Breaking News

ಕಳ್ಳರು ರಾತ್ರೋರಾತ್ರಿ ಎಟಿಎಂ ಮಷಿನ್​ಅನ್ನೇ ಕದ್ದು, ಸಿಸಿಟಿವಿಯನ್ನು ಧ್ವಂಸಗೊಳಿಸಿ ಪರಾರಿ

Spread the love

ಬೀದರ್: ಕಳ್ಳರು ರಾತ್ರೋರಾತ್ರಿ ಎಟಿಎಂ ಮಷಿನ್​ಅನ್ನೇ ಕದ್ದು, ಸಿಸಿಟಿವಿಯನ್ನು ಧ್ವಂಸಗೊಳಿಸಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಔರಾದ್ ಪಟ್ಟಣದ ಉಪ್ಪೇ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಪೆಟ್ರೋಲ್​​ ಬಂಕ್​ ಎದುರಿನ ಇಂಡಿ ಕ್ಯಾಶ್​ ಎಟಿಎಂ ಮಷಿನ್​ ಕಳೆದ ರಾತ್ರಿ ಕಳ್ಳತನವಾಗಿದೆ. ಕಳ್ಳರು ಯಂತ್ರವನ್ನೇ ಕದ್ದೊಯ್ದಿದ್ದಾರೆ.ಕಳ್ಳರು ಇದಕ್ಕೂ ಮೊದಲು ಸಿಸಿಟಿವಿಗಳನ್ನು ಧ್ವಂಸಗೊಳಿಸಿದ್ದಾರೆ.

ದೃಶ್ಯಗಳನ್ನು ನೋಡಿದ್ರೆ ಹಗ್ಗದ ಒಂದು ಬದಿ ವಾಹನಕ್ಕೆ ಕಟ್ಟಿ ಮತ್ತೊಂದು ಬದಿ ಎಟಿಎಂ ಮಷಿನ್​ಗೆ ಕಟ್ಟಿ ಕದ್ದೊಯ್ದಿರುವ ಶಂಕೆ ಮೂಡುತ್ತಿದೆ.ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಔರಾದ್ ಪೊಲೀಸರು ಭೇಟಿ ನೀಡಿದ್ದು, ಪರಿಶಿಲನೆ ನಡೆಸಿದ್ದಾರೆ. ಇನ್ನು ಸ್ಥಳಕ್ಕೆ ಇಂಡಿ ಕ್ಯಾಶ್​ ಮ್ಯಾನೇಜ್ಮೆಂಟ್​ ಬಂದು ಎಟಿಎಂ ಮಷಿನ್​ನಲ್ಲಿ ಎಷ್ಟು ಹಣವಿತ್ತು ಎಂಬುದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಿದೆ.


Spread the love

About Laxminews 24x7

Check Also

ತುಮಕೂರು: ಮುಂಬೈ ಮಾದರಿ ಗಣಪತಿ ವಿಗ್ರಹಗಳಿಗೆ ಹೆಚ್ಚು ಬೇಡಿಕೆ

Spread the loveತುಮಕೂರು: 2025ರ ಚೌತಿ ಬಂದೇ ಬಿಡ್ತು. ಭಕ್ತರು ವಿಭಿನ್ನ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಮುಂಬೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ