Breaking News

ಕಬ್ಬಿನ ಬಾಕಿ ಹಣ ನೀಡದ 13 ಕಾರ್ಖಾನೆಗಳು ರೊಚ್ಚಿಗೆದ್ದ ಬಾಗಲಕೋಟೆ ರೈತರಿಂದ ಕಬ್ಬು ಕಟಾವು ಸ್ಥಗಿತಕ್ಕೆ ಕರೆ

Spread the love

ಕಬ್ಬಿನ ಬಾಕಿ ಹಣ ನೀಡದ 13 ಕಾರ್ಖಾನೆಗಳುರೊಚ್ಚಿಗೆದ್ದ ಬಾಗಲಕೋಟೆ ರೈತರಿಂದ ಕಬ್ಬು ಕಟಾವು ಸ್ಥಗಿತಕ್ಕೆ ಕರೆ13 ಸಕ್ಕರೆ ಕಾರ್ಖಾನೆಗಳಿಂದ 4-5 ತಿಂಗಳಿಂದ ಬಾಕಿ ಬಿಲ್ ಪಾವತಿ ವಿಳಂಬ
ಅ 23 ರಂದು ಬಾಗಲಕೋಟೆ ಡಿಸಿ ಕಬ್ಬು ಬೆಳೆಗಾರರ ಸಭೆಹಳೆಯ ಬಾಕಿ ಹಣ ತೀರಿಸಲು ರೈತರ ಆಗ್ರಹ
ಸಮಸ್ಯೆ ಬಗೆಹರಿಯುವವರೆಗೂ ಕಬ್ಬು ಕಟಾವು ಮಾಡದಂತೆ ಕರೆ
ಬಾಗಲಕೋಟೆ ಜಿಲ್ಲೆಯ 13 ಸಕ್ಕರೆ ಕಾರ್ಖಾನೆಗಳು ಕಳೆದ ಡಿಸೆಂಬರ್ ತಿಂಗಳಲ್ಲಿ ಕಳುಹಿಸಿದ ಕಬ್ಬಿನ ಬಹುತೇಕ ಬಿಲ್‌ಗಳನ್ನು ನಾಲ್ಕರಿಂದ ಐದು ತಿಂಗಳು ಕಳೆದರೂ ಪಾವತಿಸದಿರುವುದರಿಂದ ಕಬ್ಬು ಬೆಳೆಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣ ಕೊಡಿಸುವವರೆಗೂ ಯಾರೊಬ್ಬ ರೈತರೂ ಕಬ್ಬು ಕಟಾವು ಮಾಡಬಾರದು ಎಂದು ಕರೆ ನೀಡಲಾಗಿದೆ.
ನಿಯಮಾನುಸಾರ ಕಬ್ಬು ಕಟಾವು ಮಾಡಿದ 15ದಿನಗಳೊಳಗೆ ಬಿಲ್ ಪಾವತಿಸಬೇಕಿದ್ದ ಕಾರ್ಖಾನೆಗಳು ಪ್ರತಿ ಬಾರಿಯೂ ರೈತರಿಗೆ ಸತಾಯಿಸಿ ನಿಯಮ ಉಲ್ಲಂಘಿಸುತ್ತಿವೆ. ಈ ಹಿನ್ನೆಲೆಯಲ್ಲಿ ಡಿಸೆ ವಿಠಲ್ ಕೂಡಲಗಿ ಅವರು ಅಕ್ಟೋಬರ್ 23 ರಂದು ಕಬ್ಬು ಬೆಳೆಗಾರರ ಸಭೆ ಕರೆದು ಆದೇಶ ನೀಡಿದ್ದಾರೆ.
ಮುಧೋಳ ಭಾಗದ ರೈತರು ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ. ರಾಜ್ಯ ರೈತ ಸಂಘದ ಮುಖಂಡ ಈರಪ್ಪ ಹಂಚಿನಾಳ ಅವರು ಸಹ ರೈತರು ಸಭೆಗೆ ಬರುವಂತೆ ಕರೆ ನೀಡಿದ್ದಾರೆ.
ಈ ಹಿಂದಿನ ಬಾಕಿ ಹಣಗಳಾದ 2018-19 ರ ಎರಡನೇ ಕಂತಿನ₹175 ಮತ್ತು 2021-22 ರ ಎರಡನೇ ಕಂತಿನ ₹62 ಬಾಕಿ ಹಣವನ್ನು ತಕ್ಷಣ ತೀರಿಸುವಂತೆ ರೈತರು ಆಗ್ರಹಿಸಿದ್ದಾರೆ. ಜೊತೆಗೆ 2023-24ನೇ ಸಾಲಿನ ಸರ್ಕಾರ ನಿಗದಿಪಡಿಸಿದ ₹150 ಹಣವನ್ನು ಅಧಿಕಾರಿಗಳು ಕೊಡಿಸಬೇಕು ಹಾಗೂ ಪ್ರಸ್ತುತ ಹಂಗಾಮಿನ ಕಬ್ಬಿನ ಬೆಲೆಯನ್ನು ಸಹ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾ ಅಧಿಕಾರಿಗಳು ಎಲ್ಲಾ ಸಮಸ್ಯೆಗಳನ್ನು ಚರ್ಚಿಸಿ, ತೀರ್ಮಾನ ಮಾಡಿ ಸರ್ಕಾರಿ ಹಣ ಕೊಡಿಸುವವರೆಗೂ ಯಾರೊಬ್ಬ ರೈತರೂ ಕಬ್ಬು ಕಟಾವು ಮಾಡಬಾರದು ಎಂದು ರೈತ ಸಂಘಟನೆಗಳು ಕರೆ ನೀಡಿದ್ದು, ಬಿಲ್ ಪಾವತಿಸದಿದ್ದಕ್ಕೆ ರೊಚ್ಚಿಗೆದ್ದ ಅನ್ನದಾತರು ಸಭೆಯಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.

Spread the love

About Laxminews 24x7

Check Also

ಪಟಾಕಿ ತಾಗಿದ್ದಕ್ಕೆ ಸಿಡಿಮಿಡಿ; ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ

Spread the loveಬೆಂಗಳೂರು: ಪಟಾಕಿ ಕಿಡಿ ತಾಗಿದ್ದಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಇಬ್ಬರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ