Breaking News

ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರ..!

Spread the love

ಹಾಸನ: ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರವಾಗಿರುವ ಆರೋಪ ಜಿಲ್ಲೆಯ ಬೇಲೂರು ತಾಲೂಕಿನ ಸಿ.ಹೊಸಳ್ಳಿಯಲ್ಲಿ ಕೇಳಿಬಂದಿದೆ. ಈ ನಡುವೆ, ಪ್ರಕರಣದಿಂದ ಮನನೊಂದು ವಿಷ ಸೇವಿಸಿದ್ದ 30 ವರ್ಷದ ಮಹಿಳೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಇಂದು ಅಸುನೀಗಿದ್ದಾರೆ. Rape

ಏನಿದು ಪ್ರಕರಣ?
6 ವರ್ಷಗಳ ಹಿಂದೆ ಪುಟ್ಟರಾಜು ಎಂಬಾತನ ಜೊತೆ ಮಹಿಳೆ ವಿವಾಹವಾಗಿದ್ದರು. ಕಳೆದ ಡಿಸೆಂಬರ್ 21 ರಂದು ಮಹಿಳೆಯ ಮಾವ ವೆಂಕಟೇಶ್ ಜೋಗಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದನಂತೆ. ಇದರಿಂದ, ಮನನೊಂದ ಮಹಿಳೆ ಜ.15ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜನವರಿ 17 ರಂದು ತನ್ನ ಮೇಲೆ ನಡೆದಿದ್ದ ದೌರ್ಜನ್ಯದ ಬಗ್ಗೆ ಮಹಿಳೆ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದರಂತೆ. ಹಾಗಾಗಿ, ಪೊಲೀಸರು ಆರೋಪಿ ವೆಂಕಟೇಶ್ ಜೋಗಿಯನ್ನು ಬಂಧಿಸಿದ್ದರು.

ಈ ನಡುವೆ, ಕಳೆದ 20 ದಿನಗಳಿಂದ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಇಂದು ಕೊನೆಯುಸಿರೆಳೆದಿದ್ದಾರೆ. ಹಾಗಾಗಿ, ಪತಿಯ ಮನೆ ಮುಂದೆಯೇ ಅಂತ್ಯಸಂಸ್ಕಾರ ನೆರವೇರಿಸಬೇಕೆಂದು ಮೃತ ಮಹಿಳೆಯ ಪೋಷಕರ ಪಟ್ಟುಹಿಡಿದರು. ಹೀಗಾಗಿ, ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆಯಿತು.


Spread the love

About Laxminews 24x7

Check Also

14 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ನಿಪ್ಪಾಣಿ ಯುವಕನಿಗೆ 30 ವರ್ಷ ಜೈಲು ಶಿಕ್ಷೆ

Spread the love 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ನಿಪ್ಪಾಣಿ ಯುವಕನಿಗೆ 30 ವರ್ಷ ಜೈಲು ಶಿಕ್ಷೆ ನಿಪ್ಪಾಣಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ