ಮೈಸೂರು: ಪ್ರೇಯಸಿಯ ನಡತೆ ಪ್ರಶ್ನಿಸಿ ಪ್ರಿಯಕರನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಹರ್ಷ ರಸ್ತೆಯಲ್ಲಿ ನಡೆದಿದೆ. ನಂಜನಗೂಡಿನ ಶ್ರೀರಾಂಪುರದ 26 ವರ್ಷದ ಯುವತಿ ಪ್ರಿಯಕರನಿಂದ ಹಲ್ಲೆಗೊಳಗಾದ ಯುವತಿ. ಹೆಚ್.ಡಿ. ಕೋಟೆ ತಾಲೂಕಿನ ಅಂತರಸಂತೆಯ ನಿವಾಸಿ ರಮೇಶ್ ಎಂಬಾತನಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ಮೈಸೂರಿನ ಖಾಸಗಿ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಹಾಗೂ ರಮೇಶ್ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆಕೆಗೆ ಬರುತ್ತಿದ್ದ ಮೆಸೇಜ್ಗಳನ್ನು ತನ್ನ ಮೊಬೈಲ್ಗೆ ಬರುವಂತೆ ರಮೇಶ್ ಮಾಡಿಕೊಂಡಿದ್ದ. ಕೆಲವು ಯುವಕರ ಜೊತೆ ಯುವತಿ ಚಾಟ್ ಮಾಡಿದ್ದರಿಂದ ಈಕೆಯ ವಿರುದ್ಧ ತಿರುಗಿ ಬಿದ್ದು, ನಡತೆ ಬಗ್ಗೆ ರಮೇಶ್ ಶಂಕೆ ವ್ಯಕ್ತಪಡಿಸಿದ್ದಾನೆ.
ಇದರಿಂದ ರೊಚ್ಚಿಗೆದ್ದ ಈತ, ಲವ್ ಬ್ರೇಕ್ಅಪ್ ಮಾತುಕತೆ ನಡೆಸುವುದಾಗಿ ಯುವತಿಯನ್ನು ಕರೆಸಿ ಚಾಕುವಿನಿಂದ ಇರಿದಿದ್ದಾನೆ. ಸಾರ್ವಜನಿಕರೇ ಆರೋಪಿ ರಮೇಶ್ನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿ, ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7