Breaking News

RTE ಶುಲ್ಕ ಮರುಪಾವತಿ’ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನ

Spread the love

ಬೆಂಗಳೂರು: 2021-22ನೇ ಸಾಲಿನ ಆರ್ ಟಿ ಇ ಶುಲ್ಕ ( RTE Seat School Fee ) ಮರುಪಾವತಿಗೆ ಬೇಡಿಕೆ ಸಲ್ಲಿಸಲು ತಂತ್ರಾಂಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ( School Education Department ) ಬಿಡುಗಡೆ ಮಾಡಿದೆ. ಈ ತಂತ್ರಾಂಶದಡಿ ಶಾಲಾ ಮುಖ್ಯಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪ ನಿರ್ದೇಶಕರು, ಕ್ರಮ ಕೈಗೊಳ್ಳುವಂತೆ ತಿಳಿಸಿದೆ.

 

ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಶಿಕ್ಷಣ ಹಕ್ಕು ಕಾಯಿದೆ 2009ರ ಅಡಿ ಅನುದಾನರಹಿತ ಶಾಲೆಗಳಲ್ಲಿ ದಾಖಲಾದ ಮಕ್ಕಳ 2021-22ನೇ ಸಾಲಿನ ಶುಲ್ಕ ಮರುಪಾವತಿಗೆ ಆನ್ ಲೈನ್ ತಂತ್ರಾಂಶದ ಮೂಲಕ ಬೇಡಿಕೆ ಸಲ್ಲಿಸಲು ತಂತ್ರಾಂಶವನ್ನು ದಿನಾಂಕ 17-11-2021ರಿಂದ 17-01-2022ರವರೆಗೆ ಬಿಡುಗಡೆ ಮಾಡಲಾಗಿದೆ.

2021-22ನೇ ಸಾಲಿನ ಆರ್ ಟಿ ಇ ಮಕ್ಕಳ ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ರಾಜ್ಯದ ಖಾಸಗಿ ಅನುದಾನರಹಿತ ಶಾಲಾ ಮುಖ್ಯಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪ ನಿರ್ದೇಶಕರು ಇವರುಗಳು ಈ ಕೆಳಕಾಣಿಸಿದಂತೆ ಸಕಾಲಿಕ ಕ್ರಮ ತೆಗೆದುಕೊಳ್ಳಲು ಹಾಗೂ ವೆಬ್ ಸೈಟ್ ನಲ್ಲಿ ನೀಡಿರುವ ಹಂತವಾರು ಮಾರ್ಗಸೂಚಿ ಮತ್ತು ಪ್ರಾತ್ಯಕ್ಷಿಕೆಯನ್ನು ಅನುಸರಿಸಲು ಸೂಚಿಸಿದ್ದಾರೆ.

  

  

    


Spread the love

About Laxminews 24x7

Check Also

ಶೀಘ್ರ ಕನಕ ಭವನ ನಿರ್ಮಾಣ: ಪ್ರಕಾಶ ಹುಕ್ಕೇರಿ

Spread the love ಚಿಕ್ಕೋಡಿ: ಹಾಲುಮತ ಸಮಾಜದವರಿಗೆ ಅನುಕೂಲದ ದೃಷ್ಟಿಯಿಂದ ಚಿಕ್ಕೋಡಿ ಪಟ್ಟಣದಲ್ಲಿ ಹೈಟೆಕ್ ಕನಕ ಭವನ ನಿರ್ಮಾಣ ಮಾಡಲು ರಾಜ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ