ಬೆಂಗಳೂರು: ರಾಜ್ಯ ಹೈಕೋರ್ಟ್, ಬೆಂಗಳೂರು ಟರ್ಫ್ ಕ್ಲಬ್, ಲೆಡೀಸ್ ಕ್ಲಬ್, ಮೈಸೂರು ರೇಸ್ ಕ್ಲಬ್ ಹಾಗೂ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಸಂಸ್ಥೆಗಳ ಅರ್ಜಿ ವಜಾಗೊಳಸಿದ್ದು, ನಗರದ ಟರ್ಫ್ ಕ್ಲಬ್ RTI ವ್ಯಾಪ್ತಿಗೆ ಬರುತ್ತದೆ ಎಂದು ಮಹತ್ವದ ತೀರ್ಪ ನೀಡಿದೆ.
ನ್ಯಾ.ಪಿ.ಬಿ.ಬಜಂತ್ರಿರವರಿದ್ದ ಏಕಸದಸ್ಯ ಪೀಠ, ‘ರಾಜ್ಯ ಸರ್ಕಾರ ಪರೋಕ್ಷವಾಗಿ ರಿಯಾಯಿತಿ ದರದಲ್ಲಿ ಇವುಗಳಿಗೆ ಭೂಮಿ ಗುತ್ತಿಗೆ ನೀಡಿದ್ದು, ಮಾರುಕಟ್ಟೆ ಮೌಲ್ಯಕ್ಕೆ ಹೋಲಿಸಿದ್ರೆ ಕೋಟ್ಯಾಂತರ ರೂಪಾಯಿ ಮೊತ್ತದ ರಿಯಾಯಿತಿ ನೀಡಿದೆ. ಹಾಗಾಗಿ, ರಾಜ್ಯ ಸರ್ಕಾರದ ಭೂಮಿ ಸಾರ್ವಜನಿಕರ ಭೂಮಿ ಇದ್ದಂತೆ. ಭೂಮಿ ಗುತ್ತಿಗೆ ಪಡೆದವ್ರು ಜನರಿಗೆ ಉತ್ತರದಾಯಿಯಾಗುತ್ತಾರೆ. ಹೀಗಾಗಿ, ಈ ಸಂಸ್ಥೆಗಳು ಸಾರ್ವಜನಿಕ ಪ್ರಾಧಿಕಾರಗಳು. ಈ ಸಂಸ್ಥೆಗಳಿಂದ RTI ಕಾಯ್ದೆಯಡಿ ಮಾಹಿತಿ ಪಡೆಯಬಹುದು’ ಎಂದಿದೆ.
 Laxmi News 24×7
Laxmi News 24×7
				 
		 
						
					