Breaking News

ಸಿಜೆಐ ಮೇಲೆ ಶೂ ಎಸೆಯಲು ಯತ್ನ… ಕರ್ನಾಟಕ ದಲಿತ ಯುವ ಸಂಘಟನೆ ಮತ್ತು ಛಲವಾದಿ ಯುವ ಸಂಘಟನೆಯಿಂದ ಪ್ರತಿಭಟನೆ

Spread the love

ಸಿಜೆಐ ಮೇಲೆ ಶೂ ಎಸೆಯಲು ಯತ್ನ…
ಕರ್ನಾಟಕ ದಲಿತ ಯುವ ಸಂಘಟನೆ ಮತ್ತು ಛಲವಾದಿ ಯುವ ಸಂಘಟನೆಯಿಂದ ಪ್ರತಿಭಟನೆ
ಸಿಜೆಐ ಮೇಲೆ ಶೂ ಎಸೆಯಲು ಯತ್ನ…
ರಾಕೇಶ್ ಕಿಶೋರ್ ಕೃತ್ಯಕ್ಕೆ ಖಂಡನೆ
ಕರ್ನಾಟಕ ದಲಿತ ಯುವ ಸಂಘಟನೆ ಮತ್ತು
ಛಲವಾದಿ ಯುವ ಸಂಘಟನೆಯಿಂದ ಪ್ರತಿಭಟನೆ
ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನ ಕೃತ್ಯವನ್ನು ಖಂಡಿಸಿ ಕರ್ನಾಟಕ ದಲಿತ ಯುವ ಸಂಘಟನೆ ಮತ್ತು ಛಲವಾದಿ ಯುವ ಸಂಘಟನೆಯ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ಶುಕ್ರವಾರದಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತಲುಪಿ ಈ ಕುರಿತಾದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು.
ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನ ಕೃತ್ಯವನ್ನು ಖಂಡಿಸುತ್ತೇವೆ. ಇದು ಕೇವಲ ನ್ಯಾಯಮೂರ್ತಿಗೆ ಅಲ್ಲ. ದೇಶದ ಜನಾಂಗಕ್ಕೆ ಆದ ಅವಮಾನವಾಗಿದೆ. ಭಾರತೀಯ ಸಂವಿಧಾನಕ್ಕೆ ಅಗೌರವ ತೋರುವ ಕೃತ್ಯ ಇದಾಗಿದ್ದು, ರಾಷ್ಟ್ರಪತಿಗಳು ರಾಕೇಶ್ ಕಿಶೋರ ವಿರುದ್ಧ ಕಠಿಣ ಕ್ರಮಕೈಗೊಂಡು ಗಡಿಪಾರು ಮಾಡಬೇಕೆಂದು ಮಹೇಶ್ ಕೋಲಕಾರ ಆಗ್ರಹಿಸಿದರು.
ವಕೀಲ ರಾಕೇಶ್ ಕಿಶೋರ್ ಕೇವಲ ಸಿಜೆಐ ಅವರನ್ನಷ್ಟೇ ಅಪಮಾನ ಮಾಡದೇ, ಇಡೀ ಸಮುದಾಯವನ್ನು ದೇಶದ ಸಂವಿಧಾನವನ್ನು ಅಪಮಾನಿಸಿದೆ. ರಾಕೇಶ್ ಕಿಶೋರ್ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಮಲ್ಲೇಶ ಕುರಂಗಿ ಹೇಳಿದರು. 
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಯುವ ಸಂಘಟನೆ ಮತ್ತು ಛಲವಾದಿ ಯುವ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ಧರು.

Spread the love

About Laxminews 24x7

Check Also

ಮನೆಯಲ್ಲೇ ಬಾಲಕಿ, ಯುವಕ ಆತ್ಮಹತ್ಯೆಗೆ ಶರಣು: ಮೃತದೇಹ ತೆರವುಗೊಳಿಸಿದ ಸಮಾಜ ಸೇವಕ ನಿತ್ಯಾನಂದ‌ ಒಳಕಾಡು

Spread the loveಉಡುಪಿ: ಯುವಪ್ರೇಮಿಗಳಿಬ್ಬರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ಗುರುವಾರ ಸಂಜೆ ನಡೆದಿದೆ. ಉಡುಪಿ ನಗರದ ಅಂಬಲಪಾಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ