Breaking News

ಪೊಲೀಸರ ಆರೋಗ್ಯ ರಕ್ಷಣೆಗೆ ಮಾರ್ಗಸೂಚಿ ಕೈಪಿಡಿ

Spread the love

ಬೆಂಗಳೂರು: ಪೊಲೀಸರ ಆರೋಗ್ಯ ರಕ್ಷಣೆಗಾಗಿ ಮಾರ್ಗಸೂಚಿ ಕೈಪಿಡಿ ಬಿಡುಗಡೆ ಮಾಡಲಾಗಿದೆ.

ನಗರದ ಹಲವು ಪೊಲೀಸರು ಕೊರೊನಾ ಸೋಂಕಿತರಾಗಿದ್ದರು. ಹೀಗಾಗಿ, ಪೊಲೀಸರು ಆರೋಗ್ಯದ ಬಗ್ಗೆ ಕಾಳಜಿ ವಹಿಸಲೆಂದು ಈ ಕೈಪಿಡಿ ಸಿದ್ಧಪಡಿಸಲಾಗಿದೆ. ಇದರಲ್ಲಿರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್‌ ಸೂಚನೆ ನೀಡಿದ್ದಾರೆ.

‘ಠಾಣೆಯಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು, ಆಗಾಗ ಕೈ ತೊಳೆಯಬೇಕು, ಹೊರಗಡೆ ಕರ್ತವ್ಯನಿರತ ಸಿಬ್ಬಂದಿ ನೇರವಾಗಿ ಮನೆಗೆ ಹೋಗಬೇಕು, ಸಂಬಂಧಿಕರು-ಸ್ನೇಹಿತರನ್ನು ಭೇಟಿಯಾಗಲು ಹೋಗಬಾರದು. ವ್ಯಾಯಾಮ ಮಾಡಬೇಕು’ ಎಂಬ ಅಂಶಗಳು ಮಾರ್ಗಸೂಚಿಯಲ್ಲಿವೆ.

‘ಡಿಸಿಪಿ‌- ಎಸಿಪಿ ಕಚೇರಿ ಹಾಗೂ ಪ್ರತಿ ಠಾಣೆಯಲ್ಲೂ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸ್ ವ್ಯವಸ್ಥೆ ಇರಬೇಕು.

ಹೊಯ್ಸಳ ವಾಹನ ಸಿಬ್ಬಂದಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಗಸ್ತು ತಿರುಗಬೇಕು’ ಎಂದೂ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.


Spread the love

About Laxminews 24x7

Check Also

ಮಂಡ್ಯದಲ್ಲಿ ಮೂರು ದಿನಗಳವರೆಗೆ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಕ್ತಾಯ

Spread the loveಮಂಡ್ಯ : ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ