Breaking News

ಒಂದರಿಂದ 9ನೇ ತರಗತಿವರೆಗಿನ ಪರೀಕ್ಷೆ ನಡೆಸಲು ಶಿಕ್ಷಣ ಸಂಸ್ಥೆಗಳ ಒತ್ತಾಯ

Spread the love

ಬೆಂಗಳೂರು, ಏ.5- ಒಂದರಿಂದ 9ನೇ ತರಗತಿವರೆಗೆ ಪರೀಕ್ಷೆ ನಡೆಸಬೇಕೆಂಬ ಅಭಿಪ್ರಾಯವನ್ನು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘಟನೆಗಳ ಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ. ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ, ಒಂದರಿಂದ 5ನೇ ತರಗತಿವರೆಗೆ ಆನ್‍ಲೈನ್ ಪರೀಕ್ಷೆ, 6ರಿಂದ 9ನೇ ತರಗತಿವರೆಗೆ ಈಗಾಗಲೇ ಅರ್ಧಂಬರ್ಧ ಪರೀಕ್ಷೆಗಳು ನಡೆದಿದ್ದು, ಎರಡೂ ಪಾಳಿಯಲ್ಲಾದರೂ ಪರೀಕ್ಷೆ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ.

ಕನಿಷ್ಠ ಮೌಲ್ಯಮಾಪನವಾದರೂ ಆಗಬೇಕು. ಪರೀಕ್ಷೆ ಇಲ್ಲದೆ ತೇರ್ಗಡೆ ಮಾಡಿದರೆ ತರಗತಿಗೆ ಹಾಜರಾದವರು, ಹಾಜರಾಗದೆ ಇರುವವರು, ಪರೀಕ್ಷೆ ಬರೆಯುವವರು, ಬರೆಯದೇ ಇರುವವರಿಗೂ ಒಂದೇ ಮಾನದಂಡವಾಗುತ್ತದೆ. ಅಲ್ಲದೆ, ಮಕ್ಕಳಲ್ಲಿ ಖಿನ್ನತೆ ಮೂಡುತ್ತದೆ. ಪರೀಕ್ಷೆ ನಡೆಸುವಂತೆ ಕೋರಲಾಗಿದೆ. ಅಲ್ಲದೆ, ಕೋವಿಡ್ ಇದ್ದರೂ ಬೆಳಗ್ಗೆ, ಸಂಜೆ ಟ್ಯೂಷನ್ ನಡೆಸುತ್ತಿರುವ ಬಗ್ಗೆ ದೂರು ನೀಡಲಾಗಿದೆ ಎಂದರು.

ರೂಪ್ಸಾದ ಲೋಕೇಶ್ ತಾಳಿಕಟ್ಟೆ ಮಾತನಾಡಿ, ಪರೀಕ್ಷೆ ಬರೆದು ಮೌಲ್ಯಾಂಕನದ ಬಗ್ಗೆ ಚರ್ಚೆಯಾಗಿದೆ. ಎಲ್ಲಾ ದೃಷ್ಟಿಕೋನಗಳಿಂದಲೂ ಮಕ್ಕಳನ್ನು ಅಳೆಯಬೇಕು. ಈಗಾಗಲೇ ಆನ್‍ಲೈನ್ ಶಿಕ್ಷಣ ನೀಡಿದ್ದೇವೆ. ಕನಿಷ್ಠ ಒಂದು ಮೌಲ್ಯಾಂಕನವನ್ನಾದರೂ ಮಾಡಬೇಕು. ಕಳೆದ ವರ್ಷ ಪೂರ್ತಿ ತರಗತಿ, ಪರೀಕ್ಷೆಗಳು ಆಗಿದ್ದವು. ಆದರೆ, ಈ ಬಾರಿ ಒಂದು ಪರೀಕ್ಷೆಯಾದರೂ ಆಗಬೇಕು. ಹೀಗಾಗಿ ಪರೀಕ್ಷೆ ನಡೆಸಬೇಕು.

ಗ್ರಾಮೀಣ ಭಾಗದ ಶಾಲೆಗಳಲ್ಲಿ ಶೇ.70ರಷ್ಟು ಶುಲ್ಕ ಕಟ್ಟುವ ನಿರ್ಧಾರವಾಗಿತ್ತು. ಆದರೆ, ಇನ್ನೂ ಶುಲ್ಕ ಕಟ್ಟಿಲ್ಲ. ಈ ಬಗ್ಗೆ ದೂರು ಸಲ್ಲಿಸಲು ಅವಕಾಶ ನೀಡಲಾಗಿದೆ. ಇಲಾಖೆಯಲ್ಲಿ ಕೆಳಹಂತದಲ್ಲಿರುವ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪ ಮಾಡಲಾಗಿದ್ದು, ಆ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ಕರ್ನಾಟಕ ಖಾಸಗಿ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ಸಮಿತಿ ಸದಸ್ಯ ಯೋಗಾನಂದ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಪೋಷಕರು ಮತ್ತು ಮಕ್ಕಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಪರೀಕ್ಷೆ ಪದದ ಬದಲು ಮೌಲ್ಯಾಂಕನ ಪದ ಬಳಸಬೇಕು. ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಟ್ಟರೆ ಅಡ್ಮಿಷನ್ ಟಿಕೆಟ್ ಮತ್ತಿತರ ವಿಚಾರಗಳಲ್ಲಿ ಪೋಷಕರನ್ನು ಸುಲಿಗೆ ಮಾಡುವ ಸಾಧ್ಯತೆ ಇದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿರುವುದಾಗಿ ತಿಳಿಸಿದರು.

ಲೇಪಾಕ್ಷಿ ಮಾತನಾಡಿ, ಪರೀಕ್ಷೆ ನಡೆಸಲು ಸರ್ಕಾರ ಮಾರ್ಗಸೂಚಿಗಳನ್ನು ನೀಡಬೇಕು. ಸಾಂಪ್ರದಾಯಿಕವಾಗಿ ಪರೀಕ್ಷೆ ನಡೆಸಲು ಹಾಗೂ ಆರೋಗ್ಯ ಇಲಾಖೆ ನೀಡುವ ಮಾರ್ಗಸೂಚಿ ಪಾಲನೆ ಮಾಡಲು ಸಿದ್ಧರಿದ್ದೇವೆ ಎಂದು ಹೇಳಿದ್ದೇವೆ. ನಮ್ಮ ಬೇಡಿಕೆ ಬಗ್ಗೆ ಸಕಾರಾತ್ಮಕವಾಗಿ ಸರ್ಕಾರ ಸ್ಪಂದಿಸುತ್ತದೆ ಎಂದು ಅವರು ಹೇಳಿದರು.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ