ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಈ ಕುರಿತು ನಗರದಲ್ಲಿಂದು ಮಾತನಾಡಿದ ಅವರು, ಎಲ್ಲವೂ ನಿನ್ನೆಗೆ ಮುಗಿದು ಹೋಯ್ತಲ್ಲ?. ಸುಪ್ರೀಂ ಕೋರ್ಟ್ನಿಂದಲೇ ಜಡ್ಜ್ ಮೆಂಟ್ ಬಂದಿದೆ. ಇನ್ನು ಅದರ ಬಗ್ಗೆ ಮಾತನಾಡೋದೇನಿದೆ?. ಕ್ಲಿಯರ್ ಆಗಿದೆ. 2028ರವರೆಗೆ ನಾನೇ ಸಿಎಂ ಅಂದಿದ್ದಾರೆ. 2028ರ ನಂತರವೂ ಅವರೇ ಲೀಡ್ ಮಾಡ್ತಾರೆ. ಅವರೇ ಸಿಎಂ ಆಗ್ತಾರೆ ಅಂತ ಹೇಳಲ್ಲ. ಸಿದ್ದರಾಮಯ್ಯ ರಾಜಕೀಯದಲ್ಲಿ ಇರುತ್ತಾರೆ. ಅವರ ನೇತೃತ್ವದಲ್ಲೇ ಚುನಾವಣೆ ನಡೆಯುತ್ತದೆ. 2028ರ ಚುನಾವಣೆಗೆ ಅವರು ನಿಲ್ಲಲ್ಲ ಅಂದಿದ್ದಾರೆ. ಅಲ್ಲಿಯವರೆಗೆ ಸಿಎಂ ಚರ್ಚೆ ಇಲ್ಲ. ಸಿಎಂ ಹೇಳಿದ ಮೇಲೆ ಮುಗೀತು ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು. ಈ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದೇವೆ. ಪದೇ ಪದೇ ಹೇಳುವ ಅವಶ್ಯಕತೆ ಇಲ್ಲ. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದೆ. ನಾಯಕರು ಸೂಕ್ತ ನಿರ್ಧಾರ ಮಾಡ್ತಾರೆ. ನಾವು 2028ಕ್ಕೆ ಸಿಎಂ ಆಕಾಂಕ್ಷಿ ಅಂತ ಹೇಳಿದ್ದೇವೆ. ಅದರಲ್ಲಿ ತಪ್ಪೇನಿದೆ?. ಈಗ ಸಿಎಂ ಬದಲಾವಣೆ ಇಲ್ಲ ಅಂತ ತೀರ್ಪು ಬಂದಿದೆ. ಸುಪ್ರೀಂನಿಂದಲೇ ಬಂದ ಮೇಲೆ ಇನ್ನೇನಿದೆ. ಡಬಲ್ ಬೆಂಚ್ಗೆ ಹೋಗೋಕೆ ಅವಕಾಶವಿದೆ. ಈಗ ಎಲ್ಲವೂ ಸ್ಟಾಪ್ ಆಗಿದೆ. ನೀವು ಹೆಚ್ಚು ಮಾಡಿದ್ರೆ ಹೆಚ್ಚಾಗುತ್ತದೆ. ಇಲ್ಲ ಎಲ್ಲವೂ ಅಲ್ಲಿಗೆ ಮುಗಿದು ಹೋಗುತ್ತದೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಭೇಟಿ ಮಾಡಿ ನಿನ್ನೆ ಹೇಳಿದ್ದೇನೆ. ಮತ್ತೆ ಹೇಳುವುದೇನಿಲ್ಲ. ನಿನ್ನೆ ಊಟಕ್ಕೆ ಸೇರಿದ್ವಿ, ವಿಶೇಷ ಏನಿಲ್ಲ. ಹಿಂದೆ ಕೂಡ ಖರ್ಗೆ ಭೇಟಿ ಮಾಡಿದ್ದೆವು. ನಾವು ಆಗಾಗ ಭೇಟಿ ಮಾಡುತ್ತಿರುತ್ತೇವೆ. ಪಕ್ಷದ ಅಧ್ಯಕ್ಷರು ಅಂದ ಮೇಲೆ ಭೇಟಿ ಮಾಡಬೇಕಲ್ಲ?. ಭೇಟಿ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ಆಗಿಲ್ಲ. ಸಮಯ ಬಂದಾಗ ಹೈಕಮಾಂಡ್ ಮಾಡಲಿದೆ. ನಾವು ಈಗಾಗಲೇ ಹೇಳಬೇಕಾದ್ದನ್ನು ಹೇಳಿದ್ದೇವೆ ಎಂದು ತಿಳಿಸಿದರು
Laxmi News 24×7