ಬೆಳಗಾವಿ: ಉಪಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.

ಹೌದು. ಯಡಿಯೂರಪ್ಪ ಅವರಿಗೆ ಜ್ವರ ಬಂದಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಖಾಸಗಿ ಹೋಟೆಲ್ ಗೆ ವೈದ್ಯಕೀಯ ತಪಾಸಣೆ ನಡೆಸಲು ವೈದ್ಯರ ತಂಡ ಆಗಮಿಸಿದೆ. ಕೆ.ಎಲ್‍ಇ ಆಸ್ಪತ್ರೆಯ ವೈದ್ಯರಾದ ಮಾಧವ ಪ್ರಭು, ಸಂತೋಷ ಪಾಟೀಲ್ ಆಗಮಿಸಿ ಬಿಎಸ್‍ವೈ ಅವರ ಆರೋಗ್ಯ ತಪಾಸಣೆ ನಡೆಸಿದ್ದಾರೆ.

ಇಸಿಜಿ, ಪಲ್ಸ್ ಆಕ್ಸಿ ಮೀಟರ್ ಸೇರಿದಂತೆ ವೈದ್ಯಕೀಯ ತಪಾಸಣೆ ನಡೆಸಲು ಉಪಕರಣವನ್ನು ಸಿಬ್ಬಂದಿ ತಂದಿದ್ದಾರೆ. ಇಂದು ಖಾಸಗಿ ಹೊಟೇಲ್ ಮುಂಭಾಗದಲ್ಲಿ ಥರ್ಮಲ್ ಸ್ಕ್ರೀನಿಂಗ್ ವೇಳೆ ಸಿಎಂ ಅವರಿಗೆ 99 ಡಿಗ್ರಿ ಜ್ವರ ಇರುವುದು ಬೆಳಕಿಗೆ ಬಂದಿದೆ.
Laxmi News 24×7