ಬೆಂಗಳೂರು: ಕೊರೊನಾ ಆತಂಕ ಮತ್ತು ತಡೆಗಾಗಿ ಸಾರ್ವಜನಿಕರು ಮಾಸ್ಕ್ ಧರಿಸುತ್ತಿದ್ದಾರೆ. ಆದ್ರೆ ಮಾಸ್ಕ್ ಧರಿಸೋದು ಹೇಗೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಾಸ್ಕ್ ಏಕೆ ಧರಿಸಬೇಕು?: ಕೋವಿಡ್-19 ವೈರಸ್ ವ್ಯಕ್ತಿಯಿಂದ ವ್ಯಕ್ತಿಯ ನಡುವೆ ಆಗುವ ಸಂಪರ್ಕದಿಂದ ಸುಲಭವಾಗಿ ಹರಡುತ್ತದೆ. ವೈರಸ್ ಗಳನ್ನು ಹೊತ್ತ ನೀರಿನ ಹನಿಗಳು ಬೇಗನೆ ಒಣಗಿ, ಬೀಜಕಣಗಳಾಗಿ ತೇಲಾಡಿ ನಂತರ ನೆಲ ಅಥವಾ ಇನ್ಯಾವುದೇ ಪದರುಗಳ ಮೇಲೆ ಚಿಮ್ಮುತ್ತವೆ. ಕೋವಿಡ್-19 ಸಂಭವಿಸಲು ಕಾರಣವಾದ ಸಾರ್ಸ್-ಸಿಓವಿ-2 ವೈರಸ್ ಅನ್ನು ಗಾಳಿ ಅಥವಾ ಅನಿಲದಲ್ಲಿ ಘನ ಅಥವಾ ದ್ರವರೂಪದ ಕಣಗಳಾಗಿ ಮೂರು ಗಂಟೆಗಳವರೆಗೂ ಇರುತ್ತದೆ. ಪ್ಲಾಸ್ಟಿಕ್ ಮತ್ತು ತುಕ್ಕು ಹಿಡಿಯದ ಸ್ಟೀಲ್ ಗಳ ಮೇಲ್ಮೈಮೇಲೆ ಮೂರು ದಿನಗಳವರೆಗೆ ಇರಲಿದೆ. ಸೋಂಕಿತ ವ್ಯಕ್ತಿಯಿಂದ ಗಾಳಿಯಲ್ಲಿ ಚಿಮ್ಮುವ ಹನಿಗಳು ಉಸಿರಾಟದ ಮೂಲಕ ಇನ್ನೊಬ್ಬ ವ್ಯಕ್ತಿಯೊಳಗೆ ಪ್ರವೇಶಿಸುವ ಸಾಧ್ಯತೆಯನ್ನು ಮಾಸ್ಕ್ ಕಡಿಮೆ ಮಾಡುತ್ತದೆ.
ಮಾಸ್ಕ್ ಯಾರು ಧರಿಸಬೇಕು?
* ಕಾಯಿಲೆಯ ಲಕ್ಷಣಗಳಿರುವವರು
* ಸಾರ್ವಜನಿಕ ಮತ್ತು ಜನಜಂಗುಳಿ ಸ್ಥಳದಲ್ಲಿ ಸಂಚರಿಸುವ ವ್ಯಕ್ತಿಗಳು
* ಕೊರೊನಾ ಫ್ರಂಟ್ ಲೈನ್ ಕೆಲಸಗಾರರು
* ಸೋಂಕು ಇರುವ ವ್ಯಕ್ತಿಗಳಿಗೆ ಆರೈಕೆ ಮಾಡುತ್ತಿರುವವರು
* ಸಂಪರ್ಕ ಮತ್ತು ಶಂಕಿತ ಪ್ರಕರಣಗಳು.
ಮಾಸ್ಕ್ ಯಾವಾಗ ಧರಿಸಬೇಕು? (ಆರೋಗ್ಯ ಸೇವಾ ಕಾರ್ಯಕರ್ತರು ಹೊರತುಪಡಿಸಿ)
* ಕೆಮ್ಮು ಅಥವಾ ಜ್ವರ ಇದ್ದಾಗ ಮೂರು ಪದರುಗಳುಳ್ಳ ವೈದ್ಯಕೀಯ ಮಾಸ್ಕ್ ನಿಮ್ಮಿಂದ ಇತರರಿಗೆ ಸೋಂಕು ಹರಡುವುದನ್ನು ತಡೆಗಟ್ಟುತ್ತದೆ. ಆದರೆ ಇತರರಿಗೆ ಸೋಂಕು ಹರಡದಿರಲು ನೀವು ನಿಮ್ಮ ಕೈಗಳನ್ನು ತೊಳೆಯುತ್ತಿರಬೇಕು.
* ವೈದ್ಯಕೀಯ ನೆರವು ನೀಡುವ ಕೇಂದ್ರಗಳಿಗೆ ಭೇಟಿ ನೀಡಿದಾಗ
* ಕಾಯಿಲೆ ಪೀಡಿತರಿಗೆ ನೀವು ಶುಶ್ರೂಷೆ ನೀಡುತ್ತಿರುವವರಿಗೆ
* ಸೋಂಕು ತಗುಲಿರುವ ಶಂಕೆ/ ಸೋಂಕು ತಗುಲಿದೆ ಎಂದು ಖಚಿತವಾಗಿರುವವರು ಮನೆಯಲ್ಲಿ ಆರೈಕೆ ಪಡೆಯುತ್ತಿದ್ದಲ್ಲಿ ಅವರ ಕುಟುಂಬದ ಸದಸ್ಯರು 3 ಪದರುಗಳುಳ್ಳ ವೈದ್ಯಕೀಯ ಮಾಸ್ಕ್ ಧರಿಸಬೇಕು.
ಮಾಸ್ಕ್ ಧರಿಸುವಾಗ ಅನುಸರಿಸಬೇಕಾದ ಅಂಶಗಳು
1. ಮಾಸ್ಕ್ ಧರಿಸುವಾಗ:
* ಮಾಸ್ಕ್ ತೆಗೆದುಕೊಳ್ಳುವ ಮೊದಲು ಕೈಗಳನ್ನು ಸಾಬೂನಿನಿಂದ ತೊಳೆದುಕೊಂಡು ಮುಟ್ಟಿ.
* ಮಾಸ್ಕ್ ಪದರುಗಳನ್ನು ಬಿಡಿಸಿ, ಪದರುಗಳು ಕೆಳ ಮುಖವಾಗಿರುವುದನ್ನು ನೋಡಿಕೊಳ್ಳಿ.
* ಮೂಗು, ಬಾಯಿ ಮತ್ತು ಗದ್ದದ ಭಾಗಗಳು ಮಾಸ್ಕ್ ನಿಂದ ಪೂರ್ಣವಾಗಿ ಮುಚ್ಚುವಂತೆ ಧರಿಸುವುದು.
* ಮಾಸ್ಕ್ ಧರಿಸದ ಮೇಲೆ ಪದೇ ಪದೇ ಮುಟ್ಟಿಕೊಳ್ಳದಿರುವುದು.
* ಕುತ್ತಿಗೆಯಿಂದ ಮಾಸ್ಕ್ ನೇತಾಡದಂತೆ ನೋಡಿಕೊಳ್ಳುವುದು.
* ಮಾಸ್ಕ್ ಒದ್ದೆಯಾದಲ್ಲಿ ಅಥವಾ ತೇವವಾದ್ರೆ ಕೂಡಲೇ ಬದಲಾಯಿಸಿ.
* ಒಮ್ಮೆ ಬಳಸುವಂತಹ ಮಾಸ್ಕ್ ಗಳನ್ನು ಯಾವುದೇ ಕಾರಣಕ್ಕೂ ಪುನರ್ಬಳಕೆ ಮಾಡಬಾರದು. (ಪುನರ್ ಬಳಸಬಹುದಾದವುಗಳನ್ನು ಹೊರತುಪಡಿಸಿ)
2. ಮಾಸ್ಕ್ ತೆಗೆಯುವಾಗ
* ಮಾಸ್ಕ್ ಮುಂಭಾಗವನ್ನು ಮುಟ್ಟದೇ ಲೇಸ್ ಗಳನ್ನು ಹಿಡಿದು ಹಿಂಭಾಗದಿಂದ ತೆಗೆಯಬೇಕು.
* ಕೆಳಗಿನ ಲೇಸ್ ಸಡಿಲಿಸಿ ನಂತರ ಮೇಲಿನ ಲೇಸ್ ಸಡಿಲಗೊಳಿಸಿ.
* ಹಿಂಭಾಗದ ಲೇಸ್ ಹಿಡಿದುಕೊಂಡು ಮಾಸ್ಕ್ ತೆಗೆಯಿರಿ. (ಎಚ್ಚರ ಮಾಸ್ಕ್ ಮುಂಭಾಗ ನಿಮ್ಮ ಮೂಗು, ಬಾಯಿ ಅಥವಾ ಕೈಯನ್ನು ಸ್ಪರ್ಶಿಸದಂತೆ ನೋಡಿಕೊಳ್ಳಿ)
3. ಮಾಸ್ಕ್ ವಿಲೇವಾರಿ ಮಾಡುವುದು
* ಮಾಸ್ಕ್ ತೆಗೆದ ನಂತರ ಅದರ ಮೇಲ್ಮೈಯನ್ನು ಅತಾಚುರ್ಯದಿಂದ ಮುಟ್ಟಿದಾಗ ಕೂಡಲೇ ಸೋಪ್/ ಸ್ಯಾನಿಟೈಸರ್/ ಬಿಸಿ ನೀರಿನಿಂದ ಕೈಗಳನ್ನು ತೊಳೆದುಕೊಳ್ಳಿ.
* ಮಾಸ್ಕ್ ಸರಿಯಾಗಿ ಡಸ್ಟ್ ಬಿನ್ ನಲ್ಲಿ ಎಸೆಯಿರಿ.
* ಪುನಃ ಬಳಸಬಹುದಾದ ಮಾಸ್ಕ್ ಆಗಿದ್ರೆ, ಅದನ್ನು ಸೋಪಿನ ನೀರಿನಲ್ಲಿ 30 ನಿಮಿಷಗಳ ಕಾಲ ಹುದುಗಿಸಿ. ನಂತರ ತೊಳೆದು ಚೆನ್ನಾಗಿ ಒಣಗಿಸಿ ಬಳಸಬೇಕು.