Breaking News

ಮಗಳ ಜೊತೆ ಅಕ್ರಮ ಸಂಬಂಧ ಶಂಕೆ – ಯುವಕನ ಕೊಲೆಗೆ ಯತ್ನ

Spread the love

ಚಿಕ್ಕಬಳ್ಳಾಪುರ: ತನ್ನ ಮಗಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಅಂತ ತಂದೆಯೋರ್ವ ಯುವಕನ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ನಗರ ಗೌರಿಬಿದನೂರು ತಾಲೂಕಿನ ಕಲ್ಲಿನಾಯಜನಹಳ್ಳಿ ಬಳಿ ನಡೆದಿದೆ.

ಬಸವಾಪುರ ಗ್ರಾಮದ ಫೀರೋಜ್ ಖಾನ್(26) ಹಲ್ಲೆಗೊಳಗಾದವ. ಕಲ್ಲಿನಾಯಕನಹಳ್ಳಿಯ ಗಂಗಾಧರ್ ಎಂಬಾತ ಹಲ್ಲೆ ಮಾಡಿದವ. ಅಂದಹಾಗೆ ತನ್ನ ಮಗಳ ಜೊತೆ ಫಿರೋಜ್ ಖಾನ್ ಅಕ್ರಮ ಸಂಬಂಧ ಇಟ್ಟುಕೊಂಟಿದ್ದಾನೆ ಅಂತ ಅರಿತು ಗಂಗಾಧರ ದೊಡ್ಡಬಳ್ಳಾಪುರಕ್ಕೆ ಹೋಗಬೇಕು ಬಾ ಅಂತ ಫಿರೋಜ್ ಖಾನ್ ನನ್ನ ಕರೆಸಿಕೊಂಡಿದ್ದಾನೆ. ಈ ವೇಳೆ ಫಿರೋಜ್ ಕೊಲೆ ಮಾಡಲು ಯತ್ನಿಸಿದ್ದಾನೆ.

ಬಳಿಕ ಘಟನಾ ಸ್ಥಳದಿಂದ ಗಂಗಾಧರ್ ಪರಾರಿಯಾಗಿದ್ದಾನೆ. ಆದರೆ ಫಿರೋಜ್ ಖಾನ್ ಇಡೀ ರಾತ್ರಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ. ಬೆಳಗ್ಗೆ ಸ್ಥಳೀಯರು ಫಿರೋಜ್ ಖಾನ್ ನೋಡಿ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ರು.

ಸದ್ಯ ಗಾಯಾಳು ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಪಿ ಗಂಗಾಧರ್ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದು, ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ