Breaking News
Home / Uncategorized / ಶಿವಮೊಗ್ಗ ಶಂಕರ ವಲಯ ವ್ಯಾಪ್ತಿಯಲ್ಲಿ ಗಂಧದ ಮರಗಳ ಕಳ್ಳತನ ಜೋರಾಗಿ ನಡೆಯುತ್ತಿದೆ.

ಶಿವಮೊಗ್ಗ ಶಂಕರ ವಲಯ ವ್ಯಾಪ್ತಿಯಲ್ಲಿ ಗಂಧದ ಮರಗಳ ಕಳ್ಳತನ ಜೋರಾಗಿ ನಡೆಯುತ್ತಿದೆ.

Spread the love

ಶಿವಮೊಗ್ಗ ತಾಲೂಕಿನ ಬಿಕೋನಹಳ್ಳಿ ಬಳಿ ಅಧಿಕಾರಿಗಳು ಹೇಮಣ್ಣನ ಬೈಕ್ ಪರಿಶೀಲನೆ ಮಾಡಿದ್ದು, ಬೈಕ್ ಮತ್ತು ಏಳು ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧ ಮರದ ತುಂಡುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಎತ್ತ ನೋಡಿದರೂ ಬೆಲೆಬಾಳುವ ಮರಗಳು ಕಣ್ಣಿಗೆ ಬೀಳುತ್ತವೆ. ಇಂತಹ ಅರಣ್ಯದಲ್ಲಿ ಮರಗಳ ಚೋರರ ಹಾವಳಿ ಬಲು ಜೋರಾಗಿದೆ. ಅದರಲ್ಲೂ ಬೆಲೆಬಾಳುವ ಶ್ರೀಗಂಧದ ಮರ ಹಂತ ಹಂತವಾಗಿ ಅರಣ್ಯದಿಂದ ಕಣ್ಮರೆಯಾಗುತ್ತಿವೆ. ಹೀಗಾಗಿ ಇದಕ್ಕೆ ಅಂತ್ಯ ಹಾಡಲು ಮುಂದಾದ ಅರಣ್ಯ ಇಲಾಖೆ ಅಧಿಕಾರಿಗಳ ಕೈಗೆ ಶ್ರೀಗಂಧದ ಮರ ಕಳ್ಳತನ ಮಾಡುತ್ತಿದ್ದ ಆರೋಪಿ ಸಿಲುಕಿದ್ದಾನೆ.

 

ಶಿವಮೊಗ್ಗ ಶಂಕರ ವಲಯ ವ್ಯಾಪ್ತಿಯಲ್ಲಿ ಗಂಧದ ಮರಗಳ ಕಳ್ಳತನ ಜೋರಾಗಿ ನಡೆಯುತ್ತಿದೆ. ಹೀಗಿರುವಾಗಲೇ ಶಿವಮೊಗ್ಗ ಹೊರವಲಯದಲ್ಲಿರುವ ಸೋಮಿನಕೊಪ್ಪದ ಹೇಮಣ್ಣ ಎನ್ನುವ ವ್ಯಕ್ತಿಯು ಅನೇಕ ವರ್ಷಗಳಿಂದ ಅಕ್ರಮವಾಗಿ ಶ್ರೀಗಂಧ ಮರದ ದಂಧೆಯಲ್ಲಿ ತೊಡಗಿರುವ ವಿಚಾರ ಬೆಳಕಿಗೆ ಬಂದಿದೆ. ಶ್ರೀಗಂಧ ಮರ ಕಡಿದು, ಬಳಿಕ ಅದನ್ನು ತುಂಡುಗಳನ್ನು ಮಾಡಿ ಈತ ಮಾರಾಟ ಮಾಡುತ್ತಿದ್ದ.

 

ಇಂದು ಕೂಡಾ ಬೈಕ್ ಮೇಲೆ ಸುಮಾರು 60 ಕೆಜಿ ಶ್ರೀಗಂಧ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದನು. ಶಂಕರ ವಲಯ ಆರ್​ಎಫ್​ಓ ಗಿರೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುವಾಗ ಈತ ಸಿಕ್ಕಿಬಿದ್ದಿದ್ದಾನೆ. ಶಿವಮೊಗ್ಗ ತಾಲೂಕಿನ ಬಿಕೋನಹಳ್ಳಿ ಬಳಿ ಅಧಿಕಾರಿಗಳು ಹೇಮಣ್ಣನ ಬೈಕ್ ಪರಿಶೀಲನೆ ಮಾಡಿದ್ದು, ಬೈಕ್ ಮತ್ತು ಏಳು ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧ ಮರದ ತುಂಡುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

 

ಈ ನಡುವೆ ಅರಣ್ಯ ಅಧಿಕಾರಿಗಳು ಮತ್ತು ಫಾರೆಸ್ಟರ್ ಹಾಗೂ ವಾಚರ್​ಗಳು ಕಠಿಣ ಕ್ರಮ ತೆಗೆದುಕೊಳ್ಳಲು ವಿಫಲವಾಗಿದ್ದಾರೆ. ಹೀಗಾಗಿ ಮಲೆನಾಡಿನಲ್ಲಿ ಅರಣ್ಯ ಸಂಪತ್ತು ಲೂಟಿಯಾಗುತ್ತಿದೆ. ಬಲೆಬಾಳುವ ಸಾಗುವಾನಿ, ಬೀಟೆ, ಶ್ರೀಗಂಧ ಮರಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ. ಸದ್ಯ ಒಬ್ಬ ಆರೋಪಿಯನ್ನು ಅಧಿಕಾರಿಗಳು ಬಂಧಿಸಿದ್ದು, ಅರಣ್ಯ ಸಂಪತ್ತನ್ನು ಕಾಪಾಡಲು ಇನ್ನೂ ಹೆಚ್ಚಿನ ಕ್ರಮದ ಅಗತ್ಯತೆ ಇದೆ ಎನ್ನುವುದು ಇಲ್ಲಿನ ಸ್ಥಳೀಯರ ಅಭಿಪ್ರಾಯ.

 

ವಿಚಾರಣೆ ವೇಳೆ ಆರೋಪಿ ಹೇಮಣ್ಣನ ಹಿಂದೆ ದೊಡ್ಡ ಕಳ್ಳತನದ ಗುಂಪು ಇರುವುದು ತಿಳಿದಿದೆ. ಬೆಲೆಬಾಳುವ ಶ್ರೀಗಂಧ ಮರಗಳ ತುಂಡಿನಿಂದ ಕರಕುಶಲ ವಸ್ತುಗಳನ್ನು ತಯಾರು ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ ಈತನ ಹಿಂದೆ ಇರುವ ಗಂಧದ ಮರದ ವ್ಯಾಪಾರಸ್ಥರು ಸೇರಿದಂತೆ, ಇತರೆ ಅಕ್ರಮ ದಂಧೆಕೋರರನ್ನು ಅರಣ್ಯಾಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

 

ಮೊದಲೇ ಅರಣ್ಯ ಭೂಮಿ ಒತ್ತುವರಿ ಮಾಡಿ ಮರಗಳನ್ನು ಕಡಿದು ಅರಣ್ಯ ಬರಿದಾಗುತ್ತಿದೆ. ಈ ನಡುವೆ ಬೆಲೆಬಾಳು ಶ್ರೀಗಂಧ ಮರಗಳ ಕಳ್ಳತನ ದಂಧೆ ಹೆಚ್ಚಾಗಿದೆ. ಅರಣ್ಯ ಸಂಪತ್ತು ಉಳಿಸಿ ಬೆಳೆಸಿ ರಕ್ಷಿಸಬೇಕಾದ ಅರಣ್ಯ ಅಧಿಕಾರಿಗಳು ಪದೇ ಪದೇ ಎಡವುತ್ತಿರುವುದು ಸದ್ಯ ದೊಡ್ಡ ತಲೆನೋವಾಗಿದೆ. ಹೀಗಾಗಿ ಅರಣ್ಯ ಅಧಿಕಾರಿಗಳು ಶ್ರೀಗಂಧ ದಂಧೆಕೋರರ ಮಟ್ಟಹಾಕಬೇಕಿದೆ ಎಂದು ರೈತ ಮುಖಂಡ ವಸಂತಕುಮಾರ್ ತಿಳಿಸಿದ್ದಾರೆ.


Spread the love

About Laxminews 24x7

Check Also

ರೇವಣ್ಣ ನಡವಳಿಕೆ ಸರಿಯಿಲ್ಲ, ಇಂಗ್ಲೆಂಡ್ ನಲ್ಲೂ ತಗಲಾಕೊಂಡಿದ್ದರು : ಮಾಜಿ ಸಂಸದ ಶಿವರಾಮೇಗೌಡ ಗಂಭೀರ ಆರೋಪ

Spread the loveಮಂಡ್ಯ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಸಕ ಎಚ್ ಡಿ ರೇವಣ್ಣ ಸಂಕಷ್ಟದಲ್ಲಿದ್ದು ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ