ಚಾಮರಾಜನಗರ: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಯುಕ್ತ ಚಾಮರಾಜನಗರದಲ್ಲಿ ಮೂರು ದಿನಗಳ ಕಾಲ ನಡೆಸುತ್ತಿದ್ದ ಚಾಮರಾಜನಗರ ದಸರಾವನ್ನು ಈ ಬಾರಿ ಕೈ ಬಿಟ್ಟಿದ್ದು, ಸಿಎಂ ಸಿದ್ದರಾಮಯ್ಯ ಅವರೇ ಚಾಮರಾಜನಗರದಲ್ಲಿ ದಸರಾ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಅಸಮಾಧಾನಗೊಂಡ ಕನ್ನಡಪರ ಹೋರಾಟಗಾರರು ಚಾಮರಾಜನಗರ ದಸರಾ ಮಾಡಲು ಮುಂದಾಗಿದ್ದಾರೆ.
ಹೌದು, ಸರ್ಕಾರ ಜಿಲ್ಲಾ ದಸರಾ ಆಚರಣೆ ಕೈ ಬಿಟ್ಟ ಹಿನ್ನೆಲೆ ಕನ್ನಡಪರ ಹೋರಾಟಗಾರ ಚಾ.ರಂ. ಶ್ರೀನಿವಾಸಗೌಡ ನೇತೃತ್ವದಲ್ಲಿ ಚಾಮರಾಜನಗರ ದಸರಾ ಆಚರಣೆ ಮಾಡಲು ಸಿದ್ದತೆ ಮಾಡಿಕೊಂಡಿದ್ದು ಚಾಮರಾಜೇಶ್ವರ ದೇಗುಲ ಮುಂಭಾಗ ಪ್ರತಿದಿನ ಸಂಜೆ 6 ರಿಂದ ರಾತ್ರಿ 9ರ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಈ ಸಂಬಂಧ, ಕಳೆದ ಶುಕ್ರವಾರ ಹೋರಾಟಗಾರರು, ಕಲಾವಿದರು, ಚಿಂತಕರು ಪೋಸ್ಟರ್ ಕೂಡ ಬಿಡುಗಡೆ ಮಾಡಿ ಸರ್ಕಾರಕ್ಕೆ ಸಡ್ಡು ಹೊಡೆದಿದ್ದರು.