Breaking News
Home / Uncategorized / ಬಸವ ಭೀಮ ಸೇನೆಯಿಂದ ಹಿರಿಯ ಪತ್ರಕರ್ತ ಮುನ್ನಾ ಬಾಗವಾನ್ ರಿಗೆ ಸನ್ಮಾನ

ಬಸವ ಭೀಮ ಸೇನೆಯಿಂದ ಹಿರಿಯ ಪತ್ರಕರ್ತ ಮುನ್ನಾ ಬಾಗವಾನ್ ರಿಗೆ ಸನ್ಮಾನ

Spread the love

 

ಬೆಳಗಾವಿ: ಬಸವ ಪಂಚಮಿ ಹಿನ್ನೆಲೆಯಲ್ಲಿ ಬಸವ ಭೀಮ ಸೇನೆ ಸಂಸ್ಥಾಪಕ ಆರ್.ಎಸ್.ದರ್ಗೆಅವರು ಹಿರಿಯ ಪತ್ರಕರ್ತ ಮುನ್ನಾ ಬಾಗವಾನ್ ರಿಗೆ ಮಾನವ ಬಂಧುತ್ವ ವೇದಿಕೆ ಕೇಂದ್ರ ಕಚೇರಿಯಲ್ಲಿ ಗುರುವಾರ ಸನ್ಮಾನಿಸಿದರು.

ಬಸವ ಪಂಚಮಿಯ ಅಂಗವಾಗಿ ಬಸವ ಭೀಮ ಸೇನೆಯ ಜುಲೈ 27 ರವರೆಗೆ ಹಮ್ಮಿಕೊಂಡಿರುವ ನಮ್ಮ ನಡೆ ನಮ್ಮ ಸಮುದಾಯಗಳ ಕಡೆ ಎಂಬ ಅಭಿಯಾನದ ಅಂಗವಾಗಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಮುನ್ನಾ ಬಾಗವಾನ್ , ಕಳೆದ ನಾಲ್ವತ್ತು ವರ್ಷಗಳಿಂದ ಬಸವಣ್ಣನವರ ತತ್ವಾದರ್ಶಗಳನ್ನು ಆರ್.ಎಸ್.ದರ್ಗೆಯವರು ಪರಿಪಾಲಿಸುತ್ತಾ ಬರುತ್ತಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.

ಬಸವಣ್ಣನವರು ಎಲ್ಲ ಧರ್ಮಗಳನ್ನು ಒಗ್ಗೂಡಿಸಿಕೊಂಡು ಕಲ್ಯಾಣ ರಾಜ್ಯ ಸ್ಥಾಪಿಸುವ ಕನಸು ಹೊಂದಿದ್ದರು. ನಾನು ಸಹ ಜಾತಿಯನ್ನದೆ ಎಲ್ಲ ಧರ್ಮಗಳನ್ನು ಒಂದು ಎಂಬ ಭಾವನೆ ಹೊಂದಿದ್ದೆನೆ. ಹಲವು ಲಿಂಗಾಯತ ಹೋರಾಟಗಳಲ್ಲಿ ನಾನು ಸಹ ಭಾಗಿಯಾಗಿದ್ದೆನೆ ಎಂದು ತಿಳಿಸಿದರು.

12 ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಲಿಂಗಾಯತ ಎಂಬ ಭಯ ಮುಕ್ತ ಬಯಲು ಧರ್ಮ ಕಟ್ಟಿ ಕೊಟ್ಟಿರುವ ಬಸವಾದಿ ಶರಣರ ಗದ್ದುಗೆ ಸ್ಥಳಗಳು ಈ ನಾಡಿನ ಅಮೂಲ್ಯವಾದ ಸಂಕೇತಗಳು. ಈ ಸಂಕೇತ ಸ್ಥಳಗಳು ಮಹಾಮನೆಗಳಾಗಬೇಕು ಎಂದು ಬಸವ ಭೀಮ ಸೇನೆಯ ಸಂಸ್ಥಾಪಕ ಆರ್.ಎಸ್.ದರ್ಗೆ ಹೇಳಿದರು.

ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ರಾಮಕೃಷ್ಣ ಪಾನಬುಡೆ, ಉಷಾ ನಾಯಿಕ, ಮನಿಷಾ ನಾಯಿಕ, ಪ್ರವೀಣ, ಚಿದಾನಂದ ಬೆಟಸೂರ, ಸಮೀರ್ ಬಾಗವಾನ್ ಸೇರಿದಂತೆ ಇತರರು ಇದ್ದರು.


Spread the love

About Laxminews 24x7

Check Also

ಉಪ್ಪು ತಿಂದವರು ನೀರು ಕುಡಿಯಲೇಬೇಕು:H.D.K.

Spread the loveಬೆಂಗಳೂರು: ಹಾಸನ ಸಂಸದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ವೈರಲ್ ಪ್ರಕರಣ ರಾಜ್ಯ ರಾಜಕೀಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ