ಬೆಂಗಳೂರು: ಅನ್‍ಲಾಕ್-2 ಅವಧಿಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರಿ ಉದ್ಯೋಗಿಗಳ ಬಳಕೆ ಮಾಡಿಕೊಳ್ಳಲು ಸರ್ಕಾರ ಮಹತ್ವ ನಿರ್ಧಾರವನ್ನು ಮಾಡಿದೆ.
ಕೋವಿಡ್ ನಿಯಂತ್ರಣ ಮಾಡಲು ಉದ್ದೇಶಕ್ಕಾಗಿ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಪ್ರಯತ್ನಗಳನ್ನು ಹೆಚ್ಚಿಸುವ ಅಗತ್ಯವಿರುವ ಕಾರಣ ಸರ್ಕಾರಿ ಉದ್ಯೋಗಿಗಳ ಬಳಕೆಗೆ ಸರ್ಕಾರ ಮುಂದಾಗಿದೆ. ಆದ್ದರಿಂದ ರಾಜ್ಯದ ಎಲ್ಲಾ ಇಲಾಖೆಯ, ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ 50 ವರ್ಷ ಒಳಗಿನ ಅಧಿಕಾರಿಗಳು, ಸಿಬ್ಬಂದಿಗಳ ಮಾಹಿತಿ ನೀಡಲು ಸೂಚನೆ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಆದೇಶ ನೀಡಿದ್ದಾರೆ.
ಇಲಾಖೆಗಳಲ್ಲಿ ಶೇ.25 ರಿಂದ 50ಕ್ಕಿಂತ ಹೆಚ್ಚದಂತೆ ಉದ್ಯೋಗಿಗಳನ್ನು ಇಲಾಖೆಯ ಕೆಲಸಕ್ಕೆ ಉಳಿಸಿಕೊಳ್ಳಬಹುದಾಗಿದೆ. ಗರ್ಭಿಣಿ, ಬಾಣಂತಿಯರು ಹಾಗೂ ವಿಕಲಚೇತರನ್ನು ಹೊರತುಪಡಿಸಿ ಉಳಿದವರು ವಿಪತ್ತು ನಿರ್ವಹಣಾ ಕಾಯ್ದೆಯ ಆದೇಶದಲ್ಲಿ ಕೆಲಸ ನಿರ್ವಹಿಸಬೇಕು ಮತ್ತು ಯಾವುದೇ ವಿನಾಯಿತಿ ಲಭ್ಯವಿರುವುದಿಲ್ಲ ಎಂದು ಸೂಚಿಸಲಾಗಿದೆ.
ಬೆಂಗಳೂರು, ಬೆಂಗಳೂರು ಸುತ್ತಮುತ್ತ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ವಾಸವಾಗಿರುವ ಅಧಿಕಾರಿಗಳು, ಸಿಬ್ಬಂದಿಗಳ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ನಾಳೆ ಸಂಜೆ 5 ಗಂಟೆ ಒಳಗೆ ಬಿಬಿಎಂಪಿ ಆಯುಕ್ತರ ಇ-ಮೇಲ್ ಗೆ ಮಾಹಿತಿ ನೀಡುವಂತೆ ಎಲ್ಲಾ ಇಲಾಖೆ ಮುಖ್ಯಸ್ಥರಿಗೆ ಸಿಎಸ್ ವಿಜಯ್ ಭಾಸ್ಕರ್ ಸೂಚನೆ ನೀಡಿದ್ದಾರೆ.