Breaking News

ಶಿಕ್ಷಕರ ವೃತ್ತಿ, ಕೇವಲ ಉದ್ಯೋಗವಲ್ಲ; ಅದು ಪವಿತ್ರ ಧರ್ಮ

Spread the love

ಶಿಕ್ಷಕರ ವೃತ್ತಿ, ಕೇವಲ ಉದ್ಯೋಗವಲ್ಲ; ಅದು ಪವಿತ್ರ ಧರ್ಮ, ಸಮಾಜದ ಭವಿಷ್ಯ ಕಟ್ಟುವ ಮಹಾಯಜ್ಞ. ಒಬ್ಬ ವೈದ್ಯನು ರೋಗಿಯನ್ನು ಚಿಕಿತ್ಸೆ ಕೊಡುತ್ತಾನೆ, ವಕೀಲನು ನ್ಯಾಯ ಕೊಡಿಸುತ್ತಾನೆ, ಆದರೆ ಒಬ್ಬ ಶಿಕ್ಷಕನು ಒಳ್ಳೆಯ ವೈದ್ಯ, ಒಳ್ಳೆಯ ವಕೀಲ, ಒಳ್ಳೆಯ ನಾಯಕ, ಒಳ್ಳೆಯ ನಾಗರಿಕನನ್ನು ತಯಾರು ಮಾಡುತ್ತಾನೆ.
ಶಿಕ್ಷಕರು ಜ್ಞಾನವನ್ನಷ್ಟೇ ಅಲ್ಲ, ಮೌಲ್ಯಗಳು, ಶಿಸ್ತು, ಮಾನವೀಯತೆ, ಹಾಗೂ ಜೀವನದ ನೈಜ ಅರ್ಥವನ್ನು ಬೋಧಿಸುತ್ತಾರೆ ಎಂದು ಯಡೂರಿನ ಶ್ರೀ ಸಿದ್ದಲಿಂಗಶಿವಾಚಾರ್ಯ ವೇದಗಮ ಸಂಸ್ಕೃತಿ ಶಾಲೆಯ ಪ್ರಾಚಾರ್ಯರಾದ ಶ್ರೀಶೈಲ್ ಶಾಸ್ತಿçಗಳು ಹೇಳಿದರು.
ಶುಕ್ರವಾರ ರಂದು ಶಿಕ್ಷಕರ ದಿನಾಚರಣೆಯನ್ನು ಕಾಗವಾಡ ತಾಲ್ಲೂಕಿನ ಉಗಾರ ಖುರ್ದ ಪಟ್ಟಣದ ಜೈನ ಸಮಾಜ ಮಂಡಳ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲಾ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು.
ದಿವ್ಯಸಾನಿಧ್ಯ ವಹಿಸಿ ಶ್ರೀಶೈಲ್ ಶಾಸ್ತಿçಗಳು ಮುಂದೆವರೆದು ಮಾತನಾಡುವಾಗ, ಶಿಕ್ಷಕರ ಕರ್ತವ್ಯ ಕೇವಲ ಪಾಠ ಹೇಳಿಕೊಡುವುದಲ್ಲ; ವಿದ್ಯಾರ್ಥಿಯನ್ನು ಶಾಲೆಗೆ ಆಕರ್ಷಿಸುವುದು, ಅವನಲ್ಲಿರುವ ಸಾಮರ್ಥ್ಯ ಹೊರತರುವುದು ಮತ್ತು ಸಮಾಜಕ್ಕೆ ಒಳ್ಳೆಯ ನಾಗರಿಕನನ್ನಾಗಿ ರೂಪಿಸುವುದು ನಮ್ಮ ನಿಜವಾದ ಸೇವೆಯೆಂದರು.
ಸಮಾರAಭದ ಅಧ್ಯಕ್ಷತೆ ಕಾಗವಾಡ ತಹಶೀಲ್ದಾರ ರವೀಂದ್ರ ಹಾದಿಮನಿ ವಹಿಸಿದರು. ಉಪನ್ಯಾಸಕರಾಗಿ ಮೂಡಲಗಿ ತಾಲ್ಲೂಕಿನ ಮಕ್ಕಳ ಸಾಹಿತಿ ಹಾಗೂ ನಿವೃತ್ತ ಪ್ರಾಚಾರ್ಯ ಸಂಗಮೇಶ ಗುಜಗೊಂಡ ಅವರು ಮಾತನಾಡಿ, ಪ್ರತಿವರ್ಷ ಸೆಪ್ಟೆಂಬರ್ ೫ರಂದು ದೇಶದಾದ್ಯಂತ ಶಿಕ್ಷಕರ ದಿನಾಚರಣೆ ಉತ್ಸಾಹಭರಿತವಾಗಿ ನಡೆಯುತ್ತದೆ. ಈ ದಿನವನ್ನು ಭಾರತದ ದ್ವಿತೀಯ ರಾಷ್ಟ್ರಪತಿ ಹಾಗೂ ಮಹಾನ್ ತತ್ತ್ವಜ್ಞಾನಿ ಡಾ. ಎಸ್. ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತದೆ.
ಅವರು ತಮ್ಮ ಜೀವನವನ್ನು ಶಿಕ್ಷಣ, ಜ್ಞಾನಪ್ರಚಾರ ಹಾಗೂ ಮೌಲ್ಯಾಧಾರಿತ ಸಮಾಜ ನಿರ್ಮಾಣಕ್ಕೆ ಮೀಸಲಿಟ್ಟ ಮಹಾನ್ ಗುರುಗಳಾಗಿದ್ದರು. ಅವರ ಆದರ್ಶಗಳು ನಮಗೆಲ್ಲ ಶಿಕ್ಷಕರಿಗೆ ದೀಪಸ್ತಂಭದAತಿವೆ. ನಾವು ಆ ಆದರ್ಶಗಳನ್ನು ಪಾಲಿಸಿಕೊಂಡು ವಿದ್ಯಾರ್ಥಿಗಳನ್ನು ಒಳ್ಳೆಯ ನಾಗರಿಕರನ್ನಾಗಿ ಮಾಡೋಣ. ಸರಕಾರಿ ಶಾಲೆಗಳ ಉಳಿವು ಹಾಗೂ ಮಕ್ಕಳ ಹಾಜರಾತಿ ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ. ಮದಬಾವಿ ಅವರು ಸ್ವಾಗತಿಸಿ ಮಾತನಾಡುತ್ತಾ, ಕಾಗವಾಡ ತಾಲ್ಲೂಕಿನ ಎಲ್ಲಾ ಶಿಕ್ಷಕರು ತಮ್ಮ ವೃತ್ತಿಯಲ್ಲಿ ಒಳ್ಳೆ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಕಾಗವಾಡ ವಲಯವು ಜಿಲ್ಲೆಯಲ್ಲಿ ಆದರ್ಶ ವಲಯವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕರಾಗಿ ಉಗಾರ ಬುದ್ರುಕ ಶಾಸಕರ ಮಾದರಿ ಶಾಲೆಯ ಮುಖ್ಯಾಧ್ಯಾಪಿಕೆ ಆಶಾ ಬಾಳಾಸಾಹೇಬ ಕಮತೆ, ತಾಲೂಕಾ ಆದರ್ಶ ಶಿಕ್ಷಕರಾಗಿ ಸುರೇಖಾ ಗಡೆನ್ನವರ, ಅಶೋಕ ಮಾನೆ, ಹಾಗೂ ೨೪ ನಿವೃತ್ತ ಶಿಕ್ಷಕರನ್ನು ಅತಿಥಿಗಳಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಉಗಾರ ಪುರಸಭೆ ಅಧ್ಯಕ್ಷೆ ಫಾತಿಮಾ ನದಾಫ್, ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, ಸಿಡಿಪಿಓ ರವೀಂದ್ರ ಗುದಗೆನ್ನವರ, ಜೈನ ಸಮಾಜ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಣ್ಣಾಸಾಹೇಬ ದೇವಮೋರೆ, ದೈಹಿಕ ಶಿಕ್ಷಕ ಪರಿವೇಕ್ಷಕ ಎಂ.ವೈ. ಪೂಜಾರಿ, ಶಿಕ್ಷಕ ಸಂಘಟನೆಯ ಅಧ್ಯಕ್ಷ ಎಂ.ಜಿ. ಸಂಕಪಾಳ, ರಾಜ್ಯ ನೌಕರರ ಸಂಘದ ಅಧ್ಯಕ್ಷ ಎಸ್.ಎಸ್. ಭಾವಿ, ಮಾಜಿ ಅಧ್ಯಕ್ಷ ಗೌಡಪ್ಪ ಸಡ್ಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರು, ಸಂಘಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಹಿರಿಯ ಶಿಕ್ಷಕರಾದ ಮಹೇಶ ಹುಲ್ಲೋಳಿ, ಭರತ ಟೋನಗೆ ಇವರು ನಿರೂಪಿಸಿದರು. ಶ್ರೀಶೈಲ್ ಮಾಳಿ ವಂದಿಸಿದರು.

Spread the love

About Laxminews 24x7

Check Also

ಬೆಳಗಾವಿಯ ರಾಜಾ…ಚವ್ಹಾಟಗಲ್ಲಿಯ ಗಣೇಶನ ದರ್ಶನ ಪಡೆದ ಹೆಸ್ಕಾಂ ಅಧಿಕಾರಿಗಳು

Spread the love ಬೆಳಗಾವಿಯ ರಾಜಾ…ಚವ್ಹಾಟಗಲ್ಲಿಯ ಗಣೇಶನ ದರ್ಶನ ಪಡೆದ ಹೆಸ್ಕಾಂ ಅಧಿಕಾರಿಗಳು ಬೆಳಗಾವಿಯ ರಾಜಾ…ಚವ್ಹಾಟಗಲ್ಲಿಯ ಗಣೇಶ ದರ್ಶನ ಪಡೆದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ