Breaking News

ಧೋನಿ ತಂದೆ-ತಾಯಿಗೆ ಕರೊನಾ ಸೋಂಕು! ಆಸ್ಪತ್ರೆಗೆ ದೌಡಾಯಿಸಿದ ದಂಪತಿ

Spread the love

ರಾಂಚಿ: ಭಾರತೀಯ ಕ್ರಿಕೆಟ್​ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಅವರ ತಂದೆ ತಾಯಿಗೆ ಕರೊನಾ ಸೋಂಕು ದೃಢವಾಗಿದೆ. ವರದಿ ಬಂದ ತಕ್ಷಣ ದಂಪತಿ ರಾಂಚಿಯ ಪ್ಲಸ್​ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆದಿರುವುದಾಗಿ ತಿಳಿಸಲಾಗಿದೆ.

ಧೋನಿಯವರ ತಂದೆ ಪಾನ್​ ಸಿಂಗ್​ ಹಾಗೂ ತಾಯಿ ದೇವಕಿ ದೇವಿ ಅವರ ಆರೋಗ್ಯ ಸ್ಥಿರವಾಗಿದೆ. ಕರೊನಾ ದೃಢವಾಗಿದೆ ಹಾಗೂ ಅವರಲ್ಲಿ ಯಾವುದೇ ಗಂಭೀರ ಸಮಸ್ಯೆ ಕಾಣಿಸಿಕೊಂಡಿಲ್ಲ. ಆಕ್ಸಿಜನ್​ ಲೆವೆಲ್​ ಉತ್ತಮವಾಗಿದೆ ಮತ್ತು ಶ್ವಾಸಕೋಶಗಳು ಯಾವುದೇ ತೊಂದರೆಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ರಾಂಚಿಯ ಪ್ಲಸ್​ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಐಪಿಎಲ್​ ಟೂರ್ನಮೆಂಟ್​ ನಡೆಯುತ್ತಿದ್ದು, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕನಾಗಿ ಧೋನಿ ಕ್ರಿಕೆಟ್​ನಲ್ಲಿ ಬಿಜಿಯಾಗಿದ್ದಾರೆ.

ದೇಶದಲ್ಲಿ ಕರೊನಾ ಸೋಂಕಿನ ಎರಡನೇ ಅಲೆ ಆರಂಭವಾಗಿದ್ದು ಸೋಂಕು ಅತಿ ವೇಗದಲ್ಲಿ ಹರಡಲಾರಂಭಿಸಿದೆ. ಸೋಂಕು ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಕಲ ಪ್ರಯತ್ನಗಳನ್ನು ಮಾಡುತ್ತಿವೆ. ಹಲವು ರಾಜ್ಯಗಳಲ್ಲಿ ಆಸ್ಪತ್ರೆ ಬೆಡ್​ ಮತ್ತು ಆಕ್ಸಿಜನ್​ ಕೊರತೆ ಕಂಡುಬಂದಿದೆ. ಸಾರ್ವಜನಿಕರು ಸೋಂಕಿನ ಬಗ್ಗೆ ಎಚ್ಚರವಾಗಿರಬೇಕು, ಲಾಕ್​ಡೌನ್​ ಅನ್ನು ಕೊನೆಯ ಅಸ್ತ್ರವನ್ನಾಗಿ ಮಾಡಿಕೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರದಂದು ಹೇಳಿದ್ದಾರೆ.


Spread the love

About Laxminews 24x7

Check Also

ಗೋಕಾಕ ನಗರದ ಶೆಪರ್ಡ್ ಮಿಷನ್ ಆಂಗ್ಲ ಮಾದ್ಯಮ ಶಾಲೆಯ 16 ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ

Spread the loveಗೋಕಾಕ ನಗರದ ಶೆಪರ್ಡ್ ಮಿಷನ್ ಆಂಗ್ಲ ಮಾದ್ಯಮ ಶಾಲೆಯ 16 ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ