ಕೂಡ್ಲಿಗಿ : ಪಟ್ಟಣ ಸೇರಿದಂತೆ ತಾಲೂಕಿನ್ನೆಲೆಡೆಗಳಲ್ಲಿ ಸ್ನೇಹಿತರ ದಿನಾಚರಣೆ-ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣ ಸೇರಿದಂತೆ ತೂಲೂಕಿನೆಲ್ಲೆಡೆಗಳಲ್ಲಿ ,
ವಿಶ್ವ ಸ್ನೇಹಿತರ ದಿನಾಚರಣೆಯನ್ನು ಬಹು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರತಿ ವರ್ಷದ ಆಗಸ್ಟ್ ಮೊದಲನೆ ಭಾನುವಾರದಂದು , ” ವಿಶ್ವ ಸ್ನೇಹಿತರ ದಿನಾಚರಣೆ ” ಆಚರಿಸುವ ಹಿನ್ನಲೆಯಲ್ಲಿ. ಭಾನುವಾರ ಪಟ್ಟಣದೆಲ್ಲೆಡೆಗಳಲ್ಲಿ ಬಾಲ ಬಾಲೆಯರು , ಯುವಕರು ಯುವತಿಯರು , ವಿದ್ಯಾರ್ಥಿಗಳು ಪಟ್ಟಣದಲ್ಲೆಡೆ ಸೇರಿದಂತೆ. ತಾಲೂಕಿನಾಧ್ಯಂತ ಸ್ನೇಹಿತರ ಕೈಪಟ್ಟಿಯನ್ನು ಖರೀದಿ ಮಾಡಿ , ತಮ್ಮ ಆತ್ಮೀಯ ಸ್ನೇಹಿತರಿಗೆ ಕಟ್ಟಿ ಶುಭ ಕೋರಿದ್ದಾರೆ. ನೆರೆ – ಹೊರೆಯ ತರಗತಿಯ , ಪರಿಚಯಸ್ಥ ,
ಸಹಪಾಠಿ ಸ್ನೇಹಿತರನ್ನು ಖುದ್ದು ಭೇಟಿಯಾಗಿ, ಅವರಿಗೆ ಸಿಹಿ ತಿನಿಸಿ ಆತ್ಮೀಯತೆಯಿಂದ ಆಲಂಗಿಸಿಕೊಂಡು ಅವರ ಕೈಗೆ ಸ್ನೇಹಿತರ ಕೈಪಟ್ಟಿ ಕಟ್ಟಿ ಶುಭ ಹಾರೈಸಿದರು. ಮೇಲು – ಕೀಳು ಜಾತಿ ಮತ ಪಂಥ ಧರ್ಮ ಲಿಂಗ ಭೇದ ಭಾವ ಮರೆತು , ಬಹು ಸಂತೋಷದಿಂದ ನಿರ್ಮಲವಾದ ಉಲ್ಲಾಸದಿಂದ. ತಮ್ಮ ತಮ್ಮ ಸ್ನೇಹಿತರಿಗೆ ಸ್ನೇಹಿತರ ಕೈಪಟ್ಟಿಯನ್ನು ಕಟ್ಟಿ ಶುಭ ಕೋರುವ ಮೂಲಕ , ವಿಶ್ವ ಸ್ನೆಹಿತರ ದಿನಾಚರಣೆ ಆಚರಿಸಲಾಯಿತು.