Breaking News
Home / ರಾಜ್ಯ / 5 ಲಕ್ಷ ಬೆಲೆಯ ಅಕ್ರಮ ಗೋವಾ ಮದ್ಯ ತುಂಬಿದ ಲಾರಿ ಪಲ್ಟಿ- ಚಾಲಕ ಪರಾರಿ

5 ಲಕ್ಷ ಬೆಲೆಯ ಅಕ್ರಮ ಗೋವಾ ಮದ್ಯ ತುಂಬಿದ ಲಾರಿ ಪಲ್ಟಿ- ಚಾಲಕ ಪರಾರಿ

Spread the love

ಕಾರವಾರ: ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ಮಹಾರಾಷ್ಟ್ರ ಮೂಲದ ಲಾರಿ ಪಲ್ಟಿಯಾಗಿದ್ದು, ಚಾಲಕ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದ ಬಳಿ ಇಂದು ಸಂಜೆ ನಡೆದಿದೆ.

ಗೋವಾ ಮೂಲಕ ಕಾರವಾರ ಮಾರ್ಗವಾಗಿ ಹುಬ್ಬಳ್ಳಿ ಕಡೆ ಲಾರಿ ಚಲಿಸುತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದ್ದು, ಪರವಾನಿಗೆ ಇಲ್ಲದ ಗೋವಾ ಮದ್ಯ ರಸ್ತೆಯಲ್ಲೇ ಬಿದ್ದಿದೆ. ಈ ವೇಳೆ ಚಾಲಕ ಹೆದರಿ ಪರಾರಿಯಾಗಿದ್ದಾನೆ.

ಒಂದು ಲಾರಿ ಪೂರ್ತಿ ವಿವಿಧ ಬ್ರಾಂಡ್ ನ ಮದ್ಯವಿದ್ದು, ಐದು ಲಕ್ಷಕ್ಕೂ ಹೆಚ್ಚು ಮೌಲ್ಯದ ಗೋವಾ ಮದ್ಯವೆಂದು ಅಂದಾಜಿಸಲಾಗಿದೆ.ಸ್ಥಳಕ್ಕೆ ಅಂಕೋಲಾ ಠಾಣೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಬೇಕಿದೆ.

ತಪಾಸಣಾ ಕೇಂದ್ರ ದಾಟಿದ್ದು ಹೇಗೆ?
ಒಂದು ಲಾರಿ ಲೋಡ್ ಮದ್ಯ ಗೋವಾ ಭಾಗದಿಂದ ಕರ್ನಾಟಕ ದಾಟಿ ಬಂದಿದೆ. ಆದರೆ ಗೋವಾ-ಕರ್ನಾಟಕ ಗಡಿ ಭಾಗದ ಮಾಜಾಳಿಯಲ್ಲಿ ಪೊಲೀಸ್, ಅಬಕಾರಿ, ಅರಣ್ಯ, ಕಂದಾಯ ಇಲಾಖೆ ತಪಾಸಣಾ ಕೇಂದ್ರವಿದೆ. ಅಲ್ಲದೆ ಒಂದು ಗಡಿಯಿಂದ ಮತ್ತೊಂದು ಗಡಿಗೆ ಹೋಗಬೇಕಾದರೆ ಯಾವ ವಾಹನ ಲೋಡ್ ಆಗುತ್ತದೆಯೋ ಅದಕ್ಕೆ ಪರ್ಮಿಟ್ ಇರುತ್ತದೆ. ಇದನ್ನು ನೋಡಿ ತಪಾಸಣೆ ನಡೆಸಿ ನಂತರ ವಾಹನಗಳನ್ನು ಬಿಡಲಾಗುತ್ತದೆ.

ಈ ವಾಹನ ಮಹಾರಾಷ್ಟ್ರ ನೊಂದಣಿ ಹೊಂದಿದೆ. ಹೀಗಿರುವಾಗ ಗಡಿಯಲ್ಲಿ ಕರೊನಾ ನೆಗೆಟಿವ್ ರಿಪೋರ್ಟ್ ನೋಡಬೇಕು. ಜೊತೆಗೆ ಕಠಿಣ ನಿಯಮ ಇರುವುದರಿಂದ ಹೆಚ್ಚಿನ ತಪಾಸಣೆಗಾಗಿ ಡಿ.ಆರ್ ತುಕಡಿಯನ್ನು ಹಾಕಲಾಗಿದೆ. ಹಿಗಿದ್ದರೂ ಗೋವಾದಿಂದ ಒಂದು ಲೋಡ್ ಮದ್ಯ ಕರ್ನಾಟಕದ ಗಡಿಯೊಳಗೆ ಬರುವ ಜೊತೆಗೆ ಹುಬ್ಬಳ್ಳಿ ಕಡೆ ಹೊರಟಿದೆ.

ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮದ್ಯ ಒಂದು ಗಡಿಯಿಂದ ಮತ್ತೊಂದು ಗಡಿಗೆ ಯಾವುದೇ ಪರವಾನಿಗೆ ಇಲ್ಲದೇ ಬಂದಿದೆ. ಇದು ಪೊಲೀಸ್, ಅಬಕಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಯಾಕೆ ಬರಲಿಲ್ಲ ಎಂಬುದೇ ಪ್ರಶ್ನೆಯಾಗಿದೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ