮಿಗೆ ಬಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಶಾಸಕ ಬಿ ಬಿ ಚಿಮ್ಮನಕಟ್ಟಿ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿದ್ದಾರೆ.ವಿಧಾನ ಪರಿಷತ್ ಚುನಾವಣೆ ಪ್ರಚಾರದ ಅಂಗವಾಗಿ ಬಾದಾಮಿ ಪಟ್ಟಣದ ಅಕ್ಕ ಮಹಾದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರ ಎದುರೇ ಚಿಮ್ಮನಕಟ್ಟಿ ಟೀಕಾಪ್ರಹಾರ ನಡೆಸಿದ್ದಾರೆ.

ಚಾಮುಂಡಿ, ವರುಣಾ ಬಿಟ್ಟು ಬಾದಾಮಿಗೆ ಯಾಕೆ ಬಂದ್ರಿ?, ನೀವು ಇಲ್ಲಿ ಬಂದ ಮೇಲೆ ‘ಹುಲಿ’ಯನಾಗಿದ್ದ ನನ್ನನ್ನು ‘ಇಲಿ’ ಮಾಡಿದಿರಿ ಎಂದು ಸಿದ್ದರಾಮಯ್ಯ ಎದುರೇ ಟೀಕಿಸಿದ್ದಾರೆ.

ಈ ವೇಳೆ ಉಭಯ ನಾಯಕರ ಬೆಂಬಲಿಗರಲ್ಲಿ ಗೊಂದಲ ಉಂಟಾಯಿತು. ಚಿಮ್ಮನಕಟ್ಟಿ ಅವರ ಭಾಷಣ ನಿಲ್ಲಿಸಲು ಪ್ರಯತ್ನಿಸಿದರೂ ಬಿಡದ ಮಾಜಿ ಸಚಿವರು ಮುಂದುವರಿದು ಮಾತನಾಡಿ, ನಿಮಗೆ ವರುಣಾ, ಚಾಮುಂಡಿ ಎರಡು ಕ್ಷೇತ್ರಗಳಿದ್ದರೂ ಇಲ್ಲಿಗ್ಯಾಕೆ ಬಂದ್ರಿ. ನಿಮಗಾಗಿ ನಾನು ಕ್ಷೇತ್ರ ಮಾಡಿದ್ದೇನೆ. ಅವರವರ ಕ್ಷೇತ್ರದಲ್ಲಿ ಅವರು ಗೆದ್ದರೆ ‘ಯೋಗ್ಯತೆ’ ಇರುತ್ತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾವುಕರಾದ ಮಾಜಿ ಸಚಿವ ಬಿ ಬಿ ಚಿಮ್ಮನಕಟ್ಟಿ

ಇದಕ್ಕೂ ಮುನ್ನ ಮಾಜಿ ಸಚಿವ ಬಿ ಬಿ ಚಿಮ್ಮನಕಟ್ಟಿ ಭಾಷಣ ಆರಂಭಿಸುತ್ತಲೇ, ಅವರ ಬೆಂಬಲಿಗರು ಹೌದು ಹುಲಿಯಾ.. ಎಂದು ಜೈಕಾರ ಕೂಗಿದರು. ಈ ವೇಳೆ ಭಾವುಕರಾದ ಚಿಮ್ಮನಕಟ್ಟಿ ನಾನು ಹುಲಿಯಾನೆ. ಆದರೆ, ಈಗ ಇಲಿ ಆಗಿದೀನಿ. ನೀವು ಮನಸ್ಸು ಮಾಡಿದ್ರೆ ನಾನು ಮತ್ತೆ ಹುಲಿ ಆಗ್ತೀನಿ, ಮಂತ್ರಿ, ಮುಖ್ಯಮಂತ್ರಿ ಕೂಡ ಆಗ್ತೀನಿ ಎಂದು ಹೇಳಿದರು.

ಚಿಮ್ಮನಕಟ್ಟಿ ಮಾತು ಅರ್ಥವಾಗದೇ ಗೊಂದಲ : ಮಾಜಿ ಶಾಸಕ ಚಿಮ್ಮನಕಟ್ಟಿ ಅವರ ಭಾಷಣದ ವೇಳೆ ತೊದಲುತ್ತಿದ್ದ ಕಾರಣ ಅವರು ಏನು ಮಾತನಾಡುತ್ತಿದ್ದಾರೆ ಎಂಬುದೇ ಅಲ್ಲಿದ್ದವರಿಗೆ ಅರ್ಥವಾಗುತ್ತಿರಲಿಲ್ಲ. ಅವರ ವಿರುದ್ಧವೇ ಹೇಳಿಕೆ ನೀಡುತ್ತಿದ್ದರೂ ಸಿದ್ದರಾಮಯ್ಯ ಏನೂ ತಿಳಿಯದೇ ಬೇರೆಯವರನ್ನು ಕೇಳಿ ಅರ್ಥ ಮಾಡಿಕೊಳ್ಳಬೇಕಾಯಿತು.


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ