Breaking News

ನಿವೃತ್ತಿಗೊಂಡು ತವರಿಗೆ ಮರಳಿದ ಯೋಧನಿಗೆ ಗ್ರಾಮಸ್ಥರಿಂದ ಸಾಂಪ್ರದಾಯಿಕ ಸ್ವಾಗತ

Spread the love

ವಿಜಯಪುರ : ದೇಶ ರಕ್ಷಣೆಯ ಸುದೀರ್ಘ ಕರ್ತವ್ಯ ಮುಗಿಸಿ ನಿವೃತ್ತಿಗೊಂಡು ತವರಿಗೆ ಮರಳಿದ ಭಾರತೀಯ ಯೋಧನಿಗೆ ನಾಲತವಾಡ ಗ್ರಾಮಸ್ಥರು ಸಾಂಪ್ರದಾಯಿಕ ಸ್ವಾಗತದ ಮೂಲಕ ಅದ್ದೂರಿ ಸ್ವಾಗತ ಕೋರಿದ್ದಾರೆ.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತವರಿಗೆ‌ ಮರಳಿದ ವೀರಯೋಧ ರಾಘವೇಂದ್ರ ಅವರನ್ನು ಪಟ್ಟಣದ ಪ್ರವೇಶ ದ್ವಾರದಲ್ಲೇ ತಡೆದು, ಹೂ ಮಳೆಗೈದು, ಮಹಿಳೆಯರು ಸಾಂಪ್ರದಾಯಿಕವಾಗಿ ಅದ್ಧೂರಿಯಾಗಿ ಸ್ವಾಗತಿಸಿದರು.

ದೇಶಮುಖ ಕಾಲೋನಿಯ ವೀರಯೋಧ ರಾಘವೇಂದ್ರ ಸಂಗಪ್ಪ ಕ್ಷತ್ರಿ ಇವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮಂಗಳವಾರ ತವರಿಗೆ‌ ಮರಳಿದಾಗ ಅದ್ಧೂರಿ ಮೆರವಣಿಗೆ ಮೂಲಕ‌ ಸ್ವಾಗತಿಸಿದರು.

ನಿವೃತ್ತ ಯೋಧ ರಾಘವೇಂದ್ರ ಅವರನ್ನು ತೆರೆದ ವಾಹನದಲ್ಲಿ ನಾಲತವಾಡ ಪಟ್ಟಣದ ವೀರೇಶ್ವರ ವೃತದಿಂದ ಬಸವೇಶ್ವರ ವೃತ್ತ, ಗಣಪತಿ ವೃತ್ತದ ವರೆಗೆ ಅದ್ಧೂರಿ ಮೆರವಣಿಗೆ ಮೂಲಕ ಸ್ವಾಗತಿಸಿದರು.

ಇದಕ್ಕೂ ಮೊದಲು ವೀರಯೋಧ ರಾಘವೇಂದ್ರ ಅವರು ಮಾಜಿ ಸಚಿವ ದಿ.ಜಗದೇವರಾವ್ ದೇಶಮುಖ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಂತರ ಮೆರವಣಿಗೆ ತೆರೆದ ವಾಹನ‌ ಏರಿದ್ದ ಗಮನ ಸೆಳೆಯಿತು.


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ