ಚಿರು ಸರ್ಜಾ ಇಲ್ಲದ ಮೊದಲ ಹುಟ್ಟುಹಬ್ಬಕ್ಕೆ ಇಡೀ ಅಭಿಮಾನಿ ಬಳಗ ಕೊರಗುತ್ತಿದೆ. ಆದರೂ ಎಲ್ಲೆಡೆ ಚಿರುಗಾಗಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಒಂದೆಡೆ ಚಿರು ಹುಟ್ಟುಹಬ್ಬವಾದ್ರೆ, ಇನ್ನೊಂದೆಡೆ ಇಂದು ಚಿರು ಮತ್ತೆ ಹುಟ್ಟಿ ಬರ್ತಾರೆ ಅನ್ನೋ ಖುಷಿ, ಸಂಭ್ರಮ. ಇದರ ಜೊತೆಗೆ ಚಿರು ‘ಶಿವಾರ್ಜುನ’ ಸಿನಿಮಾ ಮತ್ತೆ ತೆರೆ ಕಂಡಿರೋದು ಮತ್ತೊಂದು ಖುಷಿ. ಸದ್ಯ, ಪತಿಯನ್ನ ನೋಡಲು ಮೇಘನಾ ರಾಜ್ ಸರ್ಜಾ ಚಿರು ಸಮಾಧಿ ಕಡೆ ಹೊರಟಿದ್ದಾರೆ. ಚಿರು ಸಮಾಧಿಗೆ ಪೂಜೆ ಸಲ್ಲಿಸೋದಾಗಿ ಹೇಳಿ, ಚಿರು ನನ್ನ ಮಗುವಾಗಿ ಯಾವಾಗ ಬರೋ ಪ್ಲ್ಯಾನ್ ಮಾಡ್ತಾರೋ, ಆವಾಗ ಬರಲಿ ಅಂದಿದ್ದಾರೆ.
‘ಸದ್ಯಕ್ಕೆ ಪೂಜೆ ಸಲ್ಲಿಸೋದಕ್ಕೆ ಹೋಗ್ತಾ ಇದ್ದೀವಿ. ನನ್ನ ಮಗುವಾಗಿ ಚಿರು ಯಾವಾಗ ಬರ್ಬೇಕು ಅನ್ನೋದು ಚಿರು ಇಷ್ಟ. ಅವರು ಯಾವಾಗ ಬರ್ತಾರೆ ಅಂತ ಪ್ಲ್ಯಾನ್ ಮಾಡ್ತಾರೆ ಆವಾಗ. ಇವತ್ತು ಬಂದ್ರು ಬರಬಹುದು, ಗೊತ್ತಿಲ್ಲ. ನೋಡೋಣ. ಸೀಮಂತ (ಬೇಬಿ ಶವರ್) ಹೇಗೆ ಆಗ್ಬೇಕು ಅಂತ ಚಿರು ಕನಸ್ಸು ಕಂಡಿದ್ರೋ ಹಾಗೇ ನೆರವೇರಿದೆ. ಅದನ್ನ ಧ್ರುವ, ನನ್ನ ತಂದೆ-ತಾಯಿ ಹಾಗೂ ಇಡೀ ಫ್ಯಾಮಿಲಿ ನನಸು ಮಾಡಿರೋದು. ನನಗೆ ತುಂಬಾನೇ ಖುಷಿ ಆಯ್ತು. ಚಿರುಗಂತೂ ಸಿಕ್ಕಾಪಟ್ಟೆ ಖುಷಿಯಾಗಿರುತ್ತೆ, 100 ಪರ್ಸೆಂಟ್. ನನ್ನ ಸೀಮಂತ ದಿನ ನನಗೆ ತುಂಬಾನೇ ಸ್ಪೆಷಲ್. ಎಲ್ಲರೂ ಸೇರಿ ಅದನ್ನ ಮ್ಯಾಜಿಕಲ್, ಫೇರೀ ಟೇಲ್ ಥರ ಮಾಡಿದ್ರು’ ಅಂತಾ ಮೇಘನಾ ಹೇಳಿದ್ರು.